ಯತ್ನಾಳ್ ತಲೆ ಸರಿಯಿಲ್ಲ, ನಾವೇ ನಿಮ್ಹಾನ್ಸ್ ಗೆ ಸೇರಿಸ್ತೀವಿ : ವಾಟಾಳ್
ಕೊಪ್ಪಳ : ಕನ್ನಡಪರ ಹೋರಾಟಗಾರರನ್ನು ರೋಲ್ ಕಾಲ್ ಹೋರಾಟಗಾರರು ಎಂದಿರುವ ಯತ್ನಾಳ್ ಗೆ ತಲೆ ಸರಿಯಿಲ್ಲ. ಅವರನ್ನು ನಾವೇ ನಿಮ್ಹಾನ್ಸ್‍ಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ ಎಂದು ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಕಿಡಿಕಾರಿದರು.
ರಾಜ್ಯದಲ್ಲಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಇಂದು ಕೊಪ್ಪಳದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಹಿಟ್ನಾಳ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಪ್ರತಿಭಟನೆ ನಡೆಸಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್, `ರೋಲ್ ಕಾಲ್ ಕನ್ನಡಪರ ಹೋರಾಟಗಾರರು’ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ತಲೆ ಸರಿಯಿಲ್ಲ.
ನಾವೇ ನಿಮ್ಹಾನ್ಸ್‍ಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತೇವೆ. ಈ ಹಿಂದೆ ಯಡಿಯೂರಪ್ಪ ಅವರನ್ನೇ ಬೈದಂತವರು, ಅವರ ತಂದೆ ತಾಯಿಗೂ ಬೈಯೋದಿಲ್ಲ ಎಂದು ಏನು ಗ್ಯಾರಂಟಿ ಎಂದು ಬೆಂಕಿಕಾರಿದರು.
ಅರಣ್ಯ ಇಲಾಖೆ ಅನುಮೋದನೆಗೆ ಯತ್ನಿಸಿ: ಅಧಿಕಾರಿಗಳಿಗೆ ಸಚಿವ ರಮೇಶ್ ಜಾರಕಿಹೊಳಿ ಸೂಚನೆ
ಇದೇ ವೇಳೆ ಸಾ ರಾ ಗೋವಿಂದು ಮಾತನಾಡಿ, ನಾವು ಮರಾಠಿಗರ ಮತ್ತು ಬೇರೆ ಯಾವ ಜಾರಿ ಸಮುದಾಯದ ವಿರುದ್ಧ ಅಲ್ಲ.
ಮರಾಠಿಗರ ಅಭಿವೃದ್ಧಿಗಾಗಿ 50 ಕೋಟಿ ಅಲ್ಲ ಸಾವಿರ ಕೋಟಿ ನೀಡಿ. ಅದರಿಂದ ನಿಕ್ಕರ್ ಪಂಚೆ ತೆಗೆದುಕೊಳ್ಳಕ್ಕೆ ಆಗಲ್ಲ. ಸಾವಿರ ಕೋಟಿ ಕೊಟ್ಟು ಅವರನ್ನ ಅಭಿವೃದ್ಧಿ ಮಾಡಿ ಅದಕ್ಕೆ ನಮಗೆ ವಿರೋಧವಿಲ್ಲ. ಆದರೆ ಮರಾಠಿ ಅಭಿವೃದ್ಧಿ ಪ್ರಾಧಿಕಾರ ಬೇಡ.
ಯಾಕೆಂದರೆ ಈಗ ಮರಾಠ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಿದ್ರೆ, ನಾಳೆ ತಮಿಳು, ತೆಲುಗು, ಮಲಯಾಳಿ, ಮಾರ್ವಾಡಿಯವರು ಬಂದು ಪ್ರಾಧಿಕಾರ ಕೇಳುತ್ತಾರೆ. ಹೀಗಾಗಿ ಕೂಡಲೇ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ಕೈ ಬಿಡಬೇಕೆಂದು ಆಗ್ರಹಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel










