ಬೆಂಗಳೂರು : ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ” ರಾಜ್ಯದ 25 ಸಂಸದರು ಎಲ್ಲಿ ಹೋಗಿದ್ದಾರೆ ಎಂದು ರಾಜ್ಯ ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂದು ರಾಜ್ಯ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಜನಧ್ವನಿ ಹೆಸರಲ್ಲಿ ಪ್ರತಿಭಟನೆ ನಡೆಸಿತು.
ಈ ವೇಳೆ ಮಾತನಾಡಿದ ಟ್ರಬಲ್ ಶೂಟರ್, ರಾಜ್ಯದ 25 ಬಿಜೆಪಿ ಸಂಸದರು ಎಲ್ಲಿ ಹೋಗಿದ್ದಾರೆ. ಪ್ರಧಾನಿಗಳ ಬಳಿ ನಿಯೋಗ ಕರೆದುಕೊಂಡು ಹೋಗಲಿ. ಕಳೆದ ವರ್ಷದ ನೆರೆ ಪರಿಹಾರ ಕೇಳಿದಷ್ಟು ಬಂದಿಲ್ಲ. ಈ ಬಾರಿಯಾದರೂ ಬಿಜೆಪಿಯ 25 ಸಂಸದರು ಪ್ರಧಾನಿಗೆ ಕೇಳಲಿ ಎಂದು ಒತ್ತಾಯಿಸಿದರು.
ಇದೇ ವೇಳೆ ಕೇಂದ್ರ ಕೋವಿಡ್ ಪ್ಯಾಕೇಜ್ ಬಗ್ಗೆ ಮಾತನಾಡಿದ ಡಿಕೆಶಿ, ಸರ್ಕಾರ ಘೋಷಣೆ ಮಾಡಿದ ಪರಿಹಾರ ಇನ್ನೂ ಸಿಕ್ಕಿಲ್ಲ. ಚಾಲಕರಿಗೆ 5,000 ರೂಪಾಯಿ ಪರಿಹಾರ ಇನ್ನು ಬಂದಿಲ್ಲ. ಪ್ರಧಾನಿ ಘೋಷಣೆ ಮಾಡಿದ 20 ಲಕ್ಷ ಕೋಟಿ ರೂ. ಯಾರಿಗೆ ಕೊಟ್ಟಿದ್ದಾರೆ ಎಂಬುದರ ಬಗ್ಗೆ ಮಾಹಿತಿ ನೀಡಲಿ. ಯಾರ್ಯಾರಿಗೆ ಹಣ ಕೊಟ್ಟಿದ್ದೀರಾ ಅಂತ ದಾಖಲೆ ಬಿಡುಗಡೆ ಮಾಡಲಿ. ಕೊರೊನಾದಿಂದ ಸಾಕಷ್ಟು ಜನರು ಸಮಸ್ಯೆ ಅನುಭವಿಸುತ್ತಿದ್ದಾರೆ. ಜನರ ಶಾಪ ಸರ್ಕಾರಕ್ಕೆ ತಟ್ಟುತ್ತೆ ಎಂದು ಗುಡುಗಿದರು.