ಚುನಾವಣೆಯಲ್ಲಿ ಸೋತವರಿಗೆ ಮಂತ್ರಿಸ್ಥಾನ ಯಾಕೆ : ರೇಣುಕಾಚಾರ್ಯ
ದಾವಣಗೆರೆ : ಶೀಘ್ರದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆಯಲಿದ್ದು, ಎಂಎಲ್ ಸಿ ಸಿ.ಪಿ.ಯೋಗೇಶ್ವರ್ ಅವರಿಗೆ ಸಚಿವಸ್ಥಾನ ಸಿಗುವ ಸಾಧ್ಯತೆಗಳಿವೆ.
ಈ ವಿಚಾರವಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಪ್ರತಿಕ್ರಿಯಿಸಿ, ಸೋತವರಿಗೆ ಸಚಿವ ಸ್ಥಾನ ನೀಡುವುದಕ್ಕೆ ನನ್ನ ವಿರೋಧವಿದೆ ಎಂದಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಜನರಿಂದ ನೇರವಾಗಿ ಆಯ್ಕೆಯಾದವರಿಗೆ ಸಚಿವ ಸ್ಥಾನ ನೀಡಿ. ಸೋತವರಿಗೆ ಸಚಿವ ಸ್ಥಾನ ನೀಡುವುದಕ್ಕೆ ನನ್ನ ವಿರೋಧವಿದೆ.
ನಾವು ಜಾರಕಿಹೊಳಿ ಮನೆಯಲ್ಲಿ ಸಭೆ ಸೇರಿದ್ದು ಸಿಪಿವೈಗೆ ಸಚಿವ ಸ್ಥಾನ ತಪ್ಪಿಸಲು ಅಲ್ಲ.
ಕಾಂಗ್ರೆಸ್ ಜನರ ಆಯ್ಕೆಯಲ್ಲ : `ಕೈ’ ನಾಯಕತ್ವದ ವಿರುದ್ಧ ಕಪಿಲ್ ಕಿಡಿ
ನಾವು ಸೇರಿದ್ದರ ಹಿಂದೆ ಬೇರೆ ಉದ್ದೇಶವಿದೆ ಎಂದು ಹೇಳುವ ಮೂಲಕ ಸಿಪಿ ಯೋಗೆಶ್ವರ್ ಸಚಿವ ಸ್ಥಾನ ನೀಡಲು ಎಂಪಿ ರೇಣುಕಾಚಾರ್ಯ ಅಪಸ್ವರ ಎತ್ತಿದ್ದಾರೆ.
ಅಧಿಕಾರ ದುರುಪಯೋಗ ವಿಷಯದಲ್ಲಿ ಕಾಂಗ್ರೆಸ್ ನಂಬರ್ ಒನ್ : ಸಿ.ಟಿ.ರವಿ
ಇದೇ ವೇಳೆ ಸಚಿವ ಸ್ಥಾನದ ಬಗ್ಗೆ ಮಾತನಾಡಿ, ಜಿಲ್ಲೆಯಲ್ಲಿರುವ ಎಲ್ಲ ಶಾಸಕ ಸಭೆ ಮಾಡಿ ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡುವಂತೆ ಸಿಎಂಗೆ ಒತ್ತಾಯ ಮಾಡಿದ್ದೇವೆ.
ಪಕ್ಷದ ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಪ್ರಾದೇಶಿಕ ಸಮತೋಲನದ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು.
ಬ್ಯಾಂಡ್ ಬಾರಿಸಿ ತಮಟೆ ಬಾರಿಸಿ ಬಾಯಿ ಬಡೆದುಕೊಂಡರೆ ಯಾರಿಗೂ ಸಚಿವ ಸ್ಥಾನ ಸಿಗಲ್ಲ.
ರಾಜಕೀಯವಾಗಿ ನಾವು ಯಾರು ಸನ್ಯಾಸಿಗಳಲ್ಲ. ಎಲ್ಲರೂ ಒಗ್ಗಟ್ಟಾಗಿ ಜಿಲ್ಲೆಗೆ ಸಚಿವ ಸ್ಥಾನ ಬೇಕು ಅಂತ ಕೇಳಿದ್ದೇವೆ.
ಮೂರು ಬಾರಿ ಶಾಸಕ ಆಗಿ ಆಯ್ಕೆಯಾಗಿದ್ದೇನೆ. ನಾನು ಸಚಿವ ಆಗಬೇಕು ಎಂದು ಜನರು ಆಸೆ ಪಡುತ್ತಿದ್ದಾರೆ.
ಮುಖ್ಯಮಂತ್ರಿಗಳ ಯಾವುದೇ ನಿರ್ಧಾರ ತಗೊಂಡರೂ ನಾವು ಬದ್ಧರಾಗಿದ್ದೇವೆ.
ಹೀಗಾಗಿ ಹಾದಿ ರಂಪ ಬೀದಿ ರಂಪ ಮಾಡೋದು ನಮಗೆ ಇಷ್ಟ ಇಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel