ರಾಜ್ಯ ಬಿಜೆಪಿಗೆ ಯಡಿಯೂರಪ್ಪನೇ ಸುಪ್ರೀಂ : ವದಂತಿಗಳಿಗೆ ಫುಲ್ ಸ್ಟಾಪ್
ಶಿವಮೊಗ್ಗ : ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಹೆಚ್ಚು ಕಾಲ ಮುಂದುವರಿಯಲ್ಲ. ಅವರು ಸಿಎಂ ಸ್ಥಾನದಲ್ಲಿರೋದು ಬಿಜೆಪಿಯ ಬಿಗ್ ಬಾಸ್ ಗಳಿಗೆ ಇಷ್ಟ ಇಲ್ಲ.
ಇನ್ನೇನು ಸಿಎಂ ಬದಲಾವಣೆ ಆಗಿಯೇಬಿಡ್ತು ಎನ್ನೋ ಮಾತುಗಳು ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿವೆ. ಇದೀಗ ಈ ಎಲ್ಲ ಚರ್ಚೆಗಳಿಗೆ ರಾಜ್ಯ ಬಿಜೆಪಿ ಉಸ್ತುವಾಗಿ ಅರುಣ್ ಸಿಂಗ್, ಕರ್ನಾಟಕ ಬಿಜೆಪಿಗೆ ಯಡಿಯೂರಪ್ಪನೇ ಸುಪ್ರೀಂ ಎನ್ನುವ ಮೂಲಕ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರಿಣಿ ಸಭೆ ನಡೆಯಿತು. ಈ ಸಭೆ ಬಳಿಕ ಮಾತನಾಡಿದ ಅರುಣ್ ಸಿಂಗ್, ರಾಜ್ಯದಲ್ಲಿ ಲೀಡರ್ ಶಿಫ್ ಬದಲಾವಣೆ ಅನಗತ್ಯ ಚರ್ಚೆ.
ಕಾಲಕ್ಕೆ ತಕ್ಕಂತೆ ಜೆಡಿಎಸ್ ಬದಲಾವಣೆ ಆಗುತ್ತೆ : ಹೆಚ್ ಡಿಕೆಗೆ ಜಿಟಿಡಿ ಟಾಂಗ್
ಯಡಿಯೂರಪ್ಪ ಅವರೇ ರಾಜ್ಯದ ಲೀಡರ್, ಅವರೇ ಸಿಎಂ. ಪಕ್ಷದಲ್ಲಿ ನಾಯಕತ್ವ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ರಾಜ್ಯ ಬಿಜೆಪಿಗೆ ಸಿಎಂ ಯಡಿಯೂರಪ್ಪ ಅವರೇ ಸುಪ್ರೀಂ ಎಂದು ಘೋಷಿಸಿದರು.
ಇದೇ ವೇಳೆ ಸಂಪುಟ ಸರ್ಜರಿ ಬಗ್ಗೆ ಮಾತನಾಡಿ, ಸಭೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆಯೇ ಆಗಿಲ್ಲ. ಇದು ಸಿಎಂ ಯಡಿಯೂರಪ್ಪ ಅವರ ವಿವೇಚನೆಗೆ ಬಿಟ್ಟದ್ದು ಎಂದರು.
ಈ ಸಭೆಯ ಬಳಿಕ ಸಂಪುಟ ವಿಸ್ತರಣೆ / ಪುನರ್ ರಚನೆ ಆಗಲಿದೆ ಎಂಬ ಮಾತುಗಳು ಕೂಡ ಹರಿದಾಡಿದ್ದವು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









