ಮೊಬೈಲ್ ನಲ್ಲಿ ನೆಟ್ ಇಲ್ಲದಿದ್ದರೂ ಕಾರ್ಯ ನಿರ್ವಹಿಸಲಿದೆ ವೆಬ್ ವಾಟ್ಸಪ್
ಇನ್ಮುಂದೆ ನಿಮ್ಮ ವಾಟ್ಸಪ್ ನ ಕಂಪ್ಯೂಟರ್ ಬ್ರೌಸರ್ ಲಿಂಕ್ ಮಾಡಿ ಓಪನ್ ಮಾಡಿದರರೆ ನಿಮ್ಮ ಮೊಬೈಲ್ ನಲ್ಲಿ ಇಂಟರನೆಟ್ ಇಲ್ಲದಿದ್ದರೂ ಸಹ ವಾಟ್ಸಪ್ ಕಾರ್ಯ ನಿರ್ವಹಿಸಲಿದೆ. ಈಗೊಂದು ಹೊಸ ಫೀಚರ್ ಅನ್ನ ಫೇಸಬುಕ್ (ಈಗ ಮೆಟಾ) ಸಂಸ್ಥೆ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡಿದೆ. ನಿಮ್ಮ ಮೊಬೈಲ್ ನಲ್ಲಿ ಒಮ್ಮೆ ಮಲ್ಟಿ ಡಿವೈಸ್ ಕನೆಕ್ಟ್ ಮಾಡಿದ ನಂತರ ನಿಮ್ಮ ಮೊಬೈಲ್ ಸ್ವಿಚ್ ಆಫ್ ಆದರೂ ವೆಬ್ ವಾಟ್ಸಪ್ ಕಾರ್ಯನಿರ್ವಹಿಸಲಿದೆ.
ಜೊತೆಗೆ ವಾಟ್ಸ್ಆ್ಯಪ್ ಪರಿಚಯಿಸಿರುವ ಮಲ್ಟಿ ಡಿವೈಸ್ ಮೂಲಕ ಒಬ್ಬರು ಒಂದೇ ಸಮಯದಲ್ಲಿ ತಮ್ಮ ವಾಟ್ಸ್ಆ್ಯಪ್ ಅಕೌಂಟ್ ಅನ್ನು ನಾಲ್ಕು ಡಿವೈಸ್ಗಳಿಗೆ ಲಿಂಕ್ ಮಾಡಲು ಅವಕಾಶ ನೀಡಲಿದೆ. ಇದರಲ್ಲಿ ಬ್ರೌಸರ್ ಮತ್ತು ಇತರ ಡಿವೈಸ್ಗಳು ಕೂಡ ಸಾಧನಗಳು ಸೇರಿವೆ.
ವಾಟ್ಸಪ್ ನ ಮಲ್ಟಿ ಡಿವೈಸ್ ಮೂಲಕ ನಾಲ್ಕೂ ಡಿವೈಸ್ ಮೂಲಕ ಕನೆಕ್ಟ್ ಮಾಡಿದರೂ ಎಂಡ್ ಎಂಡ್ ಎನ್ಕ್ರಿಪ್ಶನ್ ಅನ್ನು ಇದು ಒಳಗೊಂಡಿರುತ್ತದೆ ಹಾಗಾಗಿ ಇದು ತುಂಬಾ ಸುರಕ್ಷಿತವಾಗಿದೆ ಎಂದು ವಾಟ್ಸಪ್ ಹೇಳಿದೆ.