ಅಬ್ಬಾ….. ಇಂತಹ ಆಚರಣೆಗಳೂ ನಿಜಕ್ಕೂ ಇರುತ್ವಾ..!
ವಿಶ್ವದ ವಿಲಕ್ಷಣ ಆಚರಣೆಗಳು , ನಂಬಿಕೆಗಳು..!
ವಿಶ್ವದಾದ್ಯಂತ ಅತ್ಯಂತ ವಿಲಕ್ಷಣ ಆಚರಣೆಗಳಿವೆ. ಅವುಗಳನ್ನ ನೋಡಿದ್ರೆ ಆಶ್ಚರ್ಯ ಅಗುತ್ತೆ, ತಲೆ ತಿರುಗುತ್ತೆ. ಶಾಕ್ ಆಗುತ್ತೆ. ಧಾರ್ಮಿಕವಾಗಿ ಇರಬಹುದು, ಸಾಂಪ್ರದಾಯಿಕ ಸಾಮಾಜಿಕವಾಗಿರಬಹುದು ನಂಬಲಿಕ್ಕೆ ಆಗದೇ, ಊಹೆನೂ ಮಾಡಿಕೊಳ್ಳಲು ಸಾಧ್ಯವಾಗದಂತಹ ಕೆಲ ಪದ್ಧತಿಗಳ ಬಗ್ಗೆ ತಿಳಿಯೋಣ..
ಡೆಡ್ಲಿ ಫ್ರೈಡೇ..13..!
ಫ್ರ್ಯಾನ್ಸ್ : ಸಾಮಾನ್ಯವಾಗಿ ಫ್ರ್ಯಾನ್ಸ್ ನಲ್ಲಿ ಅತಿ ಹೆಚ್ಚು ನಂಬುವ ಮೌಢ್ಯ ಎಂದ್ರೆ ಶುಕ್ರವಾರ 13 ( FRIDAY 13). ತುಂಬಾ ಜನರು ಈ ದಿನವನ್ನ ಅಶುಭ ಅಂತ ಪರಿಗಣಿಸ್ತಾರೆ. 13 ತಾರೀಕಿಗೆ ಶುಕ್ರವಾರ ಬಂತಂದ್ರೆ ಅನೇಕರ ಜೀವ ಢವಢವ ಹೊಡೆದುಕೊಳ್ಳೋಕೆ ಶುರು ಮಾಡುತ್ತೆ. ಏನೋ ಗ್ರಹಚಾರ ಕಾದಿದೆ ಅನ್ನಿಸೋಕೆ ಶುರು ಮಾಡುತ್ತೆ. ಅಂದ್ಹಾಗೆ ಈ ದಿನ ಭೂತ ಪ್ರೇತ, ದೆವ್ವ ಪಿಶಾಚಿಗಳು, ದುಷ್ಟಶಕ್ತಿಗಳ ದಿನ ಎಂಬ ನಂಬಿಕೆಯಿದೆಯಂತೆ. ಹೀಗಾಗಿ ಡೆಡ್ಲಿ ಫ್ರೈಡೇ ಅಂತಲೇ ಈ ದಿನ ಕುಖ್ಯಾತಿ ಪಡೆದುಕೊಂಡಿದೆ. ನಿಮಗೆ ಇನ್ನೋಂದು ವಿಚಾರ ಗೊತ್ತಾ.. ಫ್ರಾನ್ಸ್ ನ ಜನರು ಸಾಮಾನ್ಯವಾಗಿ 13 ಅಂಕಿ ಅಂಶಗಳಿಂದ ಯಾವುದೇ ಕಾರ್ಯ ಮಾಡಲ್ವಂತೆ. ಉದಾಹರಣೆಗೆ 13 ಜನರನ್ನ ಒಟ್ಟಿಗೆ ಊಟಕ್ಕೆ ಕರೆಯೊಲ್ಲ. 13 ಸಂಖ್ಯೆಯನ್ನ ತಮ್ಮೊಂದಿಗೆ ಇಟ್ಟುಕೊಳ್ಳಲ್ಲ. 13 ನೇ ನಂ ಫ್ಲಾಟ್ , ಮನೆ , ಹೋಟೆಲ್ ರೂಂ ಗೂ ಹೋಗೋದಿಲ್ಲ. ಅಪ್ಪಿ ತಪ್ಪಿ 13 ಜನ ಹೋಟೆಲ್ ನಲ್ಲಿ, ಪಾರ್ಟಿಗಳಲ್ಲಿ ಊಟಕ್ಕೆ ಕೂತ್ರೆ ಅಲ್ಲಿನ ವೇಟರ್ ನ ತಮ್ಮ ಜೊತೆ ಊಟಕ್ಕೆ ಕೂರಿಸಿಕೊಳ್ತಾರಂತೆ.
ಕನ್ನಡಿ ನೋಡಬಾರದು ಯಾಕೆ..? ಉಗುರು ಕತ್ತರಿಸಬಾರದೇಕೆ..? ದೇಗುಲಕ್ಕೆ ಹೋಗಬಾರದೇಕೆ..?
ಡೆಡ್ಲಿ ಟ್ಯೂಸ್ ಡೇ..! 13
ಅಮೆರಿಕಾ : ಅಮೆರಿಕಾದಲ್ಲೂ ಕೂಡ 13 ನೇ ನಂ. ಅನ್ನ ಅನೇಕರು ಅಶುಭ ಅಂತ ಪಡರಿಗಣಿಸ್ತಾರೆ. ಹೌದು ವಿಶ್ವದ ದೊಡ್ಡಣ್ಣ ಅಮೇರಿಕಾದಲ್ಲೂ ಮೌಢ್ಯಾಚರಣೆ ಇದೆ ಅಂದ್ರೆ ಅದನ್ನ ನಂಬಲೇಬೇಕು. ಅದಕ್ಕೆ ಕಣ್ಣೆದುರಿಗೆ ಸಾಕಷ್ಟು ಪುರಾವೆಗಳಿದೆ. ನಿಮ್ಗೆ ಗೊತ್ತಾ.. ಅಮೆರಿಕಾದಲ್ಲಿ 13ನೇ ನಂಬರ್ ಗೆ ಎಷ್ಟು ಅಪಖ್ಯಾತಿ ಇದೆ ಅಂತ. ಸಾಮಾನ್ಯವಾಗಿ ಬಹುಮಹಡಿ ಕಟ್ಟಡ ಕಟ್ಟುದ್ರೆ 1,2,3 ಹೀಗೆ ಸಂಖ್ಯೆಗಳನ್ನ ಪ್ರಾರಂಭ ಮಾಡ್ತೇವೆ. ಆದ್ರೆ ಅಮೆರಿಕಾದ ಕೆಲವೆಡೆ 13ನೇ ನಂ ಫ್ಲೋರ್ ಬದಲಾಗಿ ನೇರವಾಗಿ 14 ನೇ ನಂಬರ್ ಫ್ಲೋರ್ ನಿರ್ಮಾಣ ಮಾಡ್ತಾರಂತೆ. ಗ್ರೀಕ್ ಆಗಿರಬಹುದು ಸ್ಪೇನ್ ಆಗಿರಬಹುದು ಸಾಮಾನ್ಯವಾಗಿ 13 ಫ್ರೈಡೇ ಡೆಡ್ಲೀ ಅಂತ ನಂಬಿದ್ದಾರೆ. ಆದ್ರೆ ಅಮೆರಿಕಾದಲ್ಲಿ ಫ್ರೈಡೇ ಅಲ್ಲ (13 Tuesday) ಡೆಡ್ಲಿ ಅಂತೆ. ಹೌದು 13 ನೇ ತಾರಿಕು ಮಂಗಳವಾರ ಬಂದ್ರೆ ಅಶುಭ ಂತೆ.
ಬೆತ್ತಲೆ ಪೂಜೆ
ಜಗತ್ತಿನಾದ್ಯಂತ ಚಿತ್ರ ವಿಚಿತ್ರ ಸಂಪ್ರದಾಯ, ಆಚರಣೆಗಳನ್ನು ಪಾಲಿಸುವ ಸಮುದಾಯ, ಜನರು ಇರುತ್ತಾರೆ. ಅದರಲ್ಲೂ ಕೆಲ ವಿಚಿತ್ರ ಪದ್ಧತಿ, ಆಚರಣೆಗಳು ಹೆಚ್ಚು ಸದ್ದು ಮಾಡುತ್ತವೆ. ಅದರಲ್ಲಿ ಬೆತ್ತಲಾಗಿ ದೇಗುಲಕ್ಕೆ ತೆರಳಿ ಪೂಜೆ ಮಾಡುವ ಆಚರಣೆ ಕೂಡ ಒಂದಾಗಿದೆ.
ಜಪಾನ್ : ಅಂದ್ಹಾಗೆ ನೀವು ಕೆಲವೊಮ್ಮೆ ಜೈನರಲ್ಲಿ ಕೆಲವರು ಬೆತ್ತಲೆಯಾಗಿ ಮೆರವಣಿಗೆ ಹೊರಟು ದೇವರಿಗೆಹರಕೆ ತೀರಿಸಿರೋದನ್ನ ನೋಡಿರ್ತೀರಾ.. ಕೇಳಿರ್ತೀರಾ.. ಆದ್ರೆ ದೇವರ ದರ್ಶನಕ್ಕೆ ಸಾವಿರಾರು ಜನ ಗುಂಪಾಗಿ ಬೆತ್ತಲೆಯಾಗಿ ಒಟ್ಟಾಗಿ ಸೇರಿರೋದನ್ನ ನೋಡಿದ್ದೀರಾ.. ಅಂದ್ಹಾಗೆ ಜಪಾನ್ ನ ಓಕಾಯಾಮಾದಲ್ಲಿ ಇಂತಹ ವಿಚಿತ್ರ ಆಚರಣೆಯೊಂದನ್ನು ಜನ ಪಾಲಿಸಿಕೊಂಡು ಬಂದಿದ್ದಾರೆ.
ವಿಚಿತ್ರ ಅಂದ್ರೆ ಜಪಾನ್ ಟೆಕ್ನಾಲಜಿಯಲ್ಲಿ ಸಖತ್ ಫಾಸ್ಟ್ ಇರೋ ದೇಶ. ಆದ್ರೆ ಅಲ್ಲೂ ಜನರು ಇಂತಹ ಮೌಢ್ಯಾಚರಣೆಯಲ್ಲಿ ತೊಡಗಿರೋದು ಆಶ್ಚರ್ಯ. ಅಂದ್ಹಾಗೆ ಪ್ರತಿ ವರ್ಷ ಫೆಬ್ರವರಿಯಲ್ಲಿ ಜಪಾನ್ ನ ಓಕಾಯಾಮಾದಲ್ಲಿ ‘ಹಡಕಾ ಮತ್ಸುರಿ’ ಎಂಬ ಹಬ್ಬವನ್ನ ಆಚರಣೆ ಮಾಡ್ತಾರೆ. ಈ ಹಬ್ಬಕ್ಕೆ ಭಕ್ತರು ಬೆತ್ತಲಾಗಿ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುತ್ತಾರೆ. ಸೈದಾಯೀಜಿ ಕಾನೌನೀನ್ ದೇಗುಲದಲ್ಲಿ ಕೇವಲ ಪುರುಷರು ಮಾತ್ರ ತೆರಳಿ ಬೆತ್ತಲಾಗಿ ಪೂಜೆ ಮಾಡೋದು ಸಂಪ್ರದಾಯ. ಈ ಆಚರಣೆಯಲ್ಲಿ ಸುಮಾರು ಸಾವಿರಾರು ಜನರು ಭಾಗಿಯಾಗಿರುತ್ತಾರೆ. ಬೆತ್ತಲೆಯಾಗಿ ಅಂದ್ರೆ ಸಂಪೂರ್ಣ ಬೆತ್ತಲೆ ಅಲ್ಲ. ಅತಿಚಿಕ್ಕ ಬಟ್ಟೆ ತುಂಡನ್ನ ಮೈಮೇಲೆ ಉಳಿಸಿಕೊಂಡಿರುತ್ತಾರೆ. ಪುಂದೇಶೀ ಹಾಗೂ ತಬೀ ಎನ್ನುವ ಒಂದು ಪುಟ್ಟ ಬಟ್ಟೆ ತುಂಡು ಸುತ್ತಿಕೊಂಡು ಪೂಜೆ ಸಲ್ಲಿಸುತ್ತಾರೆ. ತಣ್ಣೀರಲ್ಲಿ ಸ್ನಾನ ಮಾಡಿ, ಪುಂದೇಶೀ ಹಾಗೂ ತಬೀ ಸುತ್ತುಕೊಂಡು ಬೆತ್ತಲಾಗಿ ಮುಖ್ಯ ದೇಗುಲದ ಆವರಣಕ್ಕೆ ತೆರಳುತ್ತಾರೆ. ನಂತರ ರಾತ್ರಿ ದೇಗುಲದ ಅರ್ಚಕರು ದೇಗುಲದ ಮಹಡಿಯ ಕಿಟಕಿ ತೆರೆದು ಭಕ್ತರಿದ್ದಲ್ಲಿ ಧ್ವಜಗಳನ್ನು ಎಸೆಯುತ್ತಾರೆ. ಅರ್ಚಕರು ಎಸೆದ ಧ್ವಜಗಳು ಯಾರಿಗೆ ಸಿಗುತ್ತದೆ ಅವರಿಗೆ ವರ್ಷವಿಡೀ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿದೆ. ಹೀಗಾಗಿ ಭಕ್ತರು ಧ್ವಜಗಳನ್ನ ಹಿಡಿಯಲು ಶತಾಯಗತಾಯ ಪ್ರಯತ್ನ ಮಾಡ್ತಾರೆ.
ಗ್ರೀಕ್ : ಎಂಜಲು ಉಗಿಯೋದು. ಸಾಮಾನ್ಯವಾಗಿ ಇದು ಗ್ರೀಕ್ ನಲ್ಲಿ ಮಾತ್ರ ಅಲ್ಲ ನಮ್ಮ ಬಾರತದಲ್ಲು ನೋಡಿರುತ್ತೇವೆ. ಎಲ್ಲಾದ್ರು ಮೊಟ್ಟೆ ಹೊಡೆದಿದ್ದರೆ ನಿಂಬೆಹಣ್ಣು ಇಟ್ಟಿದ್ದನ್ನ ದಾಟಿದ್ರೆ ಹಿಂದೆ ತಿರುಗಿ ಮೂರು ಬಾರಿ ಉಗಿಯುತ್ತೇವೆ. ಇದಕ್ಕೆ ಕೊಂಚ ಹೋಲಿಯಂತಹ ಆಚರಣೆ ಗ್ರೀಕ್ ನಲ್ಲೂ ಇದೆ. ಹೌದು ದುಷ್ಟ ಶಕ್ತಿಗಳಿಂದ ಮುಕ್ತಿ ಸಿಗಲು ಮೂರು ಬಾರಿ ಜೋರಾಗಿ ಶಬ್ಧ ಮಾಡುತ್ತ ಉಗಿಯಬೇಕಂತೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








