ಚಾಮರಾಜನಗರ: ಇತಿಹಾಸ ಪ್ರಸಿದ್ಧ ಮಲೆ ಮಹೇದೇಶ್ವರನ ಸನ್ನಿಧಾನಕ್ಕೆ ಇಂದಿನಿಂದ 3 ದಿನಗಳ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಮಾವಾಸ್ಯೆ ವಿಶೇಷ ಪೂಜಾ ಕಾರ್ಯಕ್ಕೆ ಭಕ್ತ ಸಾಗರವೇ ಹರಿದು ಬರುವ ಹಿನ್ನಲೆ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ಕೊರೋನಾ ಮಹಾಮಾರಿ ಹಾವಳಿ ಮುಂದುವರೆದಿರುವ ಹಿನ್ನೆಲೆ ಸೊಂಕು ಹರಡದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಇಂದು, ನಾಳೆ, ನಾಡಿದ್ದು ಬಂದ್ ಮಾದಪ್ಪನ ಸನ್ನಿಧಾನದಲ್ಲಿ ದರ್ಶನವನ್ನು ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ಎಂ.ಆರ್.ರವಿ ಅವರು ಆ ಆದೇಶ ಹೊರಡಿಸಿದ್ದಾರೆ.
ಇನ್ನೂ ಪ್ರತಿ ಬಾರಿ ಅಮಾವಾಸ್ಯೆ ಅಂಗವಾಗಿ ನೆರವೇರಿಸಲಾಗುವ ವಿಶೇಷ ಪೂಜೆ, ಎಣ್ಣೆ ಮಜ್ಜನ, 108 ಕುಂಭಾಬಿಷೇಕ ಸಹಸ್ರ ಅಭಿಷೇಕ ಈ ಬಾರಿ ದೇವಾಲಯದ ಸಿಬ್ಬಂದಿಗಳ ಸಮ್ಮುಖದಲ್ಲಿ ನೆರವೇರಲಿದ್ದು, ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.








