ಎಲಾನ್ ಮಸ್ಕ್ ಟ್ವಿಟರ್ ಲೋಗೋ ಬದಲಿಸಿದ್ದು ಏಕೆ? ಇಲ್ಲಿದೆ ಕಾರಣ
Why did Elon Musk change the Twitter logo? Here’s the reason
ಜಗತ್ತಿನಲ್ಲಿ ಟ್ವಿಟರ್ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಜಾಲತಾಣವಾಗಿದೆ. ಇದರ ಮೂಲಕ ವಿಶ್ವದಲ್ಲಿ ನಡೆಯುವ ಎಲ್ಲ ಘಟನೆಗಳು ವೇಗವಾಗಿ ನಮಗೆ ತಲುಪುತ್ತವೆ. ಟ್ವಿಟರ್ ಎಂದಕ್ಷಣ ಕಣ್ಮುಂದೆ ಬರುವುದು ಹಾರುವ ನೀಲಿ ಹಕ್ಕಿ. ಆದರೆ ಇನ್ಮುಂದೆ ನಿಮ್ಮ ಕಣ್ಮುಂದೆ ಹಾರುವ ನೀಲಿ ಹಕ್ಕಿಯನ್ನ ತಂದುಕೊಳ್ಳಬೇಡಿ.
ಹೌದು ಪ್ರಸಿದ್ಧ ಚುಟುಕು ಸಾಮಾಜಿಕ ಟೀಟರ್‌ನ ಬ್ರಾಂಡ್ ಹಾಗೂ ಲೋಗೋ ಬದಲಿಸಿದೆ. ಟ್ವಿಟರ್ ಕಂಪನಿಯ ಮಾಲೀಕ ಎಲಾನ್ ಮಸ್ಕ ಅವರು ಟೀಟರ್‌ನ ಬ್ರಾಂಡ್ ಹಾಗೂ ಲೋಗೋವನ್ನು ಬದಲಿಸಿದ್ದಾರೆ.
ಟ್ವಿಟರ್ ಕಂಪನಿಯನ ಹೆಗ್ಗುರುತಾಗಿದ್ದ ನೀಲಿ ಹಕ್ಕಿಗಳಿಗೆ ವಿದಾಯ ಹೇಳಿರುವ ಎಲಾನ್ ಮಸ್ಕ್, ‘ಎಕ್ಸ್’ ಎಂಬ ಅಕ್ಷರವನ್ನೇ ಲೋಗೋ ಮಾಡಿದ್ದಾರೆ. ಲೋಗೋ ಕಂಪ್ಯೂಟರ್ ಆವೃತ್ತಿಯ ಟೀಟರ್‌ನಲ್ಲಿ ಕಾಣಿಸಿಕೊಂಡಿದೆ. ಆದರೆ ಮೊಬೈಲ್ ಆ್ಯಪ್‌ಗಳಲ್ಲಿ ನೀಲಿ ಹಕ್ಕಿ ಲಾಂಛನವೇ ಮುಂದುವರಿದಿದೆ. ಇನ್ನು ಟ್ವಿಟ್‌ಗಳಿಗೆ ಟ್ವಿಟ್ ಬದಲು ‘ಎಕ್ಸ್‌ಎಸ್’ (Xs) ಎನ್ನಲಾಗುತ್ತದೆ.
ಎಲಾನ್ ಮಸ್ಕ್ ಟ್ವಿಟರ್ ಲೋಗೋ ಬದಲಿಸಿದ್ದು ಏಕೆ?
ಎಲಾನ್ ಮಸ್ಕ್ ಅವರು ‘ಸ್ಪೇಸ್ ಎಕ್ಸ್‌ಪ್ಲೋರೇಷನ್ ಟೆಕ್ನಾಲಜೀಸ್ ಕಾರ್ಪ್’ ಎಂಬ ರಾಕೆಟ್ ಕಂಪನಿ ಹೊಂದಿದ್ದಾರೆ. ಅದನ್ನು ‘ಸ್ಪೇಸ್ ಎಕ್ಸ್’ ಎಂದೂ ಕರೆಯಲಾಗುತ್ತದೆ. 1999ರಲ್ಲಿ ಮಸ್ಕ್ ಅವರು ಆನ್ ಲೈನ್ ಹಣಕಾಸು ಸೇವೆ ಒದಗಿಸಲು ‘ಎಕ್ಸ್ ಡಾಟ್ ಕಾಂ ಎಂಬ ಸ್ಟಾರ್ಟಪ್ ಆರಂಭಿಸಿದ್ದರು. ಅದು ಈಗ ‘ಪೇಪಾಲ್’ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದೆ. ‘ಎಕ್ಸ್’ ಜತೆ ಮಸ್ಕ್ ಅವರಿಗೆ ನಂಟು ಹೆಚ್ಚು, ಹೀಗಾಗಿ ಆ ಹೆಸರು ಹಾಗೂ ಲೋಗೋವನ್ನು ಟ್ವಿಟರ್ ಗೆ ಇಟ್ಟಿದ್ದಾರೆ.
ಹೊಸ ಸೇವೆ ಶುರು
ಮುಂಬರುವ ದಿನಗಳಲ್ಲಿ ಟ್ವಿಟರ್ ಅನ್ನು ಕೇವಲ ಮಾಹಿತಿ ಹಂಚಿಕೆ ಜಾಲತಾಣವಾಗಿ ಮುಂದುವರೆಸುವ ಬದಲಾಗಿ, ಇ ಕಾಮರ್ಸ್, ಡೇಟಿಂಗ್, ಆನ್‌ಲೈನ್‌ನಲ್ಲಿ ಆಹಾರ ಬುಕ್ ಮಾಡುವ ಆ್ಯಪ್ ಗಳಿಗೆ ಲಿಂಕ್, ಯುಪಿಐ ರೀತಿಯ ಪಾವತಿ ವ್ಯವಸ್ಥೆ, ಬ್ಯಾಂಕಿಂಗ್ ವಲಯಕ್ಕೆ ಜೋಡಣೆ, ಆಡಿಯೋ, ವಿಡಿಯೋ ಕಂಟೆಂಟ್‌ಗಳನ್ನು ಅಳವಡಿಸುವ ಯೋಜನೆಯನ್ನು ಮಸ್ಕ್ ಹೊಂದಿದ್ದಾರೆ.








