`ಕೋಡಿಹಳ್ಳಿ ನಾಲಾಯಕ್’ ಎಂದ ರೇಣುಕಾಚಾರ್ಯಗೆ `ನರ್ಸ್’ ನೆನಪಿಸಿದ ಚಂದ್ರಶೇಖರ್
ಬೆಂಗಳೂರು : ಕೋಡಿಹಳ್ಳಿ ಒಬ್ಬ ನಾಲಾಯಕ್ ಎಂದಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರಿಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ನರ್ಸ್ ಕೇಸ್ ಅನ್ನ ನೆನಪಿಸಿ ಸಖತ್ ಟಾಂಗ್ ಕೊಟ್ಟಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಒಬ್ಬ ನಾಲಾಯಕ್. ಎಲ್ಲಿ ಜನ ಸೇರುತ್ತಾರೋ ಅಲ್ಲಿ ಕೂತು ಬಿಟ್ಟಿ ಭಾಷಣ ಮಾಡುವ ವ್ಯಕ್ತಿಗೆ ಸಾರಿಗೆ ನೌಕರರು ತಮ್ಮ ವೇದಿಕೆಯಲ್ಲಿ ಅವಕಾಶ ನೀಡಬಾರದು ಎಂದು ರೇಣುಕಾಚಾರ್ಯ ಹೇಳಿಕೆ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ಕೋಡಿಹಳ್ಳಿ ಚಂದ್ರಶೇಖರ್, ಯಾವ ರೇಣುಕಾಚಾರ್ಯ ಅದೇ ಆ ನರ್ಸ್ ಕೇಸ್ ಅವ್ರೇನಾ..? ಕಚ್ಚೆ ಸರಿಯಿಲ್ಲ ಬಾಯಿ ಸರಿಯಿಲ್ಲ ಆ ವಯ್ಯನ ಬಗ್ಗೆ ಏನು ಹೇಳೋದು..?
ರೇಣುಕಾಚಾರ್ಯ ಮೂರನೇ ದರ್ಜೆಯ ವ್ಯಕ್ತಿ. ಅವರ ಬಗ್ಗೆ ನಾನು ಮಾತನಾಡೋಕೆ ಹೋಗಲ್ಲ. ಅವರಿಗೆ ವೈಯಕ್ತಿಕ ಶಿಸ್ತು ಇಲ್ಲ. ಮುಖ್ಯಮಂತ್ರಿಗಳು ಸಹ ಅಂಥವರಿಂದ ಹೇಳಿಕೆ ಕೊಡಿಸುವುದು ಸರಿಯಲ್ಲ. ಯಡಿಯೂರಪ್ಪನವರಿಗೆ ಇದು ಶೋಭೆ ತರುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಪ್ರತಿಭಟನೆ ಕುರಿತು ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಕಳುಹಿಸಿದ್ದೇವೆ. ಸರ್ಕಾರದ ಅಭಿಪ್ರಾಯ ಬಂದ ಬಳಿಕ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ನಮ್ಮ ಬೇಡಿಕೆ ಈಡೇರಿಸಿದರೆ ಮಾತ್ರ ಪ್ರತಿಭಟನೆ ವಾಪಾಸ್ ಪಡೆಯುತ್ತೇವೆ. ಇಲ್ಲದಿದ್ದರೆ ಮುಷ್ಕರ ಮುಂದುವರಿಯುತ್ತದೆ ಎಂದು ಹೇಳಿಕೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









