‘ಕುಮಾರಸ್ವಾಮಿ ಸರ್ಕಾರವನ್ನು ಉರುಳಿಸುವ ಸ್ಕೆಚ್ ಹಾಕಿದ್ದು ನಾನೇ’ : ಸಿ ಪಿ ಯೋಗೇಶ್ವರ್
ರಾಮನಗರ : ಈಗಾಗಲೇ ಕುಮಾರಸ್ವಾಮಿ ಸಿಎಂ ಆಗಿದ್ದ ಮೈತ್ರಿ ಸರ್ಕಾರ ಪತನಗೊಂಡು ಸುಮಾರು ಒಂದು ವರ್ಷವಾಗ್ತಿದೆ. ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಆದ್ರೆ ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರ ಉರುಳಲು ಬಿಜೆಪಿಯ ಆಪರೇಷನ್ ಕಮಲವೇ ಕಾರಣ ಅನ್ನೋದು ಪ್ರತಿಪಕ್ಷಗಳ ನಾಯಕರ ವಾದ. ಆದ್ರೆ ಬಿಜೆಪಿ ನಾಯಕರು ಆರೋಪಗಳಿಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದ್ರೆ ಇದೀಗ ಬಿಜೆಪಿ ಎಂಎಲ್ ಸಿ ಸಿ.ಪಿ. ಯೋಗೇಶ್ವರ್ ಹೇಳಿಕೆ ಭಾರೀ ಸಂಚಲನ ಸೃಷ್ಟಿ ಮಾಡಿದೆ.
ಹೌದು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಸರ್ಕಾರವನ್ನು ಸ್ಕೆಚ್ ಹಾಕಿ ಬೀಳಿಸಿದ್ದು ನಾನೇ, ನನ್ನನ್ನು ಡಿ.ಕೆ.ಶಿವಕುಮಾರ್ – ಹೆಚ್.ಡಿ.ಕುಮಾರಸ್ವಾಮಿ ಸೇರಿ ಸೋಲಿಸಿದ್ದರು. ಹೀಗಾಗಿ ನಾನು ಬೆಂಗಳೂರಿನಲ್ಲಿ ಸ್ಕೆಚ್ ಹಾಕಿ ಮೈತ್ರಿ ಸರ್ಕಾರ ಉರುಳಿಸಿದೆ ಎಂದು ಹೇಳಿದ್ದಾರೆ.
ಗೋಹತ್ಯೆ ಆಯ್ತು , ಈಗ ಲವ್ ಜಿಹಾದ್ ಕಾಯ್ದೆ ಕಡೆಗೆ ಗಮನ : ಈಶ್ವರಪ್ಪ
ಮುಂದುವರೆದು ಮಾತನಾಡಿರುವ ಅವರು, ಅಂದು ಜೋಡೆತ್ತು, ಇಂದು ಕಿತ್ತಾಡುತ್ತಿದ್ದಾರೆ. ಅಧಿಕಾರ ಹೋಗುತ್ತಿದ್ದಂತೆ ಡಿ.ಕೆ. ಶಿವಕುಮಾರ್ ತಿಹಾರ್ ಜೈಲಿಗೆ ಹೋದರು, ಕರ್ನಾಟಕದಿಂದ ಅಲ್ಲಿಗೆ ಹೋದವರಲ್ಲಿ ಶಿವಕುಮಾರ್ ಒಬ್ಬರೇ ಎಂದು ವಾಗ್ದಾಳಿ ನಡೆಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








