ಬೆಂಗಳೂರು: ಪ್ರದೇಶ ಕುರುಬರ ಸಂಘಕ್ಕೆ ಇಂದು ನಡೆದ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಬಣ ಭರ್ಜರಿ ಗೆಲುವು ದಾಖಲಿದೆ. ಆದರೆ ಸಚಿವ ಕೆ.ಎಸ್. ಈಶ್ವರಪ್ಪ ಬಣ ಒಂದೇ ಒಂದು ಸ್ಥಾನವನ್ನೂ ಗೆಲ್ಲಲು ಸಾಧ್ಯವಾಗದೆ ಹೀನಾಯ ಸೋಲು ಕಾಣುವ ಮೂಲಕ ತೀವ್ರ ಮುಖಭಂಗ ಅನುಭವಿದೆ.
ಕುರುಬರ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ನಾನಾ ಹುದ್ದೆಗೆ ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಬೆಂಬಲಿತ ಅಭ್ಯರ್ಥಿ ಬಳ್ಳಾರಿ ಮೂಲದ ಕೃಷ್ಣ 83 ಮತಗಳೊಂದಿಗೆ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿಯಾಗಿ ಮಾಜಿ ಮೇಯರ್ ವೆಂಕಟೇಶ ಮೂರ್ತಿ ಆಯ್ಕೆಯಾಗಿದ್ದರೆ, ಕಾರ್ಯಾಧ್ಯಕ್ಷರಾಗಿ ಮೈಸೂರು ಸುಬ್ಬಣ್ಣ, ಖಜಾಂಚಿಯಾಗಿ ದೇವರಾಜು, ಹಿರಿಯ ಉಪಾಧ್ಯಕ್ಷರಾಗಿ ಈರಣ್ಣ ಝಳಕಿ ಗೆದ್ದಿದ್ದಾರೆ.
ಉಪಾಧ್ಯಕರಾಗಿ ಕೃಷ್ಣ ಕುಮಾರ್, ಪುಟ್ಟಬಸವಯ್ಯ, ಮಿರ್ಜಾಪುರ ಮಹಾದೇವಪ್ಪ, ಎಂ.ಸಿ.ರಾಜಣ್ಣ, (ವೆಂಕಟರಮಣಪ್ಪ ಹಾಗೂ ಶಂಕರ ವಿಠೋಬ ಹೆಗಡೆ ಆಯ್ಕೆಯಾಗಿದ್ದಾರೆ
8 ವರ್ಷಗಳ ಮೌನ ಮುರಿದ ನ್ಯಾಷನಲ್ ಕ್ರಶ್: ಕುಟುಂಬದ ತಂಟೆಗೆ ಬಂದರೆ ಸುಮ್ಮನಿರಲ್ಲ ಎಂದು ಟ್ರೋಲಿಗರಿಗೆ 24 ಗಂಟೆಗಳ ಖಡಕ್ ವಾರ್ನಿಂಗ್ ನೀಡಿದ ರಶ್ಮಿಕಾ ಮಂದಣ್ಣ
ಸದಾ ನಗುಮುಖದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ರಶ್ಮಿಕಾ ಮಂದಣ್ಣ ಇದೀಗ ತೀವ್ರವಾಗಿ ಗರಂ ಆಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್, ನೆಗೆಟಿವ್ ಕಮೆಂಟ್...








