ಕೇಂದ್ರ ಅತಿಯಾದ ಆತ್ಮವಿಶ್ವಾಸದಲ್ಲಿದೆ – ಕೊರೋನಾ ಸಂಪೂರ್ಣವಾಗಿ ತೊಲಗಿಲ್ಲ: ರಾಹುಲ್ ಗಾಂಧಿ ಎಚ್ಚರಿಕೆ..!
ನವದೆಹಲಿ: ದೇಶದಲ್ಲಿ ಮತ್ತೆ ಬ್ರಿಟನ್ ಕೊರೋನಾ ಸೋಂಕು ತಳಿ ಕಾಣಿಸಿಕೊಂಡು ಜನರನ್ನ ಆತಂಕಕ್ಕೆ ಈಡು ಮಾಡಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಟ್ವೀಟ್ ಮಾಡಿ ವಾಗ್ದಾಳಿ ನಡೆಸಿರುವ ರಾಹುಲ್ ಗಾಂಧಿ ಕೊರೋನಾ ವೈರಸ್ ಪರಿಸ್ಥಿತಿಯನ್ನು ನಿಭಾಯಿಸುವ ಬಗ್ಗೆ ಕೇಂದ್ರ ಸರ್ಕಾರವು ಅತ್ಯಂತ ನಿರ್ಲಕ್ಷ್ಯ ವಹಿಸಿದೆ. ಅತಿಯಾದ ಆತ್ಮವಿಶ್ವಾಸದಲ್ಲಿದೆ. ಆದರೆ ಕೋವಿಡ್ ಸಾಂಕ್ರಾಮಿಕ ರೋಗ ಇನ್ನೂ ಮುಗಿದಿಲ್ಲ ಎಂದು ಹೇಳಿದ್ದಾರೆ.
ರಾಯಲ್ ಎನ್ ಫೀಲ್ಡ್ ಮೀಟಿಯೋರ್ 350 ಬೈಕ್ ಲಾಂಚ್ : ಫೀಚರ್ಸ್ ..!
ಇನ್ನು ಭಾರತದಲ್ಲಿ ಮತ್ತೆ ಬ್ರಿಟನ್ ಕೊರೋನಾ ವೈರಸ್ ತಳಿ ಸೋಂಕು ಪತ್ತೆಯಾಗಿದ್ದು. ಇದರೊಂದಿಗೆ ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ SARS-CoV-2 ರೂಪಾಂತರದ ಸೋಂಕು ನಾಲ್ಕು ಜನರಲ್ಲಿ ಪತ್ತೆಯಾಗಿದೆ ಮತ್ತು ಮತ್ತೊಬ್ಬರಿಗೆ ಬ್ರೆಜಿಲ್ನಲ್ಲಿ ಪತ್ತೆಯಾದ ಕೊರೊನಾ ವೈರಸ್ ರೂಪಾಂತರದ ಸೋಂಕು ದೃಢವಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಈ ಹಿನ್ನೆಲೆ ಕೊರೊನಾ ಹಾವಳಿ ಕಡಿಮೆಯಾಗ್ತಿದೆ ಎಂದು ಸಮಾಧಾನವಾಗಿದ್ದ ಭಾರತೀಯರಲ್ಲಿ ಮತ್ತೊಮ್ಮೆ ಆತಂಕ ಮನೆ ಮಾಡಿದೆ.
ಇತ್ತ ಭಾರತಕ್ಕೆ ಹಿಂದಿರುಗಿದವರ ಪೈಕಿ ಈಗಾಗಲೇ ನಾಲ್ವರಲ್ಲಿ ದಕ್ಷಿಣ ಆಫ್ರಿಕಾದ ರೂಪಾಂತರ ಸೋಂಕು ಪತ್ತೆಯಾಗಿದೆ. ಇವರಲ್ಲಿ ಅಂಗೋಲಾದಿಂದ ಬಂದ ಒಬ್ಬರಲ್ಲಿ, ತಾಂಜೇನಿಯಾದಿಂದ ಒಬ್ಬರು ಮತ್ತು ದಕ್ಷಿಣ ಆಫ್ರಿಕಾದಿಂದ ಬಂದ ಇಬ್ಬರಲ್ಲಿ ಸೋಂಕು ಇರುವುದು ದೃಢವಾಗಿದೆ.
ಅಂಚೆ ಕಚೇರಿಯಲ್ಲಿ ನಿಮ್ಮ ವಿದ್ಯುತ್ ಬಿಲ್ ಪಾವತಿ ಮಾಡಬಹುದು..! ಹೇಗೆ ನೋಡಿ..!








