‘ಕೈ’ ನಾಯಕರಿಗೆ ಹೆಚ್ ಡಿಕೆ ಮೋಸ ಮಾಡಿದ್ರು’ : ರೇಣುಕಾಚಾರ್ಯ..!
ದಾವಣಗೆರೆ: ಪ್ರತಿಪಕ್ಷಗಳ ನಾಯಕರ ವಿರುದ್ಧ ಸದಾ ಕಿಡಿಕಾರುವ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮತ್ತೊಮ್ಮೆ ಕಾಂಗ್ರೆಸ್ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಗುಡುಗಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿರೋ ಅವರು ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಂಗ್ರೆಸ್ ಗೆ ಅಸ್ತಿತ್ವವಿಲ್ಲ. ಕಾಂಗ್ರೆಸ್ ಜೊತೆ ಹೋದ ಪ್ರಾದೇಶಿಕ ಪಕ್ಷಗಳು ಅಸ್ತಿತ್ವ ಕಳೆದುಕೊಂಡಿವೆ. ದೇಶದಲ್ಲಿ ವಿರೋಧ ಪಕ್ಷಗಳು ಮೂಲೆಗುಂಪಾಗಿವೆ ಎಂದು ಲೇವಡಿ ಮಾಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಶಾಸಕರು ಹೊರ ಹೋಗುವಂತೆ ಅವರ ಪಕ್ಷದವರೇ ಮಾಡಿದರು. ಇತ್ತ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಶಾಸಕರಿಗೆ ಮೋಸ ಮಾಡಿದರು. ಈಗ ಅವರಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ. ಕಾಂಗ್ರೆಸ್ ಸಹವಾಸ ಮಾಡಿ ಈಗ ಕಣ್ಣೀರು ಹಾಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆಯ ಪರಾಮರ್ಶೆ ಆಗಲಿ: ಬಿಜೆಪಿ, ಕಾಂಗ್ರೆಸ್‍ಗೆ ಸರಣಿ ಪ್ರಶ್ನೆ ಹಾಕಿದ ಎಚ್‍ಡಿಕೆ
ಅಷ್ಟೇ ಅಲ್ಲದೇ ವ್ಯಾಪಕ ಚರ್ಚೆಯಲ್ಲಿರುವ ಲವ್ ಜಿಹಾದ್ ಕಾಯ್ದೆ ಬಗ್ಗೆ ಮಾತನಾಡಿದ ಶಾಸಕರು , ಲವ್ ಜಿಹಾದ್ ತಡೆಯಲು ಕಾನೂನು ತಂದೇ ತರುತ್ತೇವೆ. ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸುತ್ತೇವೆ ಎಂದಿದ್ದಾರೆ. ಇದೇ ವೇಳೆ ನಾವು ಹಿಂದುತ್ವದ ಪ್ರತಿಪಾದಕರು. ಆದರೆ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಕಲಿ ಹಿಂದುಗಳು. ಮುಂದಿನ ಅಧಿವೇಶನದಲ್ಲಿ ಲವ್ ಜಿಹಾದ್ ನಿಷೇಧ ಮಸೂದೆಯನ್ನ ಮಂಡಿಸಿಯೇ ಮಂಡಿಸುತ್ತೇವೆ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








