ಕೊರೊನಾ ಸೋಂಕಿತರೇ ಸ್ವಲ್ಪ ದಿನ ಜಾಗ್ರತೆಯಿಂದಿರಿ..!
ವಾಷಿಂಗ್ಟನ್ : ಕೊರೊನಾ ವೈರಸ್, ಕೊರೊನಾ ರೂಪಾಂತರಿ ವೈರಸ್ ನಿಂದಾಗಿ ಈಗಾಗಲೇ ಜನ ಹೈರಾಣಾಗಿದ್ದಾರೆ.
ಈ ಮಧ್ಯೆ ಈ ಹೆಮ್ಮಾರಿ ಸೋಂಕಿನಿಂದ ಚೇತರಿಸಿಕೊಂಡಿದ್ದರೂ ಸಹ ಸುಮಾರು 8 ತಿಂಗಳಕಾಲ ದೇಹದಲ್ಲಿ ಈ ಸಾಂಕ್ರಾಮಿಕ ವೈರಸ್ ಅಡಗಿರುತ್ತದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಲ್ಲಿ ಈ ವೈರಸ್ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಸಮೀಕ್ಷಾ ವರದಿ ಹೇಳಿದೆ. 2020ರ ಜುಲೈನಲ್ಲಿ ನಡೆದ ಸಮೀಕ್ಷೆಯಲ್ಲಿ ಈ ವಿಷಯ ತಿಳಿದು ಬಂದಿದೆ.
ಕೊರೋನ ಸೋಂಕು ದೃಢಪಟ್ಟ ಬಳಿಕ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕ್ಷಿಣಿಸುತ್ತೆ ಅನ್ನೋದು ಎಲ್ಲರಿಗೂ ತಿಳಿದಿದೆ.
ಬಸ್ ಡಿಪೋ ಪೆಟ್ರೋಲ್ ಬಂಕ್ನಿಂದ ಡಿಸಿಎಂ ಸವದಿ ಕಾರಿಗೆ ಫುಲ್ ಟ್ಯಾಂಕ್ ಡೀಸೆಲ್!
ಆದರೆ ಸೋಂಕಿನಿಂದ ಚೇತರಿಸಿಕೊಂಡ ಬಳಿಕವೂ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುವುದಿಲ್ಲ ಎಂದು ಅಮೆರಿಕಾಗೆ ಸೇರಿದ ಅಲೆಸ್ಸಾಂಡ್ರೊ ಸೆಟ್ಟೆ ಆಫ್ ಲಾ ಝೋಲಾ ಇನ್ ಸ್ಟಿಟ್ಯೂಟ್ ತಿಳಿಸಿದೆ.

ಶೇನ್ ಕ್ರಾಟಿ ಮತ್ತು ಡೇನಿಯೆಲಾ ವೆಸ್ಕಾಫ್ ಜೊತೆ ಸೇರಿ ಎಲ್ ಜೆಐ ಈ ಸಮೀಕ್ಷೆ ನಡೆಸಿದೆ.
ಈ ಸಮೀಕ್ಷೆ 188 ಸಂತ್ರಸ್ತರ ಮೇಲೆ ನಡೆದಿದ್ದು, ಅವರ ರಕ್ತದ ಮಾದರಿಗಳಲ್ಲಿ ಈ ಅಂಶ ತಿಳಿದು ಬಂದಿದೆ ಎಂದು ಅಲೆಸ್ಸಾಂಡ್ರೊ ಸೆಟ್ಟೆ ಆಫ್ ಲಾ ಝೋಲಾ ಇನ್ ಸ್ಟಿಟ್ಯೂಟ್ ತನ್ನ ನಿಯತಕಾಲಿಕೆಯಲ್ಲಿ ಪ್ರಕಟ ಮಾಡಿದೆ.
ಪ್ರತಿಕಾಯಗಳು ವೈರಸ್ ಅನ್ನು ಕೊಲ್ಲುತ್ತವೆ. ಬಿ ಜೀವಕೋಶಗಳು, ಟೀ ಜೀವಕೋಶಗಳು ನಾಶ ಮಾಡುತ್ತವೆ ಎಂದು ವರದಿ ತಿಳಿಸಿದೆ.
ಅಲ್ಲದೆ ಸಾರ್ಸ್ ಕಾಯಿಲೆ ಇದ್ದರೇ ಅಪಾಯವೆಂದು, ಕೆಲವು ದಿನಗಳ ಕಾಲ ಎಚ್ಚರಿಕೆ ವಹಿಸಬೇಕಾಗುತ್ತದೆ.
ಕರೋನಾದಿಂದ ಚೇತರಿಸಿಕೊಂಡವರಲ್ಲಿ ಶೇ.60ರಷ್ಟು ಮಂದಿಯಲ್ಲಿ 16.7 ಪ್ರತಿಶತ ಮಂದಿಗೆ ಸೋಂಕು ತಾಕುವ ಪ್ರಮಾದ ಇರುತ್ತದೆ. ಅದು ಕೂಡ 65 ದಿನಗಳ ಒಳಗೆ ಸೋಂಕು ಬರಬಹುದು ಎಂದು ವರದಿ ತಿಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








