ಕೋಟ್ಲಾ ಮೈದಾನದಲ್ಲಿ ಪರ್ಫೆಕ್ಟ್ ಟೆನ್ ವಿಕೆಟ್ಸ್ ಪಡೆದ ಬಗ್ಗೆ ಅನಿಲ್ ಕುಂಬ್ಳೆ ಹೇಳೋದು ಏನು ?
ಫೆಬ್ರವರಿ 7, 1999. ದೆಹಲಿಯ ಆಗಿನ ಫೀರೋಜ್ ಶಾ ಕೋಟ್ಲಾ ಮೈದಾನ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಿತ್ತು. ಟೆಸ್ಟ್ ಕ್ರಿಕೆಟ್ ನ ಒಂದು ಇನಿಂಗ್ಸ್ ನ ಹತ್ತು ವಿಕೆಟ್‍ಗಳನ್ನು ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋದು ನಮ್ಮ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ. ಅಷ್ಟೇ ಅಲ್ಲ, ವಿಶ್ವ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿರುವ ಎರಡನೇ ಬೌಲರ್ ಆಗಿಯೂ ಹೊರಹೊಮ್ಮಿದ್ರು. ಕುಂಬ್ಳೆ ಈ ಸಾಧನೆ ಮಾಡಿ 21 ವರ್ಷಗಳಾಗಿವೆ. ಆದ್ರೆ ಇಲ್ಲಿಯವರೆಗೆ ಇಂತಹುದ್ದೊಂದು ಸಾಧನೆ ಮತ್ತೆ ಮರುಕಳಿಸಿಲ್ಲ.
ಇದೀಗ ಅನಿಲ್ ಕುಂಬ್ಳೆ ಈ ಸಾಧನೆ ಬಗ್ಗೆ ಮಾತನಾಡಿದ್ದಾರೆ. ಪರ್ಫೆಕ್ಟ್ ಟೆನ್ ಬಗ್ಗೆ ಮತ್ತೊಮ್ಮೆ ನೆನಪು ಮಾಡಿಕೊಂಡಿದ್ದಾರೆ. ಆ ಪಂದ್ಯದಲ್ಲಿ ಹತ್ತು ವಿಕೆಟ್‍ಗಳನ್ನು ಪಡೆಯಲು ಹೇಗೆ ಸಾಧ್ಯವಾಯ್ತು ? ಶ್ರೀನಾಥ್ ವೈಡ್ ಬಾಲ್ ಹಾಕಿರುವುದು…ಹಾಗೇ ಪಾಕ್ ತಂಡದ ಒಂದೊಂದು ವಿಕೆಟ್‍ಗಳು ಹೇಗೆ ಪತನಗೊಂಡಿದ್ದವು ಎಂಬುದನ್ನು ಜಿಂಬಾಬ್ವೆಯ ಪೊಮ್ಮಿಯ್ ಎಂಬ್ವಾಗ್ ಜೊತೆಗಿನ ಲೈವ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
ಪಂದ್ಯದ ಟೀ ನಂತರ ನನಗೆ ಏಳು, ಎಂಟು ಮತ್ತು ಒಂಬತ್ತನೇ ವಿಕೆಟ್ ಸಿಕ್ಕಿತ್ತು. ನಾನು ನನ್ನ ಓವರ್ ಅನ್ನು ಮುಗಿಸಿದೆ. ಬಳಿಕ ಜಾವಗಲ್ ಶ್ರೀನಾಥ್ ಬೌಲಿಂಗ್ ಮಾಡಿದ್ದರು. ಬಹುಶಃ ಆ ಒಂದು ಓವರ್ ಮಾಡುವುದಕ್ಕೆ ಶ್ರೀನಾಥ್‍ಗೆ ತುಂಬಾ ಕಷ್ಟಕರವಾಗಿತ್ತು. ಅವರು ಕಲಿಯಲು ಅಗತ್ಯವಿಲ್ಲದ ಎಸೆತಗಳನ್ನು ಹಾಕಿದ್ದರು. ಅದ್ರಲ್ಲಿ ವೈಡ್ ಕೂಡ ಇತ್ತು. ಹಾಗಂತ ನಾನು ಅವರಲ್ಲಿ ಏನು ಕೇಳಿಲ್ಲ. ಹೇಳಿಲ್ಲ. ವಾಸೀಮ್ ಅಕ್ರಮ್ ಸಿಂಗಲ್ ರನ್ ತೆಗೆಯುತ್ತಾರೆ ಅಂತ ನಾನು ಭಾವಿಸಿದ್ದೆ. ಆದ್ರೆ ನನಗೆ ಒಂದು ವಿಕೆಟ್ ಪಡೆಯಲು ಒಂದು ಓವರ್ ಸಾಕು ಎಂದು ಯೋಚಿಸುತ್ತಿದೆ. ಆದ್ರೆ ಶ್ರೀನಾಥ್ ಬಳಿ ಕೇಳಲು ನನಗೆ ಮುಜುಗರವಾಗಿತ್ತು ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.
ಅದಕ್ಕಿಂತ ಮುಂಚೆ ಚೆನ್ನೈನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಕೇವಲ 12 ರನ್ ಗಳಿಂದ ಸೋತಿತ್ತು. ಭಾರತಕ್ಕೆ ದೆಹಲಿ ಟೆಸ್ಟ್ ಪಂದ್ಯವನ್ನು ಗೆದ್ದು ಸರಣಿ ಸಮಗೊಳಿಸುವ ಅಗತ್ಯವಿತ್ತು. ಪಾಕ್‍ಗೆ ಗೆಲ್ಲಲು 420 ರನ್‍ಗಳು ಬೇಕಿದ್ದವು. ಆರಂಭಿಕರಾದ ಸೈಯ್ಯದ್ ಅನ್ವರ್ ಮತ್ತು ಶಾಹೀದ್ ಆಫ್ರಿಧಿ 101 ರನ್‍ಗಳ ಜೊತೆಯಾಟವನ್ನು ಅಡಿದ್ದರು.. ಆಗ ಭಾರತ ತಂಡದ ನಾಯಕನಾಗಿದ್ದ ಮಹಮ್ಮದ್ ಅಜರುದ್ದೀನ್ ಅನಿಲ್ ಕುಂಬ್ಳೆ ಕೈಯಲ್ಲಿ ಸತತವಾಗಿ ಬೌಲಿಂಗ್ ಮಾಡಿಸಿದ್ದರು. ಆದ್ರೆ ಮೊದಲ ವಿಕೆಟ್ ಜೊತೆಯಾಟಕ್ಕೆ ಬ್ರೇಕ್ ಹಾಕಿದ್ದ ನಂತರ ಕೋಟ್ಲಾ ಮೈದಾನದಲ್ಲಿ ಅನಿಲ್ ಕುಂಬ್ಳೆಯವರನ್ನು ಹಿಡಿಯಲು ಯಾರಿಂದಲೂ ಸಾಧ್ಯವಾಗಿಲ್ಲ.
ಇದೊಂದು ವಿಶೇಷ ದಿನವಾಗಿತ್ತು. ಹಾಗೇ ಸಾಕಷ್ಟು ಒತ್ತಡವೂ ಇತ್ತು. ಯಾಕಂದ್ರೆ ಸುಮಾರು ವರ್ಷಗಳ ನಂತರ ಪಾಕಿಸ್ತಾನ ಭಾರತ ಪ್ರವಾಸ ಮಾಡಿತ್ತು. ನಾವು ಕೋಟ್ಲಾ ಟೆಸ್ಟ್ ಪಂದ್ಯವನ್ನು ಗೆಲ್ಲಲೇಬೇಕಿತ್ತು. ಬೌನ್ಸಿ ಪಿಚ್ ನಲ್ಲಿ ನಾನು ಸಾಕಷ್ಟು ಪರಿಣಾಮಕಾರಿಯಾಗುತ್ತೇನೆ ಅನ್ನೋ ನಂಬಿಕೆ ನನಗಿತ್ತು. ಭೋಜನ ವಿರಾಮದ ತನಕ ಪಾಕ್ ತಂಡ ಉತ್ತಮ ಸ್ಥಿತಿಯಲ್ಲಿತ್ತು. ಆದ್ರೆ ಒಂದು ವಿಕೆಟ್ ಉರುಳಿಸಬೇಕು ಪಂದ್ಯದ ಗತಿ ಬದಲಾಗುತ್ತೆ ಅನ್ನೋ ವಿಶ್ವಾಸವೂ ಇತ್ತು. ಭೋಜನ ವಿರಾಮದ ನಂತರ ನಾನು ಬೌಲಿಂಗ್ ತುದಿಯನ್ನು ಬದಲಾಣೆ ಮಾಡಿಕೊಂಡೆ. ಹಾಗೇ ಮೊದಲ ವಿಕೆಟ್ ಸಿಕ್ಕಿತ್ತು. ಎರಡನೇ ವಿಕೆಟ್ ಸಿಕ್ಕಿತ್ತು. ಬಳಿನ ನಾನು ನಿರಂತರವಾಗಿ ಬೌಲಿಂಗ್ ಮಾಡಿದ್ದೆ. ಹಾಗೇ ತುಂಬಾ ಆಯಾಸಗೊಂಡಿದ್ದೆ. ಅದೇ ರೀತಿ ನನಗೆ ಬೌಲಿಂಗ್ ಸಾಧನೆಯನ್ನು ಉತ್ತಮ ಪಡಿಸುವ ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂಬ ಯೋಚನೆಯಲ್ಲಿದೆ ಎಂದು 21 ವರ್ಷಗಳ ನಡೆದಿದ್ದ ಪಂದ್ಯದ ಕ್ಷಣಗಳನ್ನು ಅನಿಲ್ ಕುಂಬ್ಳೆ ನೆನಪು ಮಾಡಿಕೊಂಡ್ರು.








