ಕೋಡಿಹಳ್ಳಿ ಚಂದ್ರಶೇಖರ್ ಚೈನಾ ಮಾಡೆಲ್ ಇರಬೇಕು : ಸೊಗಡು ಶಿವಣ್ಣ
ತುಮಕೂರು : ಸಾರಿಗೆ ನೌಕರರ ಮುಷ್ಕರಕ್ಕೆ ಬೆಂಬಲವಾಗಿ ನಿಂತಿದ್ದ ಕೋಡಿಹಳ್ಳಿ ಚಂದ್ರೆಶೇಖರ್ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ತೀವ್ರ ಆಕ್ರೋಶ ವ್ಯಕ್ತಪಿಡಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಡಿಹಳ್ಳಿ ಚಂದ್ರಶೇಖರ್ ಕಮ್ಯೂನಿಸ್ಟ್ ನಿಬಂಧನೆಗಳನ್ನು ಬಲವಂತವಾಗಿ ಹೇರುವ ಮೂಲಕ ಸಾರಿಗೆ ನೌಕರರ ಹೋರಾಟದ ದಾರಿ ತಪ್ಪಿಸುತ್ತಿದ್ದಾರೆ.
ಎಸ್ಮಾ ಎಂದರೇನು..? ಜಾರಿಯಾದ್ರೆ ಏನಾಗುತ್ತೆ..?
ಸಾರಿಗೆ ನೌಕರರ ಹೋರಾಟದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದಾರೆ. ಬಹುಶಃ ಕೋಡಿಹಳ್ಳಿ ಚೀನಾದಿಂದ ಬಂದಿರಬೇಕು. ಅವರು ನಮ್ಮ ದೇಶದವರಲ್ಲಿ ಚೈನಾ ಮಾಡೆಲ್ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೋವಿಡ್ ಸಂದರ್ಭದಲ್ಲಿ ರೈತರು ಸಂಕಷ್ಟದಲ್ಲಿದ್ದರು. ರೈತರ ತರಕಾರಿಗಳು ರಸ್ತೆಗೆ ಬಿದ್ದಿತ್ತು. ಆಗ ಕೋಡಿಹಳ್ಳಿ ಚಂದ್ರಶೇಖರ್ ಎಲ್ಲಿದ್ದರು..? ಈರನಿಗೆ ಮಾನ ಮರ್ಯಾದೆ ಇಲ್ವಾ..?
ಈತನನ್ನು ಮೇಧಾವಿ ಅಂದುಕೋಂಡಿದ್ದೆ. ಈತ ವ್ಯವಸ್ಥೆಯನ್ನು ಬುಡಮೇಲು ಮಾಡುವವ ಎಂದು ಸೊಗಡು ಶಿವಣ್ಣ ಆಕ್ರೋಶ ಹೊರಹಾಕಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








