ಬಳ್ಳಾರಿ: ಗಣಿನಾಡು ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24 ಸಾವಿರದ ಗಡಿದಾಟಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ 503 ಜನರಿಗೆ ಸೊಂಕು ತಗುಲಿರುವುದು ಧೃಡವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 24,437 ಕ್ಕೆ ಏರಿಕೆಯಾಗಿದೆ.
ಇಂದು ಒಂದೇ ದಿನ 577 ಜನ ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಅಲ್ಲದೇ ಕಳೆದ 24 ಗಂಟೆಗಳಲ್ಲಿ ಕಿಲ್ಲರ್ ಕೊರೊನಾಗೆ 5 ಜನ ಮೃತಪಟ್ಟಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 286 ಕ್ಕೆ ಏರಿಕೆಯಾಗಿದೆ. ಇನ್ನೂ ಒಟ್ಟು 4,526 ಸಕ್ರೀಯ ಪ್ರಕರಣಗಳಿದ್ದು, ಇದುವರೆಗೆ 18625 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.