ಚಂದನ್ ಶೆಟ್ಟಿ ‘ನೋಡು ಶಿವ’ ಸಾಂಗ್ ನಲ್ಲಿ ‘ಕರಾವಳಿ ಸುಂದರಿ’ ಅನು..!

ಯುವಕರ ಪಾಲಿನ ರ್ಯಾಪರ್ ಕಿಂಗ್ ಆಗಿರುವ ಕನ್ನಡದ ಸೂಪರ್ ರ್ಯಾಪರ್ ಚಂದನ್ ಶೆಟ್ಟಿ ತಮ್ಮ ಡಿಫರೆಂಟ್ ಸಾಂಗ್ ಗಳ ಮೂಲಕವೇ ಜನ ಮನೆ ಗೆದ್ದಿದ್ದಾರೆ. ಅವರ ಒಂದೊಂದು ಸಾಂಗ್ ಕೇಳಿದ್ರೂ ನಿಂತಲೇ ಸ್ಟೆಪ್ಸ್ ಹಾಕ್ತಾರೆ ಅವರ ಅಭಿಮಾನಿಗಳು. ಡಿಫರೆಂಟ್ ಶೈಲಿಯಲ್ಲಿ ಪ್ರಾಕ್ಟಿಕಲ್ ಅಂಶಗಳ ಮೇಲೆ ಸಾಂಗ್ ಮಾಡುವ ಚಂದನ್ ಶೆಟ್ಟಿ ಟಕೀಲ, 3 ಪೆಗ್, ಚಾಕಲೇಟ್ ಗರ್ಲ್ ಸಿಕ್ಕಾಪಟ್ಟೆ ಹಿಟ್ ಆಗಿ ಪರಭಾಷೆ ಅಭಿಮಾನಿಗಳ ಗಮನ ಸೆಳೆದಿರೋ ಚಂದನ್ ಶೆಟ್ಟಿ ಸಾಂಗ್ಸ್ ನ ಮತ್ತೊಂದು ವಿಶೇಷತೆ ಎಂದ್ರೆ, ಹೀರೋಹಿನ್… ಪ್ರತಿ ಹಾಡಿಗೆ , ಹಾ ಹಾಡಿಗೆ ಸ್ಯೂಟ್ ಆಗುವಂತಹ ನಾಯಕಿಯರನ್ನ ಕರೆತರೋದೆ ರ್ಯಾಪರ್ ಚಂದನ್ ಶೆಟ್ಟಿ ವಿಶೇಷತೆ. ಹೀಗಾಗಿಯೇ ಅವರ ಪ್ರತಿ ಹಾಡಿನ ಮೇಲೂ ನಿರೀಕ್ಷೆ ಹೆಚ್ಚುತ್ತಲೇ ಹೋಗುತ್ತೆ.
‘ಯುವರತ್ನ’ ರಿಲೀಸ್ ಗೆ ಡೇಟ್ ಫಿಕ್ಸ್ : ಅಪ್ಪು ಅಭಿಮಾನಿಗಳು ಫುಲ್ ಖುಷ್..!
ಅಂದ್ಹಾಗೆ ಚಂದನ್ ಶೆಟ್ಟಿ ಅವರ ಹೊಸ ಆಲ್ಬಂಬ್ ಸಾಂಗ್ ಬರುತ್ತಿದೆ. ಈ ಹಾಡಿನಲ್ಲಿ ಕರಾವಳಿ ಬೆಡಗಿ , ಕನ್ನಡಿಗರ ಫೇವರೇಟ್ ನಟಿ , ಜೊತೆಜೊತೆಯಲಿ ಅನು ಕಾಣಿಸಿಕೊಳ್ತಿದ್ದಾರೆ. ಹೌದು ಸದ್ಯ ಈ ಸುದ್ದಿ ಟಾಕ್ ಆಫ್ ದಿ ಟೌನ್ ಆಗಿದೆ. ಎಲ್ಲಿ ನೋಡಿದ್ರು ಚಂದನ್ ಅವರ ಹೊಸ ಹಾಡಿನ ಬಗ್ಗೆಯೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಸಾಂಗ್ ಯಾವ ರೀತಿ ಇಬಹುದು ಎಂಬ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿದೆ.
ಅಂದ್ಹಾಗೆ ಚಂದನ್ ಶೆಟ್ಟಿ ಕಂಪೋಸಿಂಗ್ ಹಾಗೂ ಅವರ ಧ್ವನಿಯಲ್ಲಿ ಬರುತ್ತಿರೋ ಹಾಡು ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಮೋನಿಕಾ ಕುಳ್ಳರಿ ಆರ್ಟ್ಸ್ ಬ್ಯಾನರ್ ನ ಅಡಿ ರೆಡಿಯಾಗ್ತಿರುವ ಹಾಡಿಗೆ ಮೋನಿಕಾ ಬಂಡವಾಳ ಹೂಡ್ತಿದ್ದಾರೆ. ಅಂದ್ಹಾಗೆ ಹಾಡಿಗೆ ಲಿರಿಕ್ಸ್ ಬರೆದಿರೋರು ಸುಮಿತ್ ಎಂ.ಕೆ. ಸಾಂಗ್ ನಲ್ಲಿ ಚಂದನ್ ಶೆಟ್ಟಿ ಸಖತ್ತಾಗಿ ಸ್ಟೆಪ್ಸ್ ಹಾಕಲಿದ್ದು, ಈ ಸಾಂಗ್ ಮತ್ತೆ ಕನ್ನಡದಲ್ಲಿ ಧೂಳೆಬ್ಬಿಸಲಿದೆ ಎನ್ನಲಾಗ್ತಿದೆ. ಅಂದ್ಹಾಗೆ ಚಂದನ್ ಅವರು ಮತ್ತೆ ಡಿಫರೆಂಟ್ ಲುಕ್ ಮೂಲಕ ಅಭಿಮಾನಿಗಳ ಎದುರು ಎಂಟ್ರಿ ಕೊಡಲಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








