chiru sarja
ಕೊರೊನಾ ಲಾಕ್ ಡೌನ್ ಬಳಿಕ ಸುಮಾರು 7 ತಿಂಗಳ ನಂತರ ಚಿತ್ರಮಂದಿರಗಳು ಓಪನ್ ಆಗಿದ್ದು, ಚಿರು ಅಭಿನಯದ ಶಿವಾರ್ಜುನ ಸಿನಿಮಾ ರಾಜ್ಯಾದ್ಯಂತ ಮತ್ತೆ ರೀ ರಿಲೀಸ್ ಆಗಿದೆ.
ಚಿರು ಸರ್ಜಾನನ್ನು ತೆರೆ ಮೇಲೆ ನೋಡಿ ಅಭಿಮಾನಿಗಳು ಚಿರು ಸರ್ಜಾನನ್ನು ತೆರೆ ಮೇಲೆ ನೋಡಿ ಗೊಂಡಿದ್ದಾರೆ.
ಇತ್ತ ಚಿರು ತಾಯಿ ಸಹ ಮಗನನ್ನೆ ತೆರೆ ಮೇಲೆ ನೋಡಿ ಭಾವುಕಾರಗಿ ಕಣ್ಣೀರಿಟ್ಟಿದ್ದಾರೆ.
ಚಿರು ತಾಯಿ ಅಮ್ಮಾಜಿ ಸೇರಿದಂತೆ ಕುಟುಂಬದವರು ಮಗನ ಸಿನಿಮಾ ವೀಕ್ಷಿಸಲು ಸಂತೋಷ್ ಚಿತ್ರಮಂದಿರಕ್ಕೆ ಆಗಮಿಸಿದ್ದರು.
ಅಭಿಮಾನಿಗಳ ಜೊತೆ ಕುಳಿತು ಸಿನಿಮಾ ವೀಕ್ಷಿಸಿದ ಅಮ್ಮಾಜಿ ಮಗನನ್ನು ನೋಡಿ ಕಣ್ಣೀರಿಟ್ಟಿದ್ದಾರೆ.
ಲಾಕ್ ಡೌನ್ ಗೂ ಮೊದಲು ಶಿವಾರ್ಜುನ ಸಿನಿಮಾ ರಿಲೀಸ್ ಆಗಿತ್ತು.
ಆದರೆ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಕೊರೊನಾ ವೈರಸ್ ನಿಂದ ಚಿತ್ರಮಂದಿರಗಳನ್ನು ಬಂದ್ ಮಾಡಲಾಯಿತು.
ಇದೀಗ ಮತ್ತೆ ಚಿತ್ರಮಂದಿರಗಳು ಓಪನ್ ಆಗುತ್ತಿದ್ದಂತೆ ಶಿವಾರ್ಜುನ ಸಿನಿಮಾ ಬಿಡುಗಡೆ ಮಾಡಲಾಗಿದೆ.
ಚಿರು ಸಿನಿಮಾ ನೋಡಲು ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಚಿತ್ರಮಂದಿರಕ್ಕೆ ಆಗಮಿಸಿದ್ದರು.
ಇನ್ನೂ ಮತ್ತೊಂದು ವಿಚಾರವೆಂದ್ರೆ ನಾಳೆ ಅಂದ್ರೆ ಅಕ್ಟೋಬರ್ 17 ರಂದು ಚಿರು ಹುಟ್ಟು ಹಬ್ಬ.
ವಿಶೇಷ ಅಂದ್ರೆ ಅಂದೇ ಮೇಘನಾ ಮಡಿಲಿಗೆ ಜ್ಯೂನಿಯರ್ ಚಿರು ಆಗಮನವಾಗಲಿದೆ.
chiru sarja