ನಟ ವಿಜಯ್ ರಿಂದ ಕಲಿತ ಪಾಠ ತಿಳಿಸಿದ ಪ್ರಿಯಾಂಕಾ ಚೋಪ್ರಾ
ಬಾಲಿವುಡ್ ಮಟ್ಟದಲ್ಲಿ ಮಿಂಚುತ್ತಿರುವ ಹಲವು ನಟಿಯು ಮೊದ ಮೊದಲು ದಕ್ಷಿಣ ಭಾರತದ ಚಿತ್ರಗಳಿಂದ ಪ್ರಯಾಣವನ್ನ ಆರಂಭಿಸಿದ್ದಾರೆ. ಐಶ್ವರ್ಯ, ದೀಪಿಕಾ ಕತ್ರಿನಾ ಸೇರಿದಂತೆ ಹಲವು ನಟಿಯವರು ಇಲ್ಲಿಮದಲೇ ಬಣ್ಣದ ಜಗತ್ತಿಗೆ ಪ್ರವೇಶಿಸಿದ್ದಾರೆ. ಅದೇ ರೀತಿ ಈಗ ಹಾಲಿವುಡ್ ಮಟ್ಟದಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ಸಹ ಮದು ಕಾಲದಲ್ಲಿ ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದವರು.
ಪ್ರಿಯಾಂಕಾ ಚೋಪ್ರಾ ತಮಿಳನ್ ಎಂಬ ತಮಿಳು ಚಿತ್ರದೊಂದಿಗೆ ಪಾದಾರ್ಪಣೆ ಮಾಡಿದರು, ದಳಪತಿ ವಿಜಯ್ ಜೊತೆ ಜೋಡಿಯಾಗಿ ನಟಿಸಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ಮಾತನಾಡಿದ ಪ್ರಿಯಾಂಕ “2000 ರಲ್ಲಿ ತಾನು ಮಿಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದ ನಂತರ ಸಿನಿಮಾ ಜಗತ್ತಿಗೆ ಬಂದ ನಂತರ ಹೇಗಿದ್ದೆ ಎನ್ನುವುದನ್ನ ವಿವರಿಸಿದ್ದಾರೆ. ಅವರು ತಮ್ಮ ಮೊದಲ ಸಹನಟ ತಲಪತಿ ವಿಜಯ್ ಅವರಿಂದ ಕಲಿತದ್ದನ್ನು ಕುರಿತು ಹೇಳಿದ್ದಾರೆ. ಅವರಿಂದ ಕಲಿತ ಒಂದು ಪ್ರಮುಖ ಪಾಠವನ್ನು ಇಂದಿಗೂ ಅನುಸರಿಸುತ್ತಿದ್ದೇನೆ ಎಂದು ಪ್ರಿಯಾಂಕಾ ಹೇಳಿದ್ದಾರೆ..
ವ್ಯಾನಿಟಿ ಫೇರ್‌ಗೆ ನೀಡಿದ ಇತ್ತೀಚಿನ ಸಂದರ್ಶನದಲ್ಲಿ, “ನಾನು ಮಾಡಿದ ಮೊದಲ ಕೆಲವು ಚಲನಚಿತ್ರಗಳು ತಮಿಳನ್ ಎಂಬ ತಮಿಳು ಚಲನಚಿತ್ರ ಮತ್ತು ಎರಡು ಹಿಂದಿ ಚಲನಚಿತ್ರಗಳು – ಅಂದಾಜ್ ಮತ್ತು ದಿ ಹೀರೋ
ಆಗ ಸೆಟ್‌ಗೆ ಹೋಗುವಾಗ ನನಗೆ ಏನೂ ಗೊತ್ತಿರಲಿಲ್ಲ. ನಟನೆ ಎಂದರೆ ಒಳ್ಳೆಯ ಚಂದದ ಬಟ್ಟೆ ತೊಟ್ಟುಕೊಳ್ಳುವುದು, ಮೇಕಪ್ ಹಾಕಿಕೊಳ್ಳುವುದು ಅಷ್ಟೆ ಎಂದುಕೊಂಡಿದ್ದೆ ಆದರೆ ನಂತರ ಗೊತ್ತಾಯಿತು ಅದು ಎಷ್ಟು ಕಷ್ಟವೆಂಬುದು, ಪೇಪರ್‌ನಲ್ಲಿ ಬರೆದ ಸಂಭಾಷಣೆಯನ್ನು ಎದುರು ಯಾವುದೇ ವ್ಯಕ್ತಿ ಇಲ್ಲದೇ ಇದ್ದರು ಇದ್ದಾನೆಂದು ಕಲ್ಪಿಸಿಕೊಂಡು ಹೇಳುವುದು, ಪ್ರತಿಕ್ರಿಯಿಸುವುದು ಸುಲಭದ ಕಾರ್ಯವಲ್ಲ” ಎಂದು ಪ್ರಿಯಾಂಕಾ ಹೇಳಿದ್ದಾರೆ.
ನಟ ವಿಜಯ್ – ಅವರು ನನ್ನ ಜೀವನದಲ್ಲಿ ಮೊದಲ ಕೆಲವು ಪ್ರಭಾವಶಾಲಿಗಳಲ್ಲಿ ಒಬ್ಬರು, ಅವರು ಸೆಟ್‌ನಲ್ಲಿ ಅಪಾರ ನಮ್ರತೆಯನ್ನು ಹೊಂದಿದ್ದರು, ಅವರು ಒಮ್ಮೆ ಸೆಟ್‌ಗೆ ಬಂದರೆ, ಅವರು ಎಂದಿಗೂ ಸೆಟ್‌ನಿಂದ ಹೊರಹೋಗುವುದಿಲ್ಲ, ಮತ್ತು ನಾನು ಈಗಲೂ ಅದನ್ನು ಮಾಡುತ್ತೇನೆ, ನಾನು ತುಂಬಾ ಅಪರೂಪವಾಗಿ ಹಿಂತಿರುಗುತ್ತೇನೆ ಶಾಟ್‌ಗಳ ನಡುವೆ ನಾನು ತುಂಬಾ ಸಮಯ ಕಾಯಬೇಕಾಗದಿದ್ದರೆ. ನಾನು ಸಾಮಾನ್ಯವಾಗಿ ಸೆಟ್‌ನಲ್ಲಿ ಸುತ್ತಾಡುತ್ತಿರುತ್ತೇನೆ. ನಾವು ಏಕೆ ವಿಭಿನ್ನ ಶಾಟ್‌ಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬುದನ್ನು ಅರ್ಥಮಾಡಿಕೊಳ್ಳಲು ನಾನು ಬಯಸುತ್ತೇನೆ. ನಾನು ಸಿಬ್ಬಂದಿಯೊಂದಿಗೆ ಮಾತನಾಡಲು ಬಯಸುತ್ತೇನೆ. ನಾನು ಜೊತೆಯಲ್ಲಿರಲು ಇಷ್ಟಪಡುತ್ತೇನೆ” ಎಂದು ಅವರು ವಿವರಿಸಿದರು.








