ಪಂಚರಾಜ್ಯ ಚುನಾವಣೆಯ ಆಚೆ-ಪಿಚೆ – Saaksha Tv
ಪಂಚರಾಜ್ಯ ಚುನಾವಣೆ: ಎರಡು ತಿಂಗಳ ಸುದೀರ್ಘ ಚುನಾವಣಾ ಪ್ರಚಾರದ ನಂತರ, ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದೆ.
ಇಂದಿನ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 4 ರಾಜ್ಯಗಳಲ್ಲಿ, ಆಪ್ 1 ರಾಜ್ಯದಲ್ಲಿ ಬಹುಮತವನ್ನು ಪಡೆದುಕೊಂಡಿದೆ. ಉತ್ತರಾಖಂಡ ಮತ್ತು ಗೋವಾದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲು ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದು, ಅಂತಿಮ ಫಲಿತಾಂಶಕ್ಕೆ ಕಾದು ಕುಳಿತಿದೆ. ಆದರೆ ಗೋವಾದಲ್ಲಿ ಕರ್ನಾಟಕ ರಾಜ್ಯದ KPCC ಅಧಕ್ಷ ಡಿ. ಕೆ ಶಿವಕುಮಾರ ಬೀಡು ಬಿಟ್ಟಿದ್ದು, ಗೋವಾದಲ್ಲಿ ಸರಕಾರ ರಚಿಸಲು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ.
ಇನ್ನೂ ಆಪ್ ದೆಹಲಿಯಲ್ಲಿ ಮೊದಲ ಬಾರಿಗೆ 67 ಸ್ಥಾನಗಳಲ್ಲಿ ಗೆಲ್ಲುವ ಮುಖಾಂತರ ಅಧಿಕಾರದ ಗದ್ದುಗೆ ಹಿಡದಿತ್ತು ನಂತರ 2020 ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಮತ್ತೆ ಆಪ್ ಬಹುಮತ ಪಡೆಯುವ ಮುಖಾಂತರ ಎರಡನೇ ಬಾರಿಗೆ ರಾಜ್ಯದಲ್ಲಿ ಅಧಿಕಾರವನ್ನು ತನ್ನದಾಗಿಸಿಕೊಂಡಿತು. ಇದೀಗ ಆಪ್ ಪಂಜಾಬ್ ನಲ್ಲಿ ಉಳಿದ ಪಕ್ಷಗಳನ್ನು ಕ್ಲೀನ್ ಸ್ವಿಪ್ ಮಾಡುವ ಮೂಲಕ ಊಹೇಗು ನಿಲುಕದ ಬಹುಮತದತ್ತ ದಾಪುಗಾಲು ಹಾಕಿದೆ. ಈ ಮೂಲಕ ಅರವಿಂದ್ ಕೇಜ್ರಿವಾಲ್ ರಾಷ್ಟ್ರೀಯ ನಾಯಕರಾಗಿ ಹೊರಹೊಮ್ಮುವ ಮೊದಲ ಹೆಜ್ಜೆಯಾಗಿದೆ. ಪಂಜಾಬ್ ನಲ್ಲಿ ಕಾಂಗ್ರೆಸ್ ತನ್ನ ಅಧಿಕಾರದ ದಾಹಕ್ಕಾಗಿ ಆತಂತರಿಕ ಕಲಹ ಕಾರಣದಿಂದ ಕಾಂಗ್ರೆಸ್ ಮಕಾಡೆ ಮಲಗಿಕೊಂಡಿದು. ಇದರ ಲಾಭ ಪಡೆದುಕೊಂಡ ಆಪ್ ಅಧಿಕಾರದ ಚುಕ್ಕಾಣಿ ಹಿಡುತ್ತಿದೆ.
ಹಾಗೇ ಉತ್ತರ ಪ್ರದೇಶದಲ್ಲಿ ಫೈರ್ ಬ್ರ್ಯಾಂಡ್ ಯೋಗಿ 2017ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 319 ಸ್ಥಾನಗಳಲ್ಲಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಇದು ಯಾರು ಕೂಡಾ ಊಹಿಸಿದ ಗೆಲವು ಬಿಜೆಪಿಯದ್ದಾಗಿತ್ತು. ಇನ್ನೂ ವಿಶೇಷವೆಂದರೆ ಯೋಗಿ ಆದಿತ್ಯನಾಥ್ ಮುಖ್ಯಂತ್ರಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದರು. ಇದೀಗ ಬಿಜೆಪಿ ಮತ್ತೊಮ್ಮೆ ಮ್ಯಾಜಿಕ್ ಮಾಡಿದೆ. ಅಧಿಕಾರದ ಗದ್ದುಗೆ ಹಿಡಯಬೇಕಾದ ಮ್ಯಾಜಿಕ್ ನಂಬರ್ ದಾಟಿ ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಬಿಜೆಪಿಯ ಈ ಗೆಲುವಿಗೆ ರಾಮಮಂದಿರ ನಿರ್ಮಾಣ ಮತ್ತು ಕಾಶಿ ಕಾರಿಡಾರ್ ನಿರ್ಮಾಣ ಪ್ಲಸ್ ಪಾಯಿಂಟ್ ಆಗಿದೆ. ಇದರ ಜೊತೆಗೆ ಅಲ್ಲಿನ ಅಪರಾಧ ಪ್ರಕರಣಗಳನ್ನು ಕಡಿಮೆಗೊಳಿಸಿದ್ದು ಮತ್ತು ತ್ರಿಬಲ್ ತಲಾಕ್ ನಿಷೇಧ ವರವಾಗಿ ಪರಿಣಮಿಸಿದೆ.
ಈ ಮೂಲಕ ಪ್ರತಿಸ್ಪರ್ಧಿಗಳನ್ಜು ದೂಳಿಪಟ ಮಾಡಿದೆ. ಆದರೆ ಹೋದ ಸಾರಿಗಿಂತ ಈ ಬಾರಿ 247 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರು ಕಳೆದ ಬಾರಿಗಿಂತ 72 ಸ್ಥಾನಗಳಲ್ಲಿ ಹಿನ್ನಡೆ ಸಾಧಿಸಿದೆ. ಇನ್ನೂ ಅಂತಿಮ ಫಲಿತಾಂಶದವರೆಗು ಕಾದುನೋಡಬೇಕಿದೆ.
ಅಲ್ಲದೇ ಮಣಿಪುರದಲ್ಲಿ ಬಿಜೆಪಿ ಬಹುಮತದ ಸನಿಹದಲ್ಲಿದೆ. ಈ ಮೂಲಕ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಬಿಜಿಪಿ ಯಾವ ರಾಜಕೀಯ ದಾಳ ಉರಳಿ ಅಧಿಕಾರದ ಗದ್ದುಗೆ ಏರುತ್ತೆ ಎನ್ನುವುದು ಕಾದು ನೋಡಬೇಕಿದೆ.
ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಅಧಿಕಾರದಲ್ಲಿರುವುದರಿಂದ, ಫಲಿತಾಂಶಗಳು ಬಿಜಪಿಗೆ ಮಹತ್ವವಾಗಿದೆ. ಮುಂಬರುವ ಲೋಕಸಭಾ ಚುನಾವಣಗೆ ಇದು ಸಹಜವಾಗಿಯೇ ಪರಿಣಾಮ ಬೀರುವ ಸಾಧಧ್ಯತೆ ಇದೆ. ಕೊರೊನಾ, ಹಣದುಬ್ಬರ, ಕೃಷಿ ಕಾಯ್ದೆ ವೀರೋಧ ಮತ್ತು ನಿರುದ್ಯೋಗದ ನಿರ್ವಹಣೆಗಾಗಿ ಟೀಕೆಗೊಳಗಾಗಿರುವ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಈ ಫಲಿತಾಂಶಗಳು ನಿರ್ಣಾಯಕವಾಗಿದ್ದ, ಈ ಗೆಲುವಿನಿಂದ ಬಿಜೆಪಿ ನಿಟ್ಟುಸಿರು ಬಿಟ್ಟಿದೆ.