ಫೇಸ್ ಬುಕ್ ಹಿಂದಿಕ್ಕಿದ ಟಿಕ್ ಟಾಕ್ … ಜಾಗತಿಕ ಮಟ್ಟದಲ್ಲಿ ಹೊಸ ಸಾಧನೆ..!
ನವದೆಹಲಿ : ಟಿಕ್ ಟಾಕ್… ಸದ್ಯ ಜಾಗಗತಿಕ ಮಟ್ಟದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಒಂದು ಸೋಷಿಯಲ್ ಮೀಡಿಯಾ ಆಪ್. ಭಾರತದಲ್ಲಿ ಈಗಾಗಲೇ ನಾನಾ ಕಾರಣಗಳಿಂದ ಟಿಕ್ ಟಾಕ್ ಹಾಗೂ ಇನ್ನೂ ನೂರಾರು ಆಪ್ ಗಳನ್ನ ಬ್ಯಾನ್ ಮಾಡಲಾಗಿದೆ. ಅಂದ್ಹಾಗೆ ಟಿಕ್ ಟಾಕ್ ಗೆ ಅತಿ ಹೆಚ್ಚು ಫಾಲೋವರ್ಸ್ ಇದ್ದಿದ್ದು ಭಾರತದಲ್ಲಿಯೇ. ಆದ್ರೆ ಈ ಟಿಕ್ ಟಾಕ್ ಈಗ ಹೊಸ ಸಾಧನೆ ಮಾಡಿದೆ. ವಿಶ್ವದಾದ್ಯಂತ 2020 ರಲ್ಲಿ ಅತೀ ಹೆಚ್ಚು ಡೌನ್ ಲೋಡ್ ದಾಖಲೆಯಲ್ಲಿ ಫೇಸ್ ಬುಕ್ ಅನ್ನು ಹಿಂದಿಕ್ಕಿದೆ.
ಮೊಬೈಲ್ ಆಪ್ ಅನಾಲಿಟಿಕ್ಸ್ ಸಂಸ್ಥೆ ಅನ್ನಿ ಆಪ್ 2020ರ ಮೊಬೈಲ್ ಆಪ್ ಟ್ರೆಂಡ್ಸ್ ಬಗ್ಗೆ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ. ಆಪ್ ಅನ್ನಿ ರಿಪೋರ್ಟ್ ನ ಪ್ರಕಾರ, ಅತಿಹೆಚ್ಚು ಬಾರಿ ಡೌನ್ ಲೋಡ್ ಆಗಿರುವ ಆಪ್ ಟಿಕ್ ಟಾಕ್. ಈ ಮೂಲಕ ಫೇಸ್ ಬುಕ್ ಅನ್ನು ಹಿಂದಿಕ್ಕಿದೆ.
2020ರ ಟಾಪ್ 10 ಟ್ವೀಟ್ ಪರ್ಸನ್ಸ್ ಅಲ್ಲಿ ನಮೋ , ಬಿಡೆನ್ : ಮೊದಲಿಗರು ಯಾರು..!
ಟಿಕ್ ಟಾಕ್ ಮೂರು ಸ್ಥಾನಗಳನ್ನು ಜಿಗಿದಿದ್ದು, ಅತಿ ಹೆಚ್ಚು ಡೌನ್ ಲೋಡ್ ಆಗಿರುವ ಆಪ್ ಆಗಿ ಹೊರಹೊಮ್ಮಿದೆ. 2021ರ ವೇಳೆಗೆ ಈ ಆಪ್ 1 ಬಿಲಿಯನ್ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಇನ್ನೂ 2ನೇ ಸ್ಥಾನದಲ್ಲಿ ಫೇಸ್ ಬುಕ್ ಇದೆ. 3ರಲ್ಲಿ ವಾಟ್ಸಾಪ್ ನಂತರ ಇನ್ ಸ್ಟಾಗ್ರಾಂಗಳು ಇದ್ದಾವೆ. ಇನ್ನೂ ವಿಡಿಯೋ ಕಾನ್ಫರೆನ್ಸಿಂಗ್ ಆಪ್ ಝೂಮ್ ವಿಶ್ವದಲ್ಲಿಯೇ ಅತಿ ಹೆಚ್ಚು ಡೌನ್ ಲೋಡ್ ಆದ ಆಪ್ ಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








