ಬ್ರಹೋಸ್ ಕ್ಷಿಪಣಿ ಉಡಾವಣೆ ಯಶಸ್ವಿ Saaksha Tv
ನವದೆಹಲಿ: ಅತ್ಯಾಧುನಿಕ ಸೂಪರ್‌ಸಾನಿಕ್ ಬ್ರಹ್ಮೋಸ್ ನ್ನು, ಐಎನ್‌ಎಸ್ ವಿಶಾಖಪಟ್ಟಣದದಿಂದ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ. ಈ ಕ್ಷಿಪಣಿಯು ತನ್ನ ಗುರಿಯನ್ನು ನಿಖರವಾಗಿ ತಲುಪಿದೆ ಎಂದು ಡಿಆರ್‌ಡಿಒ ತಿಳಿಸಿದೆ. ಇದು ಭಾರತೀಯ ನೌಕಾಪಡೆಗೆ ಬಲ ತುಂಬಿದ್ದು, ನೌಕಾಪಡೆ ಸಂತಸಗೊಂಡಿದೆ.
ಭಾರತದ ಡಿಆರ್ ಡಿಒ ಮತ್ತು ರಷ್ಯಾದ ಎನ್ ಪಿ ಒಎಂ ಜಂಟಿ ಸಹಭಾಗಿತ್ವದಲ್ಲಿ ಈ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ತಯಾರಿಸಿತ್ತು. ಈ ಕ್ಷಿಪಣಿಗಳು ಶಬ್ಧಕ್ಕಿಂತ 3 ಪಟ್ಟು ಹೆಚ್ಚು ವೇಗವಾಗಿ ಹಾರಬಲ್ಲ ಸಾಮರ್ಥ್ಯ ಹೊಂದಿವೆ. ಈ ಕ್ಷಿಪಣಿಯು ಮೊದಲಗಿಂತಲು ಹೆಚ್ಚು ಶಕ್ತಿಶಾಲಿಯಾಗಿದ್ದು ಕ್ಷಿಪಣಿಯು ಗೊತ್ತುಪಡಿಸಿದ ಗುರಿ ಹಡಗನ್ನು ನಿಖರವಾಗಿ ತಲುಪಿದೆ” ಎಂದು ಡಿಆರ್‌ಡಿಒ ಟ್ವೀಟ್ ಮಾಡಿದೆ.
ಭಾರತೀಯ ನೌಕಾಪಡೆ, ಡಿಆರ್‌ಡಿಒ ಮತ್ತು ಬ್ರಹ್ಮೋಸ್ ಕ್ಷಿಪಣಿಗಳ ಅದ್ಭುತ ತಂಡದ ಕಾರ್ಯವನ್ನು ನಾನು ಅಭಿನಂದಿಸುತ್ತೇನೆ” ಎಂದು ರಾಜನಾಥ ಸಿಂಗ್ ಟ್ವೀಟ್ ಮಾಡಿದ್ದಾರೆ. ಬ್ರಹ್ಮೋಸ್ ಕ್ಷಿಪಣಿ 2.8 ಮ್ಯಾಕ್ (Mach) ವೇಗದಲ್ಲಿ ಅಥವಾ ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ಹಾರುತ್ತದೆ.