ಭಾರತೀಯ CAPF ಹುತಾತ್ಮ ಯೋಧರಿಗೆ 35 ಲಕ್ಷ ರೂ ನೆರವು
ರಕ್ಷಣಾ ಕಾರ್ಯಾಚರಣೆಗಳಲ್ಲಿ ಹುತಾತ್ಮರಾಗುವ ಭಾರತೀಯ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (CAPF) ಯೋಧರ ಕುಟುಂಬ ನೀಡುತ್ತಿದ್ದ ನೆರವಿನ ಮೊತ್ತವನ್ನ 35 ಲಕ್ಷಕ್ಕೆ ಹೆಚ್ಚಿಸಲಾಗಿದೆ.
2021 ರ ನವೆಂಬರ್ ನಿಂದ ಸಿ ಎ ಪಿ ಎಫ್ ಹುತಾತ್ಮ ಯೋಧರ ಹಣದ ನೆರವನ್ನ ಹೆಚ್ಚಿಸುವುದಾಗಿ ಕೇಂದ್ರ ಗೃಹ ಇಲಾಖೆಯ ಮೂಲಗಳು ತಿಳಿಸಿವೆ. ಕಾರ್ಯಾಚರಣೆ ಸಂದರ್ಭಗಳಲ್ಲಿ ಹುತಾತ್ಮರಾದ ಎಲ್ಲಾ CAPF ಸಿಬ್ಬಂದಿಗೂ ಏಕಕಾಲಕ್ಕೆ 35 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವುದಕ್ಕೆ ಕೇಂದ್ರ ಗೃಹ ಸಚಿವಾಲಯ ಬಯಸಿದೆ.
ಕಾರ್ಯಚರಣೆಯಲ್ಲಿ ಮೃತ ಪಡುವ ಸೈನಿಕರಿಗೆ ಮಾತ್ರ ನಿಯಮ ಅನ್ವಯವಾಗುತ್ತದೆ.ಎನ್ಕೌಂಟರ್, ಗುಂಡಿನ ಚಕಮಕಿ ಬಾಂಬ್ ದಾಳಿಯಂತಹ ಸಮಯದಲ್ಲಿ ಹುತಾತ್ಮರಾದ ಕುಟುಂಬದವರಿಗೆ ಈ ನಿಧಿಯಿಂದ ಏಕಕಾಲಕ್ಕೆ 35 ಲಕ್ಷ ರುಪಾಯಿ ದೊರೆಯಲಿದೆ. ಇತರ ರೀತಿಯಲ್ಲಿ ಮೃತಪಡುವ ಸೈನಿಕರ ನೆರವಿನ ಪ್ರಮಾಣದಲ್ಲಿ ಯಾವುದೆ ಬದಲಾವಣೆ ಆಗಿಲ್ಲ ಎಂದು ತಿಳಿದುಬಂದಿದೆ.








