ಬೆಂಗಳೂರು: ರಾಜಧಾನಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಇನ್ನೂ ಒಂದು ವಾರ ಲಾಕ್‍ಡೌನ್ ವಿಸ್ತರಣೆ ಮಾಡಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಷ್ಟೊಂದು ಒಲವು ತೋರಿಸುತ್ತಿಲ್ಲ.
ದೇಶಾದ್ಯಂತ ಮಾಡಿದ್ದ ಲಾಕ್‍ಡೌನ್ ಸಡಿಲಗೊಂಡ ಬಳಿಕ ಈಗಷ್ಟೇ ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಹೀಗಾಗಿ ಮತ್ತೆ ಮತ್ತೆ ಲಾಕ್‍ಡೌನ್ ಮಾಡಿದರೆ ಆರ್ಥಿಕ ಚಟುವಟಿಕೆಗಳ ಮೇಲೆ ಹೊಡೆತ ಬೀಳುತ್ತದೆ ಎಂಬುದು ಬಿಎಸ್‍ವೈ ವಾದ.
ಬೆಂಗಳೂರಿನ 8 ಕಂಟೇನ್‍ಮೆಂಟ್ ವಲಯಗಳ ಉಸ್ತುವಾರಿ ಸಚಿವ ಜತೆ ಸಭೆ ನಡೆಸುತ್ತಿರುವ ಯಡಿಯೂರಪ್ಪ, ಮತ್ತೊಂದು ವಾರ ಲಾಕ್‍ಡೌನ್ ವಿಸ್ತರಣೆ ಮಾಡಲೇ ಬೇಕು ಎಂಬ ಉಸ್ತುವಾರಿ ಸಚಿವರ ಆಗ್ರಹಕ್ಕೆ ಕಿಡಿಕಿಡಿಯಾಗಿದ್ದಾರೆ.
ಈ ಲಾಕ್‍ಡೌನ್ ಮುಗಿಯಲು ಇನ್ನೂ ನಾಲ್ಕು ದಿನ ಬಾಕಿ ಇದೆ. ಈಗ ಅದರ ಮಾತೇಕೆ, ಇನ್ನು ಎರಡು ದಿನ ಸುಮ್ಮನಿರಿ ಎಂದು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಲಾಕ್‍ಡೌನ್ ಬಗ್ಗೆ ಗೊಂದಲದ ಬಹಿರಂಗ ಹೇಳಿಕೆ ನೀಡಬಾರದು. ನಿಮ್ಮ ನಿಮ್ಮ ವಲಯಗಳಲ್ಲಿ ಕೊರೊನಾ ನಿಯಂತ್ರಣ ಮಾಡಲೇಬೇಕು. ನಿಯಂತ್ರಣ ಮಾಡದೇ ಹೋದರೆ ಅದಕ್ಕೆ ನೀವೇ ಜವಾಬ್ದಾರರು. ಹೀಗಾಗಿ ಪದೇ ಪದೆ ಸಮಸ್ಯೆ ಹೇಳಿಕೊಂಡು ನನ್ನ ಬಳಿ ಬರಬೇಡಿ. ಅವಶ್ಯಕತೆ ಇದ್ದರೆ ಎಷ್ಟು ಬೇಕೋ ಅಷ್ಟು ಆಂಬ್ಯುಲೆನ್ಸ್ ಖರೀದಿ ಮಾಡಿ. ಇಲ್ಲದೆ ಹೋದರೆ ಬಾಡಿಗೆ ಪಡೆದುಕೊಳ್ಳಿ. ರೋಗಿಗಳಿಗೆ ಚಿಕಿತ್ಸೆಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಭಾನುವಾರದೊಳಗೆ ಕಂಟೈನ್‍ಮೆಂಟ್ ಝೋನ್‍ಗಳಲ್ಲಿನ ಪರಿಸ್ಥಿತಿ ಬಗ್ಗೆ ವರದಿ ಕೊಡುವಂತೆ ಸಚಿವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಈ ಒಂದು ಕೆಲಸ ಮಾಡಿ ನೋಡಿ ನಿಮ್ಮ ಮನೆಯಲ್ಲಿ ಅದೃಷ್ಟದ ಲಕ್ಷ್ಮಿ ನಿಮ್ಮ ಮನೆ ಬಾಗಿಲನ್ನ ತಟ್ಟುತ್ತಾಳೆ …
ಕೆಲವೊಬ್ಬರ ಮನೆಯಲ್ಲಿ ಚೆನ್ನಾಗಿ ನಡೆಯುತ್ತಿದ್ದ ಕೆಲಸ ಕಾರ್ಯಗಳು ಆಕಸ್ಮಿಕವಾಗಿ ಎಲ್ಲವೂ ಉಲ್ಟಾಪಲ್ಟಾ ಆಗಿಹೋಗುತ್ತದೆ. ಇಷ್ಟೇ ಅಲ್ಲದೆ ಕೆಲವೊಂದು ಬಾರಿ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗಿ ತಮ್ಮದೇ ಮನೆಯಲ್ಲಿ...








