`ಮದಗಜ’ ಸಿನಿಮಾದ ತೆಲುಗು, ತಮಿಳು ಟೀಸರ್ ರಿಲೀಸ್..! Madagaja saaksha tv
ರೋರಿಂಗ್ ಸ್ಟಾರ್ ಶ್ರೀ ಮುರುಳಿ ಅಭಿನಯದ ಮದಗಜ ಸಿನಿಮಾದ ಕನ್ನಡದ ಟೀಸರ್ ಈಗಾಗಲೇ ರಿಲೀಸ್ ಮೆಚ್ಚುಗೆ ಪಡೆದುಕೊಂಡಿದೆ. ಇದರ ಬೆನ್ನಲ್ಲೆ ಇದೀಗ ತೆಲುಗು, ತಮಿಳು ಭಾಷೆಯ ಟೀಸರ್ ಕೂಡ ರಿಲೀಸ್ ಆಗಿದೆ.
ಈ ಹಿಂದೆ ಒಂದೇ ಬಾರಿ ಕನ್ನಡ, ತೆಲುಗು, ತಮಿಳು, ಹಿಂದಿಯಲ್ಲಿ ಟೀಸರ್ ಬಿಟ್ಟಿದ್ದ ಮದಗಜ ತಂಡ ಇದೀಗ ಹಂತ ಹಂತವಾಗಿ ಬೇರೆ ಭಾಷೆಗಳ ಟೀಸರ್ ರಿಲೀಸ್ ಮಾಡಿದೆ.
ಇನ್ನು ಟೀಸರ್ ನಲ್ಲಿ ಪ್ರಮುಖ ಅಂಶವೆಂದರೇ ಅದು… ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಧ್ವನಿ.
ಹೌದು…! ಮೊದಲ ಟೀಸರ್ ನಂತೆಯೇ ಈ ಟೀಸರ್ ನಲ್ಲೂ ಶ್ರೀ ಮುರಳಿಯವರ ಧ್ವನಿ ಪ್ರಮುಖ ಆಕರ್ಷಣೆಯಾಗಿದೆ. ಜೊತೆಗೆ ಎಲ್ಲಾ ಭಾಷೆಗಳಲ್ಲೂ ಮುರಳಿಯವರೇ ಡಬ್ ಮಾಡಿದ್ದಾರೆ.
ಮುಖ್ಯವಾಗಿ ಮದಗಜ ತೆಲುಗು ಟೀಸರ್ ಗೆ ಕನ್ನಡ ಟೀಸರ್ ಗೆ ಸಿಕ್ಕ ಪ್ರತಿಕ್ರಿಯೆ ಸಿಗುತ್ತಿದ್ದು, ತೆಲುಗು ಸಿನಿ ಪ್ರೇಕ್ಷಕರು ಚಿತ್ರತಂಡಕ್ಕೆ ಶುಭಕೋರುತ್ತಿದ್ದಾರೆ.
ಇನ್ನು ಈ ಬಹು ನಿರೀಕ್ಷಿತ ಸಿನಿಮಾಗೆ ಅಯೋಗ್ಯ ಸಿನಿಮಾದ ನಿರ್ದೇಶಕ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತವಿದೆ.
ಉಮಾಪತಿ ಬ್ಯಾನರ್ ನಡಿ ಉಮಾಪತಿ ಶ್ರೀನಿವಾಸ್ ಗೌಡ ಸಿನಿಮಾವನ್ನು ಭಾರಿ ಬಜೆಟ್ ನಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರ ಇದೇ ಡಿಸೆಂಬರ್ ನಲ್ಲಿ ರಿಲೀಸ್ ಆಗಲಿದೆ.