ಮರಾಠ ಪ್ರಾಧಿಕಾರ ರಚನೆ | ಸಮಾಜ ಒಡೆಯೋ ಕೆಲಸ ಯಾಕೆ
ಬೆಂಗಳೂರು : ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರದ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, ಯಾಕೆ ಸಮಾಜ ಒಡೆಯೋ ಕೆಲಸ ಮಾಡ ಬೇಕು ಎಂದು ಪ್ರಶ್ನಿಸಿದ್ದಾರೆ.
ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿರುವ ಜನರಿಗೆ ಕೊಡಬಾರದು ಎಂದೇನಿಲ್ಲ.
ಕಾಂಗ್ರೆಸ್ ಜನರ ಆಯ್ಕೆಯಲ್ಲ : `ಕೈ’ ನಾಯಕತ್ವದ ವಿರುದ್ಧ ಕಪಿಲ್ ಕಿಡಿ
ಆದರೆ ಅವರನ್ನು ಯಾಕೆ ಪ್ರತ್ಯೇಕವಾಗಿ ನೋಡ್ತಿರಾ..? ಮೊದಲು ನಾವು ಅವರಿಗೆ ಸಹಾಯ ಮಾಡಿಲ್ವಾ..? ಯಾಕೆ ಸಮಾಜ ಹೊಡೆಯೋ ಕೆಲಸ ಮಾಡ ಬೇಕು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಬಳಿಕ ರಾಜ್ಯಸಭೆ ಚುನಾವಣೆ ಬಗ್ಗೆ ಮಾತನಾಡಿ, ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವ ವಿಚಾರದ ಬಗ್ಗೆ ಯೋಚನೆ ಮಾಡುತ್ತಿದ್ದೇವೆ.
ಚುನಾವಣೆಯಲ್ಲಿ ಸೋತವರಿಗೆ ಮಂತ್ರಿಸ್ಥಾನ ಯಾಕೆ : ರೇಣುಕಾಚಾರ್ಯ
ಹೈಕಮಾಂಡ್ ಜೊತೆಗೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ರಾಜ್ಯಸಭಾ ಕ್ಷೇತ್ರ ಬಿಜೆಪಿಯಿಂದಲೇ ಖಾಲಿ ಆಗಿರುವುದು.
ನಮ್ಮ ಬಳಿ ಬೇಕಾದಷ್ಟು ನಂಬರ್ ಕೂಡಾ ಇಲ್ಲ, ಎಲ್ಲವನ್ನೂ ಪರಿಗಣಿಸಿ ಹೈಕಮಾಂಡ್ ಜೊತೆಗೆ ಮಾತನಾಡಿ ಇಂದು ಸಂಜೆ ಹೇಳುತ್ತೇನೆ ಎಂದರು.

ಇದೇ ವೇಳೆ ಬೆಳಗಾವಿ ಲೋಕಸಭಾ, ಬಸವಕಲ್ಯಾಣ ಮತ್ತು ಮಸ್ಕಿ ವಿಧಾನಸಭಾ ಕ್ಷೇತ್ರಗಳ ಬೈ ಎಲೆಕ್ಷನ್ ಬಗ್ಗೆ ಪ್ರತಿಕ್ರಿಯಿಸಿ, ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಎಂ.ಬಿ.ಪಾಟಿಲ್ ಹಾಗೂ ಬಸವಕಲ್ಯಾಣ ಮತ್ತು ಮಸ್ಕಿಗೆ ಈಶ್ವರ ಖಂಡ್ರೆ ಹಾಗೂ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಸಮಿತಿ ಮಾಡಲಾಗಿದೆ.
ಸಮಿತಿ ವರದಿ ಬಂದ ನಂತರ ಅಭ್ಯರ್ಥಿ ಆಯ್ಕೆ ಸೇರಿದಂತೆ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








