ಮಹಾಮಾರಿಯ ತವರು ಚೀನಾದಲ್ಲಿ ಡೆಲ್ಟಾ ರೂಪಾಂತರದ ಹಾವಳಿ..!
ಚೀನಾದಿಂದ ಇಡೀ ವಿಶ್ವಕ್ಕೆ ಹರಡಿರುವ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ 2 ವರ್ಷಗಳಿಂದ ಜಗತ್ತಿನ ಜನರು ಕಷ್ಟ ಪಡ್ತಿದ್ದಾರೆ.. ಲಾಕ್ ಡೌನ್ , ಕ್ವಾರಂಟೈನ್ ನಿಂದಾಗಿ ಜನರು ಮಾನಸಿಕ ಖಿನ್ನತೆಗೂ ಒಳಗಾಗ್ತಿದ್ದಾರೆ.. ಮತ್ತೊಂದೆಡೆ ಕೆಲಸಗಳಿಲ್ಲದೆ ಅದೆಷ್ಟೋ ಕುಟುಂಬಗಳು ಪರದಾಡಿವೆ.. ಇನ್ನೂ ಕಡುಬಡವರು ಒಂದು ಹೊತ್ತಿನ ಊಟಕ್ಕೂ ಪರಿತಪಿಸಿದ್ದಾರೆ… ಕೂಲಿ ಕಾರ್ಮಿಕರು ಕಷ್ಟ ಪಟ್ಟಿದ್ದಾರೆ.. ಇದೇ ಪರಿಸ್ಥಿತಿ ಬಾರತದಲ್ಲೂ ಇದೆ..
ಈ ನಡುವೆ ಇನ್ನೇನು ಕೋವಿಡ್ ಹಾವಳಿ ಕಡಿಮೆಯಾಯ್ತು ಅನ್ನೋ ಸಮಾಧಾನದಲ್ಲಿದ್ದ ಜನರಿಗೆ ಮತ್ತೆ ಸೋಂಕು ಪ್ರಕರಣಗಳು ಹೆಚ್ಚಳವಾಗ್ತಿರೋದು ಆತಂಕ ಹುಟ್ಟಿಸಿದೆ.. ಈ ನಡುವೆ ಅಮೆರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಏರಿಕೆಯಾಗಲು ಡೆಲ್ಟಾ ರೂಪಾಂತರವೇ ಕಾರಣ ಎನ್ನಲಾಗಿದೆ.
ಅಲ್ಲದೇ ಕೊರೊನಾ ವೈರಸ್ನ ಡೆಲ್ಟಾ ರೂಪಾಂತರವು ನಿರ್ದಿಷ್ಟವಾಗಿ ಮಕ್ಕಳನ್ನಷ್ಟೇ ಗುರಿಯಾಗಿಸಿಲ್ಲ ಎಂದು WHO ತಿಳಿಸಿದೆ. ಸಾಮಾಜಿಕವಾಗಿ ಹೆಚ್ಚು ಬೆರೆಯುವವರಲ್ಲಿ ಡೆಲ್ಟಾ ರೂಪಾಂತರವು ಹೆಚ್ಚು ಹರಡುತ್ತಿರುವುದು ಕಂಡುಬಂದಿದೆ ಎಂದು WHO ಕೋವಿಡ್ ತಾಂತ್ರಿಕ ತಂಡದ ಮುಖ್ಯಸ್ಥೆ, ಅಮೆರಿಕದ ತಜ್ಞೆ ಮಾರಿಯಾ ವ್ಯಾನ್ ಕೆರ್ಖೋವ್ ಹೇಳಿದ್ದಾರೆ.
ವೈರಸ್ ನ ಈ ಹಿಂದಿನ ರೂಪಾಂತರಗಳಿಗಿಂತ ವೇಗವಾಗಿ ಹರಡಬಲ್ಲದ್ದಾಗಿರುವ ಡೆಲ್ಟಾ ರೂಪಾಂತರ ಈಗ 132 ದೇಶಗಳಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.. ಅಷ್ಟೇ ಅಲ್ಲ ಕೋವಿಡ್ ಮಾಹಾಮಾರಿಯ ತವರೂರು ಚೈನಾದಲ್ಲಿ ಡೆಲ್ಟಾ ರೂಪಾಂತರ ಹಾವಳಿ ಹೆಚ್ಚಾಗಿದ್ದು ನಿಯಮಗಳನ್ನ ಮತ್ತಷ್ಟು ಕಠಿಣಗೊಳಿಸಲಾಗಿದೆ.