ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ರಾಜಕೀಯ ಮುಖಂಡರು ಮಹಾರಾಷ್ಟ್ರ ಸರ್ಕಾರ ಹಾಗೂ ಬಾಲಿವುಡ್ ನ ಘಟಾನುಘಟಿ ನಾಯಕರ ವಿರುದ್ಧ ಧ್ವನಿ ಎತ್ತಿರುವ ನಟಿ ಕಂಗನಾ ಅವರ ಮುಂಬೈ ಕಚೇರಿಯನ್ನು ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ನೆಲಸಮ ಮಾಡುತ್ತಿದ್ದಾರೆ.
ಕಂಗನಾ ರಣಾವತ್ ಅಕ್ರಮವಾಗಿ ಕಚೇರಿ ನಿರ್ಮಿಸಿದ್ದಾರೆ ಎಂದು ಆರೋಪಿಸಿ ಮುಂಬೈ ಪಾಲಿಕೆ ಇಂದು ಕಟ್ಟಡ ನೆಲಸಮ ಮಾಡುತ್ತಿದೆ.
ಇನ್ನೂ ಹಿಮಾಚಲ ಪ್ರದೇಶದಿಂದ ಮುಂಬೈಗೆ ಆಗಮಿಸುತ್ತಿರುವ ನಟಿ ಕಂಗನಾ ಈ ಸಂಬಂಧ ಸರಣಿ ಟ್ವೀಟ್ ಮಾಡಿದ್ದು, ಮುಂಬೈ ಪಾಲಿಕೆಯ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಕಚೇರಿ ನೆಲಸಮಗೊಳಿಸುತ್ತಿರುವ ಫೋಟೋಗಳನ್ನು ಶೇರ್ ಮಾಡಿಕೊಂಡಿರುವ ಕಂಗನಾ ‘ಇದು ಪ್ರಜಾಪ್ರಭುತ್ವ ಸಾವು’ ಎಂದು ಸರ್ಕಾರದ ನಡೆ ಹಾಗೂ BMC ನಡೆಯನ್ನು ಟೀಕಿಸಿದ್ದಾರೆ. ಅಲ್ಲದೇ ‘ಇದು ಮುಂಬೈ ಅಲ್ಲ, ಪಾಕಿಸ್ತಾನ ಹಾಗೂ ಬಾಬರ್ ಸಾಮ್ರಾಜ್ಯ’ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೇ ವೇಳೆ ಮುಂಬೈಗೆ ಬರಬೇಡ ಎಂದಿದ್ದ ಸಂಜಯ್ ರಾವತ್ ಹೇಳಿಕೆಗೆ ತಿರುಗೇಟು ನೀಡಿರುವ ನಟಿ ‘ನಾನು ಮುಂಬೈಗೆ ಬಂದೇ ಬರ್ತೀನಿ, ಯಾರಪ್ಪಾನಿಂದ ಆದ್ರೆ ತಡೆಯಿರಿ’ ಎಂದು ಸವಾಲ್ ಹಾಕಿದ್ದಾರೆ. ಅದರಂತೆ ಕಂಗನಾ ಇಂದು ಮುಂಬೈಗೆ ಆಗಮಿಸುತ್ತಿದ್ದಾರೆ.
ಪೊಲೀಸರ ಭದ್ರತೆಯೊಂದಿಗೆ ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳು ಕಂಗನಾ ಕಚೇರಿಯನ್ನು ಧ್ವಂಸಗೊಳಿಸುತ್ತಿರುವ ವಿಡಿಯೋhttps://t.co/J8WNpSWkp9
— Saakshatv-videos (@Saakshatv_video) September 9, 2020