ಇದು ಕಡೇ ಶ್ರಾವಣ ಮಾಸವಾದ ಹಿನ್ನೆಲೆ ಇಂದು ಪವಾಡ ಪುರುಷ ಮಲೆ ಮಹಾದೇಶ್ವರನ ಸನ್ನಿಧಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಗಿದೆ. ಮಾದಪ್ಪನಿಗೆ ಬೇಡಗಂಪಣ ಅರ್ಚಕ ವೃಂದದವರಿಂದ ಸಾಂಪ್ರದಾಯಿಕವಾಗಿ ಶತಕುಂಭೋತ್ಸವ ಸೇವೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಗಿದೆ.
ಇನ್ನೂ ಕೊರೊನಾ ಆತಂಕವಿರುವ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಅನೇಕ ಮುಂಜಾಗ್ರತಾ ಕ್ರಮಗಳೊಂದಿಗೆ ಶತಕುಂಭ ಅಭಿಶೇಕವನ್ನು ನೆರವೇರಿಸಲಾಗಿದೆ. ಮಲೆ ಮಹದೇಶ್ವರ ಸ್ವಾಮಿ ದೇವಸ್ಥಾನದ ಬೇಡಗಂಪಣ ಅರ್ಚಕರು, ಸಾಲೂರು ಮಠದ ನೂತನ ಶ್ರೀ ಪಟ್ಟದ ಶಾಂತಮಲ್ಲಿ ಕಾರ್ಜುನ ಸ್ವಾಮಿಯವರ ಸಾನಿಧ್ಯದಲ್ಲಿ ಶತಕುಂಭೋತ್ಸವ ಸೇವೆ ಜರುಗಿದೆ.

ಇನ್ನೂ ಪ್ರತಿ ವರ್ಷ ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಮಾದಪ್ಪನ ದರ್ಶನಕ್ಕೆ ಸನ್ನಿಧಾನಕ್ಕೆ ಹರಿದು ಬರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಾವಳಿ ಇರುವ ಹಿನ್ನೆಲೆ ದೇವಾಲಯಕ್ಕೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.










