ರಾಜ್ಯಕ್ಕೆ ಬ್ರಿಟನ್ ವೈರಸ್ | ಲಾಕ್ ಡೌನ್ ಬಗ್ಗೆ ಸುಧಾಕರ್ ಸ್ಪಷ್ಟನೆ
ಬೆಂಗಳೂರು : ಮಹಾಮಾರಿ ಕೊರೊನಾದಿಂದ ಕರ್ನಾಟಕದ ಜನತೆ ತತ್ತರಿಸಿ ಇನ್ನೇನು ಚೇತರಿಸಿಕೊಳ್ಳುತ್ತಿರುವಾಗಲೇ ರಾಜ್ಯಕ್ಕೆ ಬ್ರಿಟನ್ ರೂಪಾಂತರಿ ಕೊರೊನಾ ಮತ್ತೆ ಕಂಟಕವಾಗುವ ಸಾಧ್ಯತೆ ಇದೆ.
ಬ್ರಿಟನ್ ನಿಂದ ಬೆಂಗಳೂರಿಗೆ ಬಂದ ಮೂವರಲ್ಲಿ ಬ್ರಿಟನ್ ರೂಪಾಂತರಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಉತ್ತರಹಳ್ಳಿಯ 6 ವರ್ಷದ ಮಗಳು, 34 ವರ್ಷದ ಮಹಿಳೆ ಹಾಗೂ ರಾಜಾಜಿನಗರದ 73 ವರ್ಷದ ಮಹಿಳೆಗೆ ಬ್ರಿಟನ್ ರೂಪಾಂತರಿ ಕೊರೊನಾ ದೃಢಪಟ್ಟಿದೆ.
ಧರ್ಮೇಗೌಡ ಆತ್ಮಹತ್ಯೆಗೆ ಕಾಂಗ್ರೆಸ್ ನಾಯಕರ ಸಂತಾಪ
ಈ ಬಗ್ಗೆ ಆರೋಗ್ಯ ಸಚಿವರು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಸುಧಾಕರ್ ಅವರ ಟ್ವೀಟ್ ನಲ್ಲಿ “ಕೊರೊನಾ ವೈರಾಣುವಿನ ರೂಪಾಂತರಗೊಂಡ ಪ್ರಬೇಧವನ್ನು ಪತ್ತೆ ಮಾಡಲು ಯು.ಕೆ.ನಿಂದ ರಾಜ್ಯಕ್ಕೆ ಮರಳಿದ್ದ ವ್ಯಕ್ತಿಗಳನ್ನು ನಿಮ್ಹಾನ್ಸ್ ನಲ್ಲಿ ಪರೀಕ್ಷೆಗೊಳಪಡಿಸಲಾಗಿತ್ತು.
ಈ ಪೈಕಿ ಮೂವರಲ್ಲಿ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದ್ದು. ಹೊಸ ಪ್ರಬೇಧದ ವೈರಸ್ ಹರಡದಂತೆ ತಡೆಯಲು ತಜ್ಞರೊಂದಿಗೆ ಚರ್ಚಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸೋಂಕು ಪತ್ತೆಯಾಗಿರುವ ಬಗ್ಗೆ ಸಚಿವರು ಇಂದು ತಜ್ಞರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.
ಇನ್ನೊಂದೆಡೆ ರೂಪಾಂತರ ವೈರಸ್ ಕಂಡು ಬಂದಿರುವ ಹಿನ್ನೆಲೆ ಮತ್ತೆ ಲಾಕ್ ಡೌನ್ ಮಾಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ವಿಧಾನಸೌಧದ ಬಳಿ ಸುಧಾಕರ್ ಪ್ರತಿಕ್ರಿಯೆ ನೀಡಿದ್ದು, ನಮ್ಮಲ್ಲಿ ಬ್ರಿಟನ್ ಕೊರೊನಾ ಪ್ರಮಾಣ ಕಡಿಮೆ ಇದೆ. ಹೀಗಾಗಿ ಲಾಕ್ ಡೌನ್, ಸೀಲ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel