ರಾಜ್ಯದಲ್ಲಿ 14 ಜನರಲ್ಲಿ ರೂಪಾಂತರ ಕೊರೊನಾ ಪತ್ತೆ : 151 ಜನ ನಾಪತ್ತೆ..!
ಬೆಂಗಳೂರು: ಬ್ರಿಟನ್ ನ ವೈರಸ್ ಬೆಂಗಳೂರಿಗೆ ಕಾಲಿಟ್ಟಿ ಆತಂಕ ಸೃಷ್ಟಿ ಮಾಡಿರೋ ಬೆನ್ನಲ್ಲೇ ಮತ್ತೊಂದು ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ವಿದೇಶದಿಂದ ಬೆಂಗಳೂರಿಗೆ ಆಗಮಿಸಿರುವ 14 ಜನರಲ್ಲಿ ಕೊರೊನಾ ರೂಪಾಂತರ ಸೋಂಕು ಪತ್ತೆಯಾಗಿದೆ ಎನ್ನಲಾಗಿದೆ. ಇನ್ನೂ ಅವರ ಸ್ಯಾಂಪಲ್ ಗಳನ್ನು ನಿಮ್ಹಾನ್ಸ್ ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ತಿಳಿಸಿದ್ದಾರೆ. ಇನ್ನೂ ವಿದೇಶದಿಂದ ಬಂದಿರುವ 1,638 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಅವರಲ್ಲಿ 14 ಜನರಿಗೆ ಪಾಸಿಟಿವ್ ಬಂದಿದೆ. ಎಲ್ಲರ ವರದಿಯನ್ನು ನಿಮ್ಹಾನ್ಸ್ ಲ್ಯಾಬ್ ಗೆ ಕಳುಹಿಸಲಾಗಿದ್ದು, ದೀರ್ಘ ಪರೀಕ್ಷೆ ಬಳಿಕ ನಾಳೆ ಖಚಿತ ಮಾಹಿತಿ ಹೊರಬೀಳಲಿದೆ ಎಂದು ಇದೇ ವೇಳೆ ಸುಧಾಕರ್ ಅವರು ಮಾಹಿತಿ ನೀಡಿದ್ದಾರೆ.
ಮಾಗಡಿ ರಸ್ತೆಯಲ್ಲಿ ವಿಷ್ಣು ಪ್ರತಿಮೆ ಧ್ವಂಸ ಖಂಡಿಸಿ ಅಭಿಮಾನಿಗಳಿಂದ ಪ್ರತಿಭಟನೆ
ಇತ್ತ ಮತ್ತೊಂದು ಆಘಾತಕಾರಿ ವಿಚಾರ ಬಯಲಾಗಿದೆ. ಅದೇನೆಂದ್ರೆ ಬ್ರಿಟನ್ನಿಂದ ಬೆಂಗಳೂರಿಗೆ ಆಗಮಿಸಿರುವ ಒಟ್ಟು 1582 ಜನರಲ್ಲಿ 151 ಜನರು ಈವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದೆ. ಹೌದು ಈ ಕುರಿತು ಮಾತನಾಡಿರೋ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಸಂಪರ್ಕಕ್ಕೆ ಸಿಗದ 151 ಜನರ ಮೊಬೈಲ್ ನಂಬರ್ಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲಾಗಿದೆ. ನಾಪತ್ತೆಯಾಗಿರುವವರ ಕಾಲ್ ಡೀಟೈಲ್ಸ್ ಆಧಾರದ ಮೇಲೆ ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಅಷ್ಟೇ ಅಲ್ಲ ಉದ್ದೇಶಪೂರ್ವಕವಾಗಿ ನಾಪತ್ತೆಯಾಗಿರುವವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡುವುದರ ಜತೆಗೆ ಭಾರೀ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ಇದೇ ವೇಳೆ ಎಚ್ಚರಿಕೆ ನೀಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








