ಹಿಮಾಚಲಪ್ರದೇಶದ ಮನಾಲಿಯ ತಮ್ಮ ನಿವಾಸದಿಂದ ಡೇರಿಂಗ್ ಕ್ವೀನ್ ಕಂಗನಾ ಇಂದು ಮುಂಬೈಗೆ ಎಂಟ್ರಿಕೊಟ್ಟಿದ್ದಾರೆ. ಮುಂಬೈಗೆ ಬಿಗಿ ಭದದ್ರತೆಯಲ್ಲಿ ಬಂದ ಕಂಗನಾ ರಕ್ಷಣೆಗಾಗಿ ಕೇಂದ್ರ ಕೈಗಾರಿಕಾ ಪಡೆ ಹಾಗೂ ಕೇಂದ್ರ ಮೀಸಲುಪಡೆಗಳನ್ನ ನಿಯೋಜನೆ ಮಾಡಲಾಗಿತ್ತು. ಮತ್ತೊಂದೆಡೆ ಏರ್ಪೋರ್ಸ್ ನಲ್ಲಿ ಬಿಗಿ ಭದ್ರತೆ ಏರ್ಪಿಡಿಸಲಾಗಿತ್ತು.
ಮತ್ತೊಂದೆಡೆ ಶಿವಸೇನೆ VS ಕಂಗನಾ ಅನ್ನುವ ಸ್ಥಿತಿ ನಿರ್ಮಾಣವಾಗಿದ್ದು, ಏರ್ಪೋರ್ಟ್ ನಲ್ಲಿ ಕಂಗನಾ ವಿರುದ್ಧ ಹಾಗೂ ಪರ ಘೋಷಣೆಗಳು ಮೊಳಗಿವೆ. ಕಂಗನಾ ತಮ್ಮ ಸಹೋದರಿ ಜೊತೆಗೆ ಮುಂಬೈಗೆ ಆಗಮಿಸಿದ್ದು, ಸಾಂಪ್ರದಾಯಿಕವಾಗಿ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದೆಡೆ ಕಂಗನಾ ಮಾಲೀಕತ್ವದ ಕಟ್ಟಡ ನೆಲಸಮಕ್ಕೆ ಮುಂದಾಗಿದ್ದ ಬಿಎಂಸಿಗೆ ತೀವ್ರ ಹಿನ್ನೆಡೆಯಾಗಿದೆ. ಜೊತೆಗೆ ಕಂಗನಾ ವಿರುದ್ಧ ಸಮರ ಸಾರಿರುವ ಶಿವಸೇನೆಗೂ ಮುಖಭಂಗವಾದಂತಾಗಿದೆ. ಕಟ್ಟಡ ನೆಲಸಮಗೊಳಿಸುವ ಕಾರ್ಯಾಚರಣೆಗೆ ಮುಂಬೈ ಹೈಕೋರ್ಟ್ ತಾತ್ಕಾಲಿಕವಾಗಿ ಬ್ರೇಕ್ ಹಾಕಿದೆ.








