ಇಂದು ಸೆಪ್ಟೆಂಬರ್ 5 ಅಂದ್ರೆ ಇಂದು ಶಿಕ್ಷಕರ ದಿನಾಚರಣೆ. ವಿದ್ಯೆ ಕಲಿಸಿಕೊಟ್ಟ ಗುರುವಿಗಾಗಿ ಆಚರಣೆ ಮಾಡುವ ದಿನ. ಹಲವೆಡೆ ಶಿಕ್ಷಕರ ದಿನಾಚರಣೆಯನ್ನು ವಿಭಿನ್ನವಾಗಿ ಆಚರಣೆ ಮಾಡಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಂಭ್ರಮಿಸುತ್ತಾರೆ. ಆದರೆ ಬಳ್ಳಾರಿಯಲ್ಲಿ ಒಂದು ಅಪರೂಪದ ಗುರುಶಿಷ್ಯಬಾಂಧವ್ಯ ನಿಜಕ್ಕೂ ಇತರರಿಗೆ ಮಾದರಿ.
ಹೌದು ಅಸಹಾಯಕ ಶಿಕ್ಷಕಿಯೊಬ್ಬರಿಗೆ ವಿದ್ಯಾರ್ಥಿಗಳು ಮನೆ ಕಟ್ಟಿಕೊಟ್ಟು ಬಹಳ ಅರ್ಥಪೂರ್ಣವಾಗಿ ಗುರುವಂದನೆ ಸಲ್ಲಿಸಿದ್ದಾರೆ. ಬಳ್ಳಾರಿ ನಗರದಲ್ಲಿ ಹಳೆಯ ವಿದ್ಯಾರ್ಥಿಗಳು ತಮಗೆ ವಿದ್ಯಾದಾನ ಮಾಡಿದ ಗುರುವಿಗಾಗಿ 15 ಲಕ್ಷ ರೂಪಾಯಿ ಖರ್ಚಿನಲ್ಲಿ ಬಹಳ ಅಚ್ಚುಕಟ್ಟಾಗಿ ಮನೆ ನಿರ್ಮಿಸಿಕೊಟ್ಟಿದ್ದಾರೆ. 
ಪರಿಮಳ ಎಂಬ ಶಿಕ್ಷಕಿಯ ಆರೋಗ್ಯ ಕೈಕೊಟ್ಟಾಗ, ಆಸರೆಯಾಗಿ ಜೋಪಡಿ ಮನೆಯಲ್ಲಿ ವಾಸವಾಗಿದ್ದ ಶಿಕ್ಷಕಿಗೆ ಉತ್ತಮ ಮನೆ ಕಟ್ಟಿಕೊಟ್ಟು ವಿದ್ಯೆ ಕೊಟ್ಟ ಗುರುವಿಗೆ ಕೃತಜ್ಞತೆ ಸಲ್ಲಿಸಿ ಸಾರ್ಥಕತೆ ಮೆರೆದಿದ್ದಾರೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಸಿರುಗುಪ್ಪ ಎಜುಕೇಶನ್ ಸೊಸೈಟಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1985 ರಿಂದ 1996 ರವರೆಗೆ ಶಿಕ್ಷಕಿಯಾಗಿ ಕೆಲಸ ಮಾಡಿದ್ದ ಪರಿಮಳ ಅವರು ಸಣ್ಣವಯಸ್ಸಿನಲ್ಲೇ ತಂದೆ ತಾಯಿಯನ್ನೂ ಕಳೆದುಕೊಂಡಿದ್ದರು.
ಈಕಡೆ ಮದುವೆಯೂ ಆಗದೇ ಅಕ್ಕನ ಆಸರೆಯಲ್ಲಿದ್ದರು. ಆದರೆ ವಿಧಿಯಾಟಕ್ಕೆ ಅವರ ಸಹೋದರಿಯೂ ಸಹ ಮೃತಪಟ್ಟ ಬಳಿಕ ಪರಿಮಳ ಅವರು ಒಂಟಿಯಾಗಿಬಿಟ್ಟರು.
ಆದರೆ ಜೀವನ ಸಾಗಿಸಲು ಹಳೆಯ ಜೋಪಡಿಯೊಂದ್ರಲ್ಲೇ ಪರಿಮಳ ಅವರು ಮಕ್ಕಳಿಗೆ ಟ್ಯೂಶನ್ ಹೇಳಿಕೊಡುತ್ತಿದ್ರು. ಇತ್ತೀಚೆಗೆ ಗುರುವಂದನಾ ಕಾರ್ಯಕ್ರಮವೊಂದರಲ್ಲಿ ಶಿಕ್ಷಕಿ ಪರಿಮಳ ಅವರು ಭೇಟಿಯಾದ ಸಂದರ್ಭದಲ್ಲಿ ಅವರ ಕಷ್ಟ ಅರಿತ ವಿದ್ಯಾರ್ಥಿಗಳು ಮನೆ ನಿರ್ಮಿಸಿಕೊಟ್ಟು , ಮುಂದಿನ ಪೀಳಿಗೆಗೆ ಸ್ಪೂರ್ತಿಯಾಗಿದ್ದಾರೆ.

ಓಂ ಶ್ರೀ, ದುರ್ಗಾ ಪರಮೇಶ್ವರಿ ದೇವಾಲಯದ, ಅಷ್ಟ ದಿಗ್ಬಂಧನ ಸಹಸ್ರ ದಿವ್ಯ ಮಂಡಲದ ಪ್ರಖ್ಯಾತ, ಗುರು ವಿನ ಗುರು ದೈವ, ಆಚಾರ್ಯರಾದ, ಡಾ! ಪ್ರಹ್ಲಾದ್ ಪಾಟೀಲ್, from gold medalist (ಗೋಲ್ಡ್ ಮೆಡಲಿಸ್ಟ್,) 38 ವರ್ಷ ಅನುಭವ ವುಳ್ಳ ಪ್ರಖ್ಯಾತ, ದೈವ, ದೀನರು 
ಅಶ್ವದಳ, ಶಕ್ತಿಪೀಠ, ಸಾಮರ್ಥ್ಯದ, ಸುಳಿವಿನ, ಅಂತರ, ಭಾವನೆಗಳ ತಂತ್ರ ವಿದ್ಯೆ ಯಿಂದ ಈ ಕ್ಷೇತ್ರದಲ್ಲಿ, ಪರಿಹಾರ, ಶತಸಿದ್ಧ (ಹಂಡ್ರೆಡ್ ಪರ್ಸೆಂಟ್) 100%,
ನಂಬರ್ ವನ್ ವಶೀಕರಣ, ಸ್ಪೆಷಲಿಸ್ಟ್, ಸ್ತ್ರೀ-ಪುರುಷ ವಶೀಕರಣ, ಮಾಟ ಮಂತ್ರ, ಮೋಡಿ ವಿದ್ಯೆ, ಪ್ರೀತಿಯಲ್ಲಿ ನಂಬಿ ಮೋಸ, ಗಂಡ-ಹೆಂಡತಿಯರ ಗುಪ್ತ ಸಮಸ್ಯೆ, ಇನ್ನೊಬ್ಬರ ಹತ್ತಿರ, ಹೇಳಿಕೊಳ್ಳಲಾಗದೆ, ಮನನೊಂದು, ಕಷ್ಟ ಸಂಕಷ್ಟಗಳಿಗೆ, ಗುರಿಯಾಗಿ, ಜೀವನವೇ ಬೇಡವೆನಿಸಿದಾಗ, ಈ ಕ್ಷೇತ್ರದಿಂದ, ನೊಂದ, ಸ್ತ್ರೀಯರಿಗೆ, ಸಂಕಷ್ಟಗಳ, ದಾರಿದೀಪ,, ಈ ಕ್ಷೇತ್ರದಿಂದ, ಪರಿಹಾರ ಕಟ್ಟಿಟ್ಟ ಬುತ್ತಿ,,, ಮೊಬೈಲ್ ಸಂಖ್ಯೆ 9606712450








