“ವೈಕುಂಠಕ್ಕೆ ದಾರಿ ಹುಡುಕುತ್ತಿರುವ” ‘ವರ್ಧನ’ನಿಗೆ ಸಾಥ್ ಕೊಟ್ಟ ಧ್ರುವ..!
ವಿಭಿನ್ನ ಟೈಟಲ್ ಹಾಗೂ ಪೋಸ್ಟರ್ ನಿಂದಲೇ ಗಮನ ಸೆಳೆಯುತ್ತಿರುವ “ದಾರಿ ಯಾವುದಯ್ಯ ವೈಕುಂಠಕ್ಕೆ” ಚಿತ್ರ ಸದ್ಯದಲ್ಲೇ ಬೆಳ್ಳಿ ತೆರಗಪ್ಪಳಿಸಲು ಸಜ್ಜಾಗಿದೆ.
ಇನ್ನೂ ಚಿತ್ರ ಫಸ್ಟ್ ಲುಕ್ ಈಗಾಗಲೇ ರಿಲೀಸ್ ಆಗಿದ್ದು, ಸಿನಿಪ್ರಿಯರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ವಿಶೇಷ ಅಂದ್ರೆ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿರೋದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಹೌದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.
ಸ್ಯಾಂಡಲ್ ವುಡ್ ನ ಹಲವಾರು ಸಿನಿಮಾಗಳಲ್ಲಿ ಖ್ಯಾತಿ ಪಡೆದಿರುವ ವರ್ಧನ್ ಈ ಚಿತ್ರದಲ್ಲಿ ನಾಯಕನಾಗಿ ಮಿಂಚುತ್ತಿದ್ದಾರೆ. ಇನ್ನೂ ಹಫ್ತಾ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿರುವ ವರ್ಧನ್ ಅವರು ಈ ಚಿತ್ರದಲ್ಲಿ ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನ ರಂಜಿಸಲಿದ್ದಾರೆ.
ಮುಳ್ಳಿನ ಸುತ್ತಲೂ ಸುಂದರವಾಗಿ ಮಿಣುಗುವ ಪ್ರೇಮದ ಸಂಕೇತ ಗುಲಾಬಿಯ ಇಂಟ್ರೆಸ್ಟಿಂಗ್ ವಿಚಾರಗಳು..!
ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸಿನಿಮಾ ಬಿಡುಗಡೆಗೆ ಶೀಘ್ರದಲ್ಲೇ ಡೇಟ್ ಅನೌನ್ಸ್ ಆಗಲಿದೆ.
ಟೈಟಲ್ ನಷ್ಟೇ ವಿಭಿನ್ನವಾಗಿದೆ ಕಥಾ ಹಂದರ. ಈ ಚಿತ್ರದಲ್ಲಿ ನಾಯಕಿಯರಾಗಿ ತಿಥಿ ಸಿನಿಮಾ ಖ್ಯಾತಿಯ ಪೂಜಾ ಹಾಗೂ ಅನುಷಾ ಅವರು ವರ್ಧನ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ತಾಯಿದ್ದಾರೆ.
ಚಿತ್ರಕ್ಕೆ ಶರಣಪ್ಪ ಎಂ. ಕೊಟಗಿ ಬಂಡವಾಳ ಹೂಡಿದ್ರೆ, ಸಿದ್ದು ಪೂರ್ಣ ಚಂದ್ರ ಅವರು ಆಕ್ಷನ್ ಹೇಳಿದ್ದಾರೆ. ಜೊತೆಗೆ ಕಥೆ – ಚಿತ್ರಕಥೆ ಸಹ ರಚಿಸಿದ್ದಾರೆ. ಇನ್ನೂ ಉಳಿದಂತೆ ಸ್ಪಂದನ, ಅರುಣ ಮೂರ್ತಿ, ಪ್ರಣಯ್ ಮೂರ್ತಿ, ಬಲರಾಜವಾಡಿ, ಸಿದ್ದಾರ್ಥ್ , ಶಿವು, ಶಿಂಬ, ಹೆಚ್.ಎಂ.ಟಿ ವಿಜಿ ಸೇರಿದಂತೆ ಅನೇಕರ ತಾರಾಬಳಗ ಚಿತ್ರದಲ್ಲಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








