ಸಾರಿಗೆ ನೌಕರರ “ಮುಷ್ಕರ ವಾಪಸ್ ಹಿಂದಿದೆ ರಾಜಾಹುಲಿ ಆಪರೇಷನ್”
ಸಾರಿಗೆ ನೌಕರರ ಮುಷ್ಕರ ಕೊನೆಯ ಹಂತಕ್ಕೆ ಬಂದಿದೆ. ರಾಜ್ಯದ ಕೆಲ ಭಾಗದಲ್ಲಿ ಬಸ್ ಸಂಚಾರ ಆರಂಭವಾಗಿದೆ. ಆದ್ರೂ ಕೂಡ ಬೆಂಗಳೂರಿನಲ್ಲಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ.
ಇವರ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಮನಸ್ಸು ಮಾಡ್ತಿಲ್ಲ. ಈ ಮಧ್ಯೆ ಈ ಮುಷ್ಕರದ ನೇತೃತ್ವವಹಿಸಿಕೊಂಡಿ ಕೋಡಿಹಳ್ಳಿ ಚಂದ್ರಶೇಖರ್ ಅವರು” ಸರ್ಕಾರದ ನಿರ್ಧಾರ ಏನೇ ಇರಲಿ. ಇವತ್ತು ಮುಷ್ಕರ ವಾಪಸ್ ಪಡೆಯುವ ಆಲೋಚನೆ ಇದೆ ಎಂದು ಹೇಳಿಕೆ ನೀಡಿದ್ದಾರೆ.
ಕೋಡಿಹಳ್ಳಿಗೆ ಸಿಎಂ ಕರೆ..?
ನಿನ್ನೆ ಸಂಜೆ ವೇಳೆಗೆ ಸಾರಿಗೆ ನೌಕರರ ಜೊತೆ ಸರ್ಕಾರ ನಡೆಸಿದ ಸಂಧಾನ ಸಭೆ ಆರಂಭದಲ್ಲಿ ಸಕ್ಸಸ್ ಆಯ್ತು ಎಂದೂ ಭಾವಿಸಿದ್ರೂ, ಅಂತಿಮ ಘಟ್ಟದಲ್ಲಿ ಸಾರಿಗೆ ನೌಕರರು ಯುಟರ್ನ್ ಹೊಡೆದು ಮುಷ್ಕರ ಮುಂದುವರಿಸಿದರು.
ಇದರಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ನಿನ್ನೆಯೇ ಸಚಿವರೊಂದಿಗೆ ತುರ್ತುಸಭೆ ನಡೆಸಿದರು. ಎಸ್ಮಾ ಜಾರಿ ಬಗ್ಗೆಯೂ ಚಿಂತನೆ ನಡೆಸಿದ್ದರು.
ಇತ್ತ ಸಂಧಾನ ಸಭೆಯಲ್ಲಿ ಆಲ್ ಓಕೆ ಎಂದಿದ್ದ ಸಾರಿಗೆ ನೌಕರರ ಮುಖಂಡರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ಮುಂದುವರಿಸಿದ್ರು.

ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ರಾತ್ರಿ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ.
ಈ ವೇಳೆ ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡುವ ಮೂಲಕ ಕೋಡಿಹಳ್ಳಿ ಅವರ ಮನವೊಲಿಕೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಇದೇ ಕಾರಣಕ್ಕೆ ಇದೀಗ ಕೋಡಿಹಳ್ಳಿ ಚಂದ್ರಶೇಖರ್ ಮುಷ್ಕರ ವಾಪಸ್ ಪಡೆಯುವ ಬಗ್ಗೆ ಮಾತನಾಡಿದ್ದಾರೆ ಎಂದು ವಿಶ್ಲೇಷನೆ ಮಾಡಲಾಗುತ್ತಿದೆ.
ಇನ್ನೊಂದೆಡೆ ಸಾರಿಗೆ ನೌಕರರ ವಕ್ಕಲಿಗ ಸಮುದಾಯದ ಮುಖಂಡರ ಜೊತೆ ಆರ್. ಅಶೋಕ್ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಇದು ಸಿಎಂ ಯಡಿಯೂರಪ್ಪನವರ ಸೂಚನೆಯಂತೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಇತ್ತ ಸುದ್ದಿಗಾರರೊಂದಿಗೆ ಮಾತನಾಡಿರುವ ಕೋಡಿಹಳ್ಳಿ ಚಂದ್ರಶೇಖರ್, ಸರ್ಕಾರದ ನಿಲುವು ಏನೇ ಇದ್ದರೂ ಬಹುತೇಕ ಇಂದು ಮುಷ್ಕರ ಅಂತಿಮ ಘಟ್ಟಕ್ಕೆ ಬರಲಿದೆ.
ಸರ್ಕಾರದ ಗೊಂದಲದ ನಿಲುವಿನಿಂದ ಮುಷ್ಕರ ಮುಂದುವರಿಸಬೇಕಾಯಿತು. ಸರ್ಕಾರದ ಗಮನಕ್ಕೆ ಬೇಡಿಕೆಗಳ ತರಲಾಗಿದೆ. ಸರ್ಕಾರಕ್ಕೆ ಸದ್ಯ ಎಲ್ಲ ಬೇಡಿಕೆ ಬಂದಿದೆ. ಸರ್ಕಾರದ ನಿಲುವಿಗೆ ನೌಕರರಿಗೆ ಖುಷಿ ಇಲ್ಲ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








