ಸುಳ್ಯ : ತುರ್ತು ಔಷಧಿಗಾಗಿ ವೃದ್ಧೆಯೊಬ್ಬರು ಬರೋಬ್ಬರಿ 15 ಕಿ.ಮೀ ದೂರ ಕಾಲ್ನಡಿಗೆಯಲ್ಲಿ ಸಾಗಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಕೊಲ್ಲಮೊಗ್ರ ಗ್ರಾಮದ ವೃದ್ಧೆಯೊಬ್ಬರು ಔಷಧಕ್ಕಾಗಿ 15 ಕಿ.ಮೀ. ದೂರದ ಗುತ್ತಿಗಾರಿಗೆ ನಡೆದುಕೊಂಡೇ ಸಾಗಿದ್ದರೆನ್ನಲಾಗಿದೆ. ಈ ವೇಳೆ ತುಂಬಾ ನಿತ್ರಾಣ ಸ್ಥಿತಿಯಲ್ಲಿದ್ದ ಅಜ್ಜಿಯನ್ನು ಗಮನಿಸಿದ ಸ್ಥಳೀಯರು ವಿಚಾರಿಸಿದಾಗ ವೃದ್ಧೆ ಎಲ್ಲ ವಿಷಯವನ್ನು ತಿಳಿಸಿದ್ದಾರೆ. ಬಳಿಕ ಗ್ರಾ.ಪಂ ಅಧ್ಯಕ್ಷ ಅಚ್ಯುತ ಗುತ್ತಿಗಾರ್, ಪಿಡಿಒ ಶ್ಯಾಮಪ್ರಸಾದ್ ಹಾಗೂ ತುರ್ತು ಕಾರ್ಯಪಡೆ ಸದಸ್ಯರು ಸ್ಥಳಕ್ಕೆ ಆಗಮಿಸಿ ವೃದ್ಧೆಗೆ ಸೂಕ್ತ ಔಷಧದ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ ಖಾಸಗಿ ವಾಹನದಲ್ಲಿ ಮನೆಗೆ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಟೀಮ್ ಇಂಡಿಯಾದ ಅತಿಥಿ ಆಟಗಾರ ಸಂಜು ಆಪತ್ಭಾಂದವನಾಗಿದ್ದು ಹೇಗೆ..?
ಸಂಜು ಸ್ಯಾಮ್ಸನ್.. ಹೌದು.. ದೇವರ ನಾಡಿನ ಹುಡುಗನ ಕ್ರಿಕೆಟ್ ಪಯಣದಲ್ಲಿವೆ ಹಲವು ಸ್ಪೂರ್ತಿದಾಯಕ ಕಥೆಗಳು..! ಅವಮಾನ, ಅಪಮಾನಗಳೇ ಇವರ ಯಶಸ್ಸಿನ ಮೆಟ್ಟಿಲು...! ಮೌನ ಕ್ರಾಂತಿಯಿಂದಲೇ ತನ್ನ ಹೆಸರಿಗೆ...








