ಈ ಬಾರಿ ಎರಡು ಜನ್ಮಾಷ್ಟಮಿ, ಆ. 11ರಂದು ಚಾಂದ್ರಮಾನ, ಸೆ. 10ರಂದು ಸೌರಮಾನ ಪಂಚಾಗದ ಪ್ರಕಾರವಿದ್ದು ಸೌರಮಾನ ಪಂಚಾಂಗ ಅನುಸರಣೆ ಹಿನ್ನಲೆಯಲ್ಲಿ ಕೃಷ್ಣನ ಊರಾದ ಉಡುಪಿಯ ಶ್ರೀಕೃಷ್ಣಮಠದಲ್ಲಿ ಇಂದು ಅಷ್ಟಮಿ ಆಚರಣೆ ಇರುವುದಿಲ್ಲ, ಇದಕ್ಕೆ ಬದಲಾಗಿ ಸೆಪ್ಟೆಂಬರ್ 10ರಂದು ಜನ್ಮಾಷ್ಟಮಿ ಆಚರಣೆ ನಡೆಯಲಿದೆ.
ಉಡುಪಿ: ನಾಡಿನಾದ್ಯಂತ ಇಂದು ಕೃಷ್ಣಜನ್ಮಾಷ್ಟಮಿ ಆಚರಣೆ. ಈಗಾಗಲೇ ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ವೈಭವದ ಕೃಷ್ಣಜನ್ಮಾಷ್ಟಮಿ ಆಚರಣೆಗೆ ನಿರ್ಬಂಧ ವಿಧಿಸಲಾಗಿದೆ. ಆದರೆ ಈ ಬಾರಿ ಎರಡು ಜನ್ಮಾಷ್ಟಮಿ, ಆ. 11ರಂದು ಚಾಂದ್ರಮಾನ, ಸೆ. 10ರಂದು ಸೌರಮಾನ ಪಂಚಾಗದ ಪ್ರಕಾರವಿದ್ದು ಸೌರಮಾನ ಪಂಚಾಂಗ ಅನುಸರಣೆ ಹಿನ್ನಲೆಯಲ್ಲಿ ಕೃಷ್ಣನ ಊರಾದ ಉಡುಪಿಯ ಶ್ರೀಕೃಷ್ಣಮಠದಲ್ಲಿ ಇಂದು ಅಷ್ಟಮಿ ಆಚರಣೆ ಇರುವುದಿಲ್ಲ, ಇದಕ್ಕೆ ಬದಲಾಗಿ ಸೌರಮಾನ ಪಂಚಾಂಗದ ಅನುಸಾರ ಕೃಷ್ಣಮಠದಲ್ಲಿ ಸೆಪ್ಟೆಂಬರ್ 10ರಂದು ಜನ್ಮಾಷ್ಟಮಿ ಆಚರಣೆ ನಡೆಯಲಿದೆ.


ಸೆಪ್ಟೆಂಬರ್ 10ರಂದು ಮಧ್ಯರಾತ್ರಿ 12.15 ಗಂಟೆಗೆ ಚಂದ್ರೋದಯ ಸಮಯದಲ್ಲಿ ಶ್ರೀಕೃಷ್ಣ ಮಠದ ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುತ್ತದೆ. ಮರುದಿನ ಸೆ. 11 ರಂದು ಶ್ರೀಕೃಷ್ಣ ಲೀಲೋತ್ಸವ ನಡೆಸಲಾಗುತ್ತದೆ.








