ಹೈದರಾಬಾದ್ ನಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಭಾರೀ ಸ್ಫೋಟ
ತೆಲಂಗಾಣ : ತೆಲಂಗಾಣದಲ್ಲಿ ಮೊತ್ತೊಮ್ಮೆ ಕೆಮಿಕಲ್ ಫ್ಯಾಕ್ಟರಿಯಲ್ಲಿ ಭಾರೋ ಅಗ್ನಿ ಸ್ಫೋಟ ಸಂಭವಿಸಿದೆ. ಹೈದರಾಬಾದ್ ಹೊರವಲಯದ ಬೊಳ್ಳಾರಂನ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರದಲ್ಲಿ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ಸಂಭವಿಸಿದೆ. ಪರಿಣಾಮ ಭಾರೀ ಸ್ಫೋಟದಲ್ಲಿ ಹಲವು ಕಾರ್ಮಿಕರು ಗಾಯಗೊಂಡಿದ್ದು, ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗ್ತಿದೆ.
ಆಕೆ ಅಪ್ರಾಪ್ತೆ.. ಈತ ವಿವಾಹಿತ : ಹುಚ್ಚು ಪ್ರೀತಿ ಕಂಡದ್ದೇ ದುರಂತ ಅಂತ್ಯ..!
ಇತ್ತ ಇನ್ನೂ ಹಲವರು ಫ್ಯಾಕ್ಟರಿಯಲ್ಲಿ ಸಿಲುಕಿದ್ದಾರೆ ಎನ್ನಲಾಗ್ತಿದೆ. ಸ್ಥಳಕ್ಕೆ ಪೊಲೀಸರು , ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮಾಡ್ತಾಯಿದ್ದಾರೆ. ಬೆಂಕಿ ನಂದಿಸಲು ಅಗ್ನಿ ಸಾಮಕ ಸಿಬ್ಬಂದಿ ಹರಸಾಹಸ ಪಡ್ತಿದ್ದಾರೆ. ಗಾಯಾಳುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದ್ದು, ಸಾವು ನೋವುಗಳು ಸಂಭವಿಸಬಹುದು ಎನ್ನಲಾಗ್ತಿದೆ. ಈ ಹಿಂದೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಅನಿಲ ಸೋರಿಕೆಯಾಗಿ ಅನೇಕರು ಅಸ್ವಸ್ಥ ಗೊಂಡಿದ್ದರು. ಜಾನುವಾರುಗಳು ಮೃತಪಟ್ಟಿದ್ದವು. ಈ ಘಟನೆ ಮಾಸುವ ಮುನ್ನವೇ ಮತ್ತೊಮ್ಮೆ ಅಂತಹದ್ದೇ ಘಟನೆ ಹೈದ್ರಾಬಾದ್ ನಲ್ಲಿ ಮರುಕಳಿಸಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








