ಯುಗಾದಿ ಹಬ್ಬದ ವಿಶೇಷ ಸಂದರ್ಭದಲ್ಲಿ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮಹಿಳೆಯರಿಗೆ ₹2500 ಜಮಾ ಮಾಡುವ ಯೋಜನೆಯ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರತಿ ಮಹಿಳೆಯ ಖಾತೆಗೆ ₹2500 ಮೊತ್ತ ಶೀಘ್ರದಲ್ಲೇ ಜಮೆಯಾಗಲಿದೆ. ಈ ಯೋಜನೆಯಲ್ಲಿ ಯಾವುದೇ ಮಹಿಳೆಗೆ ನಿರಾಶೆಯಾಗುವುದಿಲ್ಲ, ಎಂದು ಅವರು ಭರವಸೆ ನೀಡಿದ್ದಾರೆ.
ಮಹಿಳಾ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ₹5100 ಕೋಟಿ ಬಜೆಟ್ ಮೀಸಲು ಇಟ್ಟಿದ್ದು, ಯೋಜನೆ ಅಂಗೀಕಾರವಾದ ಕೂಡಲೇ ಈ ಹಣ ವಿತರಣೆಯಾಗಲಿದೆ. ಮಹಿಳೆಯರಿಗೆ ನೇರವಾಗಿ ಹಣ ವರ್ಗಾವಣೆ ಮಾಡಲು ಪ್ರಕ್ರಿಯೆ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗುವ ಬಗ್ಗೆ ಮೆಸೇಜ್ ಕಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಈ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಲಾಭ ಪಡೆಯಲಿದ್ದಾರೆ. ಯೋಜನೆ ಜಾರಿಗೆ ಬರುವ ದಿನಾಂಕ ಮತ್ತು ಸೂಕ್ತ ಮಾಹಿತಿಯನ್ನು ಸರ್ಕಾರ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.