ಚಿತ್ರದುರ್ಗ ಮುಂಬಯಿ ಪೊಲೀಸರ ಹೆಸರಿನಲ್ಲಿ ವೈದ್ಯರೊಬ್ಬರನ್ನು ವಂಚಿಸಿ 1.27 ಕೋಟಿ ರೂ. ದೋಚಿದ್ದ ಸೈಬರ್ ವಂಚಕರಿಬ್ಬರನ್ನು ಚಿತ್ರದುರ್ಗದ (Chitradurga) ಸೆನ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಚಿತ್ರದುರ್ಗದ ಹಿರಿಯ ವೈದ್ಯ ಶ್ರೀನಿವಾಸ್ ಶೆಟ್ಟಿಗೆ ಆ. 23ರಂದು ವಾಟ್ಸಪ್ ಹಾಗೂ ನಾರ್ಮಲ್ ಕರೆ ಮಾಡಿದ್ದ ವಂಚಕರು, ನಾವು ಟಿಆರ್ ಎಐ ಮತ್ತು ಮುಂಬಯಿ(Mumbai) ಪೊಲೀಸರೆಂದು ಹೇಳಿಕೊಂಡಿದ್ದಾರೆ. ಆನಂತರ ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿ ತಮ್ಮ ಖಾತೆಗೆ 1.27 ಕೋಟಿ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ವೈದ್ಯ ಶ್ರೀನಿವಾಸ್ ಶೆಟ್ಟಿ ಆಗಸ್ಟ್ 26 ರಂದು ಸೆನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಅಸ್ಸಾಂ ಮೂಲದ ಆರೋಪಿ ಪವನ್ ಕುಮಾರ್, ಜಾಕೀರ್ ಬೋರಾ ಎಂಬ ವಂಚಕರನ್ನು ಬಂಧಿಸಿದ್ದಾರೆ. ವಂಚಿತರಿಂದ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದ 16.89 ಲಕ್ಷ ರೂ. ಫ್ರೀಜ್ ಮಾಡಲಾಗಿದೆ. ಚಿತ್ರದುರ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








