ಜಗತ್ತಿನಾದ್ಯಂತ ಕೋಟ್ಯಂತರ ಜನರು ಬಳಸುತ್ತಿರುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಗೂಗಲ್ ಮಹತ್ವದ ಮತ್ತು ಆಘಾತಕಾರಿ ಮಾಹಿತಿಯೊಂದನ್ನು ನೀಡಿದೆ. ನೀವೇನಾದರೂ 2021 ಅಥವಾ ಅದಕ್ಕಿಂತ ಹಳೆಯ ಮಾಡೆಲ್‌ನ ಸ್ಮಾರ್ಟ್‌ಫೋನ್ ಬಳಸುತ್ತಿದ್ದರೆ, ಈ ಕೂಡಲೇ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ. ಗೂಗಲ್ ನೀಡಿರುವ ಎಚ್ಚರಿಕೆಯ ಪ್ರಕಾರ ಜಗತ್ತಿನ ಸುಮಾರು 100 ಕೋಟಿಗೂ ಹೆಚ್ಚು ಆಂಡ್ರಾಯ್ಡ್ ಫೋನ್‌ಗಳು ಇನ್ನು ಮುಂದೆ ಸುರಕ್ಷಿತವಾಗಿರುವುದಿಲ್ಲ.
ಗೂಗಲ್ ತೆಗೆದುಕೊಂಡಿರುವ ನಿರ್ಧಾರವೇನು
ಟೆಕ್ ದೈತ್ಯ ಗೂಗಲ್ ಸಂಸ್ಥೆಯು ಆಂಡ್ರಾಯ್ಡ್ 12 (Android 12) ಅಥವಾ ಅದಕ್ಕಿಂತ ಹಳೆಯ ಆವೃತ್ತಿಗಳಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ಗಳಿಗೆ ಇನ್ನು ಮುಂದೆ ಭದ್ರತಾ ಅಪ್‌ಡೇಟ್ ಅಥವಾ ಸೆಕ್ಯೂರಿಟಿ ಪ್ಯಾಚ್‌ಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಇದರ ನೇರ ಪರಿಣಾಮವೆಂದರೆ ಹಳೆಯ ಫೋನ್‌ಗಳನ್ನು ಬಳಸುತ್ತಿರುವವರ ಮೊಬೈಲ್ ಸ್ಕ್ರೀನ್ ಲಾಕ್ ಆಗಿದ್ದರೂ, ಸಾಫ್ಟ್‌ವೇರ್ ಹಿಂಬಾಗಿಲು ಹ್ಯಾಕರ್ಗಳಿಗೆ ಸದಾ ತೆರೆದಂತೆಯೇ ಇರುತ್ತದೆ.
ಅಪಾಯದ ಅಂಚಿನಲ್ಲಿರುವ ಫೋನ್‌ಗಳು ಯಾವುವು
ಮಾಧ್ಯಮ ವರದಿಗಳು ಮತ್ತು ಡೇಟಾ ವಿಶ್ಲೇಷಣೆಯ ಪ್ರಕಾರ, ಪ್ರಸ್ತುತ ವಿಶ್ವದಾದ್ಯಂತ ಶೇಕಡಾ 42.1 ರಷ್ಟು ಆಂಡ್ರಾಯ್ಡ್ ಬಳಕೆದಾರರು ಇನ್ನೂ ಹಳೆಯ ಸಾಫ್ಟ್‌ವೇರ್ ಆವೃತ್ತಿಗಳನ್ನೇ ಬಳಸುತ್ತಿದ್ದಾರೆ.
ಅಸುರಕ್ಷಿತ ಆವೃತ್ತಿಗಳು
ಆಂಡ್ರಾಯ್ಡ್ 12
ಆಂಡ್ರಾಯ್ಡ್ 11
ಆಂಡ್ರಾಯ್ಡ್ 10
ಆಂಡ್ರಾಯ್ಡ್ 9 ಮತ್ತು ಅದಕ್ಕಿಂತ ಹಳೆಯದು
ಸುರಕ್ಷಿತ ಆವೃತ್ತಿಗಳು
ಆಂಡ್ರಾಯ್ಡ್ 13
ಆಂಡ್ರಾಯ್ಡ್ 14
ಆಂಡ್ರಾಯ್ಡ್ 15
ಮತ್ತು ಇತ್ತೀಚಿನ ಆಂಡ್ರಾಯ್ಡ್ 16
ನಿಮ್ಮ ಫೋನ್ ಸುರಕ್ಷಿತವೇ ಎಂದು ಚೆಕ್ ಮಾಡುವುದು ಹೇಗೆ
ನಿಮ್ಮ ಸ್ಮಾರ್ಟ್‌ಫೋನ್ ಅಪಾಯದಲ್ಲಿದೆಯೇ ಎಂದು ತಿಳಿಯಲು ಈ ಸರಳ ಹಂತಗಳನ್ನು ಅನುಸರಿಸಿ
1. ನಿಮ್ಮ ಮೊಬೈಲ್‌ನಲ್ಲಿ ಸೆಟ್ಟಿಂಗ್ಸ್ (Settings) ತೆರೆಯಿರಿ.
2. ನಂತರ ಅಬೌಟ್ ಫೋನ್ (About Phone) ಆಯ್ಕೆಯನ್ನು ಕ್ಲಿಕ್ ಮಾಡಿ.
3. ಅಲ್ಲಿ ಆಂಡ್ರಾಯ್ಡ್ ವರ್ಷನ್ (Android Version) ಯಾವುದು ಎಂದು ಪರಿಶೀಲಿಸಿ.
ಒಂದು ವೇಳೆ ಅಲ್ಲಿ 12 ಅಥವಾ ಅದಕ್ಕಿಂತ ಕಡಿಮೆ ಸಂಖ್ಯೆ ಇದ್ದರೆ ಮತ್ತು ಕಂಪನಿಯಿಂದ ಹೊಸ ಅಪ್‌ಡೇಟ್ ಬರದೇ ಇದ್ದರೆ, ನಿಮ್ಮ ಫೋನ್ ಗೂಗಲ್ ದೃಷ್ಟಿಯಲ್ಲಿ ಅಸುರಕ್ಷಿತ ಎಂದು ಅರ್ಥಮಾಡಿಕೊಳ್ಳಿ.
ಹಳೆಯ ಫೋನ್ ಬಳಸುವುದರಿಂದ ಆಗುವ ತೊಂದರೆಗಳೇನು
ಸೆಕ್ಯೂರಿಟಿ ಅಪ್‌ಡೇಟ್ ನಿಲ್ಲಿಸುವುದರಿಂದ ನಿಮ್ಮ ಫೋನ್ ಅನ್ನು ಹ್ಯಾಕ್ ಮಾಡುವುದು ಸೈಬರ್ ಕಳ್ಳರಿಗೆ ಸುಲಭವಾಗುತ್ತದೆ. ಇದರಿಂದ ಈ ಕೆಳಗಿನ ಸಮಸ್ಯೆಗಳು ಎದುರಾಗಬಹುದು
ಬ್ಯಾಂಕಿಂಗ್ ವಂಚನೆ ಹಳೆಯ ಫೋನ್‌ಗಳಲ್ಲಿರುವ ಭದ್ರತಾ ಲೋಪಗಳನ್ನು ಬಳಸಿಕೊಂಡು ಹ್ಯಾಕರ್‌ಗಳು ನಿಮ್ಮ ಬ್ಯಾಂಕ್ ಖಾತೆಗೆ ಕನ್ನ ಹಾಕಬಹುದು.
ಪಾಸ್‌ವರ್ಡ್ ಕಳ್ಳತನ ನಿಮ್ಮ ಸೋಶಿಯಲ್ ಮೀಡಿಯಾ ಮತ್ತು ಇಮೇಲ್ ಪಾಸ್‌ವರ್ಡ್‌ಗಳು ಸುಲಭವಾಗಿ ಸೋರಿಕೆಯಾಗಬಹುದು.
ಮಾಲ್ವೇರ್ ದಾಳಿ ನಿಮ್ಮ ಅನುಮತಿ ಇಲ್ಲದೆಯೇ ವೈರಸ್ ಮತ್ತು ಸ್ಪೈವೇರ್‌ಗಳು ಫೋನ್‌ಗೆ ಇನ್‌ಸ್ಟಾಲ್ ಆಗಬಹುದು.
ಗೂಗಲ್ ನೀಡುತ್ತಿರುವ ಸಲಹೆಗಳೇನು
ಫೋರ್ಬ್ಸ್ ವರದಿಯ ಪ್ರಕಾರ, ನಿಮ್ಮ ಫೋನ್ ಆಂಡ್ರಾಯ್ಡ್ 12 ಆವೃತ್ತಿಯಲ್ಲೇ ಸ್ಥಗಿತಗೊಂಡಿದ್ದರೆ ಹೊಸ ಫೋನ್ ಖರೀದಿಸುವುದೇ ಅತ್ಯಂತ ಜಾಣತನದ ನಡೆಯಾಗಿದೆ. ಇದಕ್ಕಾಗಿ ನೀವು ದುಬಾರಿ ಬೆಲೆಯ ಫೋನ್ ಖರೀದಿಸಬೇಕೆಂದಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಆಂಡ್ರಾಯ್ಡ್ 13 ಅಥವಾ 14 ಬೆಂಬಲಿಸುವ ಬಜೆಟ್ ಸ್ನೇಹಿ ಫೋನ್‌ಗಳನ್ನು ಖರೀದಿಸಬಹುದು.
ನೀವು ಹಳೆಯ ಫೋನ್ ಅನ್ನೇ ಬಳಸುವುದಾದರೆ ಪಾಲಿಸಬೇಕಾದ ಎಚ್ಚರಿಕೆಗಳು
ಹೊಸ ಫೋನ್ ಖರೀದಿಸಲು ಸದ್ಯಕ್ಕೆ ಸಾಧ್ಯವಿಲ್ಲದಿದ್ದರೆ, ಅನಿವಾರ್ಯವಾಗಿ ಹಳೆಯ ಫೋನ್ ಬಳಸುವವರು ಈ ಕೆಳಗಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲೇಬೇಕು
ಯುಪಿಐ ಬಳಕೆ ಬೇಡ ಹಳೆಯ ಫೋನ್‌ಗಳಲ್ಲಿ PhonePe, Google Pay ಅಥವಾ ನೆಟ್ ಬ್ಯಾಂಕಿಂಗ್ ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ.
ಲಿಂಕ್‌ಗಳ ಬಗ್ಗೆ ಎಚ್ಚರ ವಾಟ್ಸಾಪ್ ಅಥವಾ ಮೆಸೇಜ್ ಮೂಲಕ ಬರುವ ಯಾವುದೇ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
ಅಪ್ಲಿಕೇಶನ್ ಅಪ್‌ಡೇಟ್ ಗೂಗಲ್ ಪ್ಲೇ ಸ್ಟೋರ್ ಮೂಲಕ ನಿಮ್ಮ ಎಲ್ಲಾ ಆ್ಯಪ್‌ಗಳನ್ನು ಆಗಾಗ ಅಪ್‌ಡೇಟ್ ಮಾಡುತ್ತಿರಿ. APK ಫೈಲ್ ಮೂಲಕ ಆ್ಯಪ್ ಇನ್‌ಸ್ಟಾಲ್ ಮಾಡಬೇಡಿ.
ತಂತ್ರಜ್ಞಾನ ಬೆಳೆದಂತೆ ಹ್ಯಾಕರ್‌ಗಳ ತಂತ್ರಗಳೂ ಬದಲಾಗುತ್ತಿವೆ. ಆದ್ದರಿಂದ ನಿಮ್ಮ ವೈಯಕ್ತಿಕ ಡೇಟಾ ಮತ್ತು ಹಣಕಾಸಿನ ಸುರಕ್ಷತೆಗಾಗಿ ಆದಷ್ಟು ಬೇಗ ಹೊಸ ಸಾಫ್ಟ್‌ವೇರ್ ಆವೃತ್ತಿ ಹೊಂದಿರುವ ಮೊಬೈಲ್‌ಗೆ ಬದಲಾಗುವುದು ಸೂಕ್ತ.








