ಬೆಂಗಳೂರು : ಕೊರೊನಾಸುರನ ಅಬ್ಬರಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾಕಷ್ಟು ದೇಣಿಗೆಗಳೂ ಹರಿದುಬರ್ತಿವೆ. ಈ ಮಧ್ಯೆ ಸ್ವತಃ ಸಿಎಂ ಯಡಿಯೂರಪ್ಪನವರೇ ಕೊರೊನಾ ನಿಯಂತ್ರಣಕ್ಕೆ ತಾವೂ ವೈಯಕ್ತಿಕ ದೇಣಿಗೆ ನೀಡಿದ್ದಾರೆ. ಸಿಎಂ ಪರಿಹಾರ ನಿಧಿಗೆ ತಮ್ಮ ಒಂದು ವರ್ಷದ ವೇತನವನ್ನು ಸಿಎಂ ಬಿಎಸ್ ವೈ ದೇಣಿಗೆ ಕೊಟ್ಟಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ ವಿಡಿಯೋವೊಂದನ್ನು ಹಂಚಿಕೊಂಡಿರುವ ಸಿಎಂ, ರಾಜ್ಯದ ಎಲ್ಲಾ ಸಚಿವರುಗಳು, ಶಾಸಕರುಗಳು ತಮ್ಮ ಕೈಯಲ್ಲಿ ಆದ ಪರಿಹಾರವನ್ನು ನೀಡಬೇಕೆಂದು ಮನವಿ ಮಾಡಿದ್ದಾರೆ.
It is a very difficult time that we are all going through. And it is important that we fight this epidemic together. Personally, I am donating my one year's salary to the #CMRF Covid19. I request you all to contribute, however small, and help #Karnataka fight #Corona.
Thank you pic.twitter.com/15jwrk1Ixz— B.S.Yediyurappa (@BSYBJP) April 1, 2020








