ಚೀನಾ: ಕೊರೊನಾ ಭಯದಿಂದ ತಾಯಿಯೊಬ್ಬಳು 10 ದಿನದ ನವಜಾತ ಶಿಶುವನ್ನು ಸಾರ್ವಜನಿಕ ಶೌಚಾಲಯದಲ್ಲಿ ಬಿಟ್ಟು ಹೋದ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಸಿಚುಆನ್ ಪ್ರಾಂತ್ಯದ ಮಿಯಾನ್ ಯಾಂಗ್ ನಗರದಲ್ಲಿ ಈ ಘಟನೆ ನಡೆದಿದೆ. ಶೌಚಾಲಯದಲ್ಲಿ ಪುಟಾಣಿ ಕಂದಮ್ಮನನ್ನು ಕಂಡ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ವೈದ್ಯರ ತಂಡ ಮಗುವನ್ನು ರಕ್ಷಿಸಿ, ಕೊರೋನಾ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಯಾರೋ ಕೊರೋನಾ ಸೋಂಕು ಪೀಡಿತ ತಾಯಿ ಈ ಮಗುವನ್ನು ಬಿಟ್ಟು ಹೋಗಿದ್ದಾರೆ. ಮಗುವಿನ ಕೊರೋನಾ ಪರೀಕ್ಷೆ ನಡೆಸಿದ್ದು, ಸದ್ಯ ಅನಾಥಾಲಯವೊಂದರಲ್ಲಿ ಬಿಡಲಾಗಿದೆ. ಒಂದು ವೇಳೆ ಮಗುವಿನಲ್ಲಿ ಕೊರೋನಾ ಸೋಂಕು ಪತ್ತೆಯಾದ್ರೆ ಚಿಕಿತ್ಸೆ ನೀಡಲಾಗುತ್ತೆ ಎಂದು ತಿಳಿಸಿದ್ದಾರೆ.