ಮೈಸೂರು: ಇತಿಹಾಸ ಪ್ರಸಿದ್ಧ ತಲಕಾಡು ಪಂಚಲಿಂಗ ದರ್ಶನ ಇಂದು ಸಂಜೆಯಿಂದ ಆರಂಭವಾಗಲಿದ್ದು, ಒಟ್ಟು 10 ದಿನಗಳ ಕಾಲ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ತಲಕಾಡಿನಲ್ಲಿ ಇಂದು ಸಂಜೆ 6.30ರಿಂದ ಪಂಚಲಿಂಗ ದರ್ಶನ ಆರಂಭವಾಗಲಿದೆ. ಪ್ರಧಾನ ಅರ್ಚಕ ಆನಂದ್ ದೀಕ್ಷಿತ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದ್ದು, ಮೊದಲ ಪೂಜೆ ಸಲ್ಲಿಸಿ ದೀಪ ಹಚ್ಚಿದ ಬಳಿಕ ಪಂಚಲಿಂಗಗಳ ದರ್ಶನ ಶುರುವಾಗಲಿದೆ.
ವೈದ್ಯನಾಥೇಶ್ವರ, ಅರ್ಕೇಶ್ವರ, ಪಾತಾಳೇಶ್ವರ, ಮರಳೇಶ್ವರ, ಮಲ್ಲಿಕಾರ್ಜುನೇಶ್ವರ..ಈ 5 ದೇವಾಲಯಗಳಲ್ಲಿ ಈ ಪಂಚಲಿಂಗ ದರ್ಶನ ಇರುತ್ತದೆ. 7 ವರ್ಷಗಳ ಬಳಿಕ ಪಂಚಲಿಂಗ ದರ್ಶನ ನಡೆಯುತ್ತಿದೆ. ವಿಶೇಷವೆಂದರೆ ಅಪರೂಪಕ್ಕೆ 5 ಕಾರ್ತಿಕ ಸೋಮವಾರಗಳು ಬರುವ ವರ್ಷದಲ್ಲಿ ಮಾತ್ರ ಈ ಪಂಚಲಿಂಗ ದರ್ಶನ ನಡೆಯುತ್ತದೆ. 2013ರಲ್ಲಿ 5 ಕಾರ್ತಿಕ ಸೋಮವಾರಗಳು ಬಂದಿದ್ದಾಗ ಪಂಚಲಿಂಗ ದರ್ಶನ ನಡೆದಿತ್ತು. 7 ವರ್ಷಗಳ ಬಳಿಕ ಮತ್ತೆ ಬಂದ 5 ಕಾರ್ತಿಕ ಸೋಮವಾರದ ಹಿನ್ನೆಲೆ ಇಂದಿನಿಂದ ಪಂಚಲಿಂಗ ದರ್ಶನ ನಡೆಯಲಿದೆ.
ಹೊರಗಿನ ಭಕ್ತರಿಗೆ ಪ್ರವೇಶ ನಿಷಿದ್ಧ
ಹೆಮ್ಮಾರಿ ಕೊರೊನಾ ಹರಡುವ ಭೀತಿಯ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಪಂಚಲಿಂಗ ದರ್ಶನಕ್ಕೆ ಸರ್ಕಾರ ನಿರ್ಧರಿಸಿದೆ. ತಲಕಾಡು ಸುತ್ತಮುತ್ತಲಿನ ನಿವಾಸಿಗಳಿಗೆ ಮಾತ್ರ ಪಂಚಲಿಂಗ ದರ್ಶನಕ್ಕೆ ಅವಕಾಶವಿದ್ದು, ತಲಕಾಡು, ಬಿ.ಶೆಟ್ಟಿಹಳ್ಳಿ, ಹೊಳೆಸಾಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಭಕ್ತರಿಗಷ್ಟೇ ದರ್ಶನ ಭಾಗ್ಯ ಸಿಗಲಿದೆ. ಹೊರಗಿನಿಂದ ಬಂದ ಭಕ್ತರಿಗೆ ದೇವಾಲಯಗಳಿಗೆ ಪ್ರವೇಶವಿಲ್ಲ. ದಿನಕ್ಕೆ 1000 ಭಕ್ತರು ಮಾತ್ರ ಪಂಚಲಿಂಗ ದರ್ಶನ ಮಾಡಲು ಅವಕಾಶ ನೀಡಲಾಗಿದೆ ಎಂದು ಮೈಸೂರು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಭಕ್ತರು ಕೊರೊನಾ ಟೆಸ್ಟ್ ವರದಿ ತಂದರಷ್ಟೇ ಪಂಚಲಿಂಗ ದರ್ಶನಕ್ಕೆ ಅವಕಾಶ ಸಿಗಲಿದೆ. ಪ್ರವೇಶವಕಾಶ. ಆಂಟಿಜನ್ ಅಥವಾ ಆರ್ಟಿಪಿಸಿಆರ್ ವರದಿ ಇದ್ದರಷ್ಟೇ ಪಂಚಲಿಂಗ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಡಿ.14ರಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸಿಎಂ ಬರುವ ಹಿನ್ನೆಲೆಯಲ್ಲಿ 1500 ಮಂದಿಗೆ ಅವಕಾಶ ಇರುತ್ತದೆ. ಪ್ರತಿದಿನ ಮಧ್ಯಾಹ್ನ 3 ಗಂಟೆಯವರೆಗೆ ಮಾತ್ರ ಪಂಚಲಿಂಗ ದರ್ಶನಕ್ಕೆ ಅವಕಾಶ ಇದೆ. 3 ಗಂಟೆಯ ನಂತರ ಸ್ಥಳಿಯರಿಗೂ ಪ್ರವೇಶ ನಿಬರ್ಂಧ ಹೇರಲಾಗುತ್ತದೆ.
ಪಂಚಲಿಂಗ ದರ್ಶನ ಮಾಡಿದ ಮುಖ್ಯಮಂತ್ರಿಗಳು
1993-ಮೀರಪ್ಪ ಮೊಯ್ಲಿ
2006-ಹೆಚ್.ಡಿ ಕುಮಾರಸ್ವಾಮಿ
2009-ಬಿ.ಎಸ್ ಯಡಿಯೂರಪ್ಪ
2013-ಸಿದ್ದರಾಮಯ್ಯ
2020-ಬಿ.ಎಸ್ ಯಡಿಯೂರಪ್ಪ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








