ಪ್ರಥಮ ಬಾರಿಗೆ ಸೈನಿಕ ಶಾಲೆಗೆ ಸೇರಿದ 10 ಬಾಲಕಿಯರು – Saaksha Tv
ಮಹಾರಾಷ್ಟ್ರ: 61 ವರ್ಷಗಳ ಸೇನಾ ಶಾಲೆಯ ಇತಿಹಾಸದಲ್ಲೇ ಸೈನಿಕ ಶಾಲೆಗೆ ಪ್ರಥಮ ಬಾರಿಗೆ 10 ಬಾಲಕಿಯರು ಪ್ರವೇಶ ಪಡೆದಿದ್ದಾರೆ ಎಂದು ಶಾಲೆಯ ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಬಿ ಲಕ್ಷ್ಮೀಕಾಂತ್ ಹೇಳಿದ್ದಾರೆ.
ಖಾಸಗಿ ಸುದ್ದಿ ವಾಹಿನ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು ಸೈನಿಕರ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ಮಹಾರಾಷ್ಟ್ರದ ಸತಾರಾ ಜಿಲ್ಲೆಯ 10 ಬಾಲಕಿಯರು ಸೈನಿಕ ಶಾಲೆಗೆ ಸೇರಿದ್ದಾರೆ. ಈ ಶಾಲೆಯನ್ನು ಮಹಾರಾಷ್ಟ್ರದ ಹರಿಕಾರ ಮಾಜಿ ಮುಖ್ಯಮಂತ್ರಿ ಯಶವಂತರಾವ್ ಚವಾಣ್ (ಜೂನ್ 23, 1961)ರ ಉಪಕ್ರಮದ ಮೇಲೆ ದೇಶದ ಮೊದಲ ಬಾರಿಗೆ ಸತಾರಾದಲ್ಲಿ ಸೇನಾ ಶಾಲೆಯನ್ನು ಆರಂಭಿಸಿದ್ದರು. ಇಲ್ಲಿ 630 ವಿದ್ಯಾರ್ಥಿಗಳ ಪೈಕಿ 10 ಬಾಲಕಿಯರು ಸೇರ್ಪಡೆಯಾಗಿದ್ದಾರೆ.
ಈ 10 ಮಂದಿ ಬಾಲಕಿಯರಲ್ಲಿ ಇಬ್ಬರು ಪಶ್ಚಿಮ ಬಂಗಾಳದವರು, ಒಬ್ಬರು ಬಿಹಾರದವರು ಮತ್ತು ಇತರ ಏಳು ಮಂದಿ ಮಹಾರಾಷ್ಟ್ರದವರಾಗಿದ್ದಾರೆ. ಇಲ್ಲಿಯವರೆಗೆ ಶಾಲೆಯಲ್ಲಿ ಬಾಲಕರಿಗೆ ಮಾತ್ರ ಪ್ರವೇಶವಿತ್ತು. ಸೇನಾ ವಸತಿ ಶಾಲೆಯಲ್ಲಿ ಓದುತ್ತಿರುವ ಬಾಲಕಿಯರ ಮೊದಲ ಬ್ಯಾಚ್ ಇದಾಗಿದ್ದು, ಭವಿಷ್ಯದಲ್ಲಿ ಬಾಲಕಿಯರ ಸೀಟುಗಳು ಹೆಚ್ಚಾಗಲಿವೆ ಎಂದು ಮುಂದಿನ ಯೋಜನೆ ಬಗ್ಗೆ ಹೇಳಿದರು.








