ನೈಜೀರಿಯಾ | ಭೀಕರ ರಸ್ತೆ ಅಪಘಾತ : 10 ಮಂದಿ ಸಾವು
ಕ್ವಾರಾ : ನೈಜೀರಿಯಾದ ಕ್ವಾರಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 16 ಜನರು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದೆ ಎಂದು ವರದಿ ತಿಳಿಸಿದೆ.
ಕ್ವಾರಾದ ರಾಜಧಾನಿ ಐಲೋರಿನ್ ನಲ್ಲಿ ಎರಡು ವಾಹನಗಳು ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಸ್ಥಳದಲ್ಲೇ 10 ಜನರು ಸಾವನ್ನಪ್ಪಿದ್ದಾರೆ. ಇವರಲ್ಲಿ 9 ಮಂದಿ ಗುರುತಿಸಲಾಗದಷ್ಟು ಸುಟ್ಟುಕರಕಲಾಗಿದ್ದಾರೆ.
ಅತಿ ವೇಗವಾಗಿ ಓವರ್ ಟೇಕ್ ಮಾಡಲು ಹೋಗಿರುವುದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಚಿಕಿತ್ಸೆ ಮುಂದುವರಿದಿದ್ದು, ಕೆಲವ ಪರಿಸ್ಥಿರಿ ವಿಷಮವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








