Fuel Tanker Explodes : ಇಂಧನ ಟ್ಯಾಂಕರ್ ಸ್ಪೋಟಗೊಂಡು 10 ಮಂದಿ ಸಾವು….
ಸೇತುವೆಯ ಕೆಳಗೆ ಸಿಲುಕಿಕೊಂಡ ಇಂಧನ ಟ್ಯಾಂಕರ್ ಸ್ಪೋಟಗೊಂಡ ಪರಿಣಾಮ 10 ಮಂದಿ ಸಾವನ್ನಪ್ಪಿದ್ದು 40 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನ ಪೂರ್ವ ನಗರ ಬೋಕ್ಸ್‌ಬರ್ಗ್ ನಲ್ಲಿ ನಡೆದಿದೆ.
ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಸಾಗಿಸುತ್ತಿದ್ದ ಟ್ಯಾಂಕರ್ ಶನಿವಾರ ಬೆಳಿಗ್ಗೆ ಆಸ್ಪತ್ರೆ ಮತ್ತು ವಸತಿ ಕಟ್ಟಡಗಳು ಇರುವ ಸಮೀದ ಸೇತುವೆಗೆ ಕೆಳಗೆ ಸಾಗುವಾಗ ಸಿಲಿಕೊಂಡಿತ್ತು. ಆನಂತರ ಗ್ಯಾಸ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿತು. ಬೆಂಕಿ ನಂದಿಸಲು ಅಗ್ನಿಶಾಮಕ ದಳ ಪ್ರಯತ್ನಿಸುತ್ತಿರುವಾಗಲೇ ಟ್ಯಾಂಕರ್ ಸ್ಪೋಟಗೊಂಡಿದೆ.
ಸೇತುವೆಯ ಜೊತೆಗೆ ಸಮೀಪದಲ್ಲೇ ಇದ್ದ ಆಸ್ಪತ್ರೆಯ ಮೇಲ್ಚಾವಣಿ ಸಹ ಕುಸಿದಿದೆ. ಗ್ಯಾಸ್ ಟ್ಯಾಂಕರ್ ಸ್ಪೋಟಗೊಂಡ ವಿಡಿಯೋಗಳು ವೈರಲ್ ಆಗಿವೆ.
Fuel Tanker Explodes : 10 Killed, 40 Injured After Fuel Tanker Explodes In South Africa








