ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮಕ್ಕೆ ಪಟಾಕಿ ನಿಷೇಧವಿದ್ದರೂ ಪಟಾಕಿ ಹಚ್ಚಲು ಹೋಗಿ ಮಕ್ಕಳು ಸೇರಿದಂತೆ 10 ಮಂದಿ ಕಣ್ಣಿಗೆ ಹಾನಿಯಾಗಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಪಟಾಕಿ ಹಚ್ಚಲು ಹೋಗಿ ಮೂರು ಮಕ್ಕಳ ಕಣ್ಣಿಗೆ ಗಾಯಗಳಾಗಿದ್ದು, ಮಿಂಟೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಮೂರು ಮಕ್ಕಳು 10 ರಿಂದ 11 ವರ್ಷದ ಒಳಗಿನವರಾಗಿದ್ದಾರೆ.
ಸುಂಕದ ಕಟ್ಟೆಯ 11ರ ಬಾಲಕ ಫ್ಲವರ್ ಪಾಟ್ ಹಚ್ಚಲು ಹೋಗಿ ಕಣ್ಣಿಗೆ ಹಾನಿ ಮಾಡಿಕೊಂಡಿದ್ದಾನೆ. ಉಳಿದ ಇಬ್ಬರು ಪಟಾಕಿ ಹಚ್ಚಲು ಹೋಗಿ ಎಡಗಣ್ಣು ಮತ್ತು ಬಲಗಣ್ಣಿಗೆ ಹಾನಿ ಮಾಡಿಕೊಂಡಿದ್ದಾರೆ. ಮಿಂಟೋ ಆಸ್ಪತ್ರೆಯಲ್ಲಿ ಮೂವರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೂ ಮಿಂಟೋ ಆಸ್ಪತ್ರೆಗೆ ಒಟ್ಟು 7 ಮಂದಿ ಮಕ್ಕಳು ಪಟಾಕಿ ಸಿಡಿತ ವೇಳೆ ಗಾಯಗೊಂಡು ದಾಖಲಾಗಿದ್ದಾರೆ.
ವಿಜಯನಗರದಲ್ಲಿ ತಂದೆಯೊಂದಿಗೆ ಆಟೋದಲ್ಲಿ ಬರುತ್ತಿದ್ದ ಆಟೋ ಚಾಲಕರ ಮಗನಿಗೆ ಪಟಾಕಿ ಸಿಡಿದು ಕಣ್ಣಿಗೆ ಗಂಭೀರ ಗಾಯಗಳಾಗಿವೆ. ಪಕ್ಕದ ಮನೆಯ ಬಾಲಕ ಫ್ಲವರ್ ಪಾಟ್ ಪಟಾಕಿ ಹಚ್ಚಿದ್ದಾನೆ. ಆದರೆ ಅದು ಸಿಡಿಯಲಿಲ್ಲ. ಆಗ ಅದೇ ರಸ್ತೆಯಲ್ಲಿ ಬರುತ್ತಿದ್ದ ಆಟೋ ಚಾಲಕರ ಮಗ ಏನಾಯಿತು ಎಂದು ಇಣುಕಿ ನೋಡುತ್ತಿದ್ದಂತೆ ಫ್ಲವರ್ ಪಾಟ್ ಸಿಡಿದಿದೆ. ಇದರ ಪರಿಣಾಮ ಗಂಭೀರ ಗಾಯಗಳಾಗಿ ಮಿಂಟೋ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪಟಾಕಿ ತರಲು ದುಡ್ಡಿಲ್ಲ, ಇನ್ನೆಲ್ಲಿ ಪಟಾಕಿ ಹಚ್ಚೋದು. ಪಟಾಕಿ ಸಹವಾಸಕ್ಕೆ ಹೋಗದ ನನ್ನ ಮಗನಿಗೆ ಇಂಥ ಪರಿಸ್ಥಿತಿಯಾಗಿದೆ ಎಂದು ಗಾಯಗೊಂಡ ಬಾಲಕನ ತಂದೆ ಅಳಲು ತೋಡಿಕೊಂಡಿದ್ದಾರೆ.
ತಾನು ಮಾಡದ ತಪ್ಪಿಗೆ 12 ಹರೆಯದ ಬಾಲಕನ ಎರಡು ಕಣ್ಣು ತೀವ್ರವಾಗಿ ಗಾಯಗೊಂಡಿದ್ದು, ಬಲಗಣ್ಣು ಸಂಪೂರ್ಣ ಮುಚ್ಚಿದೆ. ಎಡಗಣ್ಣು ಮೇಲ್ಪದರ ಗಾಯಗಳಾಗಿವೆ. ಇದರ ಜೊತೆಗೆ ಮುಖದ ಚರ್ಮವೂ ಸುಟ್ಟಿದೆ. ಎರಡು ಕಣ್ಣಿಗೂ ಗಾಯವಾಗಿದೆ. ಮುಖದ ಚರ್ಮ ಸುಟ್ಟಿದೆ. ಪ್ರತ್ಯೇಕ ಚಿಕಿತ್ಸೆಗೆ ಫೇಶಿಯಲ್ ಸರ್ಜರಿ ವಿಭಾಗಕ್ಕೆ ಕಳುಹಿಸಲಾಗಿದೆ.
ಸರ್ಕಾರ ಹಲವು ಸೂಚನೆಗಳ ಮೇರೆಗೆ ಹಸಿರು ಪಟಾಕಿ ಮಾತ್ರ ಮಾರಾಟಕ್ಕೆ ಅವಕಾಶ ನೀಡಿದೆ. ಆದರೆ ಇದು ಕೇವಲ ಹೆಸರಿಗೆ ಮಾತ್ರವಿದ್ದು, ಪ್ರತಿ ವರುಷದಂತೆ ಈ ವರುಷ ಪರಿಸರ ಮಾಲಿನ್ಯ ಹೆಚ್ಚು ಮಾಡುವ ಮಾಮೂಲಿ ಹಾಗೂ ಲೋಕಲ್ ಬ್ರಾಂಡ್ ಪಟಾಕಿ ಮಾರಾಟವಾಗಿದೆ. ಇದರ ಪರಿಣಾಮ ಕಳೆದ ವರುಷಕ್ಕೆ ಹೋಲಿಸಿದರೆ ಕಡಿಮೆಯಾದ್ರೂ ಈ ವರುಷ ಬೆಂಗಳೂರಿನ 10 ಜನ ಪಟಾಕಿ ಸಿಡಿದು ಗಾಯಗಳಾಗಿವೆ.
ಐದು ವರ್ಷಗಳ ಹಿಂದಿನ ಪಟಾಕಿ ಸಿಡಿತ ಪ್ರಕರಣಗಳು
* 2016-ಒಟ್ಟು 33 ಪ್ರಕರಣಗಳು, 18 ಮಕ್ಕಳಿಗೆ ಕಣ್ಣಿಗೆ ಹಾನಿ
* 2017- ಒಟ್ಟು 45 ಪ್ರಕರಣಗಳು, 24 ಮಕ್ಕಳ ಕಣ್ಣಿಗೆ ಗಂಭೀರ ಹಾನಿ
* 2018-ಒಟ್ಟು 46 ಪ್ರಕರಣಗಳು, 20 ಮಕ್ಕಳ ಕಣ್ಣಿಗೆ ಕುತ್ತು
* 2019-48 ಪ್ರಕರಣಗಳು, 18 ಮಕ್ಕಳ ಕಣ್ಣಿಗೆ