ಚಿಕ್ಕಮಗಳೂರು: ರಾಜ್ಯದ ಅತಿದೊಡ್ಡ ಕಾಫಿ ಉದ್ಯಮ ಸಂಸ್ಥೆ `ಕಾಫಿಡೇ’ ಸ್ಥಾಪಿಸಿದ್ದ ಸಿದ್ದಾರ್ಥ್ ಹೆಗ್ಡೆ ಈಗ ಇನ್ನಿಲ್ಲ. ಆದರೆ ಸಿದ್ದಾರ್ಥ ನಿಧನದ ನಂತರ ಮಾಲೀಕತ್ವ ಹೊಂದಿರುವ ಪತ್ನಿ ಮಾಳವಿಕ ಸೇರಿ 8 ಜನರಿಗೆ ಬಂಧನ ಭೀತಿ ಎದುರಾಗಿದೆ.
ಮಾಳವಿಕ ಸಿದ್ದಾರ್ಥ್ ಮಾಲೀಕತ್ವದ ಎಬಿಸಿ ಕಂಪನಿ, ಕಾಫಿ ಬೆಳೆಗಾರರಿಗೆ 100 ಕೋಟಿಗೂ ಅಧಿಕ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾಫಿ ಬೆಳೆಗಾರರು ಸಲ್ಲಿಸಿದ್ದ ಚೆಕ್ಬೌನ್ಸ್ ಕೇಸ್ ಸಂಬಂಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿ ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ ಜೆಎಂಎಫ್ಸಿ ಕೋರ್ಟ್ ಮಾಳವಿಕ ಸೇರಿ 8 ಜನರಿಗೆ ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದೆ. ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿ ಗ್ರಾಮದ ಕಾಫಿ ಬೆಳೆಗಾರ ನಂದೀಶ್ ದಾಖಲಿಸಿರುವ ಚೆಕ್ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಈ ಆದೇಶ ಹೊರಡಿಸಿದೆ.
ಕಾಫಿ ಬೆಳೆ ಕೊಟ್ಟ 300ಕ್ಕೂ ಹೆಚ್ಚು ಬೆಳೆಗಾರರಿಗೆ ಕಾಫಿಡೇ ಕಂಪನಿ, 100 ಕೋಟಿಗೂ ಅಧಿಕ ಹಣ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಕಾಫಿ ಬೆಳೆಗಾರರು ಎಬಿಸಿ ಕಂಪನಿ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಕಾಫಿ ಬೆಳಗಾರರು ದಾಖಲಿಸಿದ ಚೆಕ್ ಬೌನ್ಸ್ ದೂರಿನ ಆಧಾರದ ಮೇಲೆ ವಾರೆಂಟ್ ಜಾರಿ ಮಾಡಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel